Friday, 22nd November 2024

ಉಡುಗೆ ನೀತಿ ಪರಿಪಾಲಿಸದ ಮಹಿಳೆಯರ ವಿರುದ್ಧ ಕ್ರಮ: ಇರಾನ್‌

ತೆಹ್ರಾನ್‌: ದೇಶದ ಹಿಜಾಬ್‌ ಕಾನೂನು ಮತ್ತು ಉಡುಗೆ ನೀತಿಯನ್ನು ಪರಿಪಾಲಿಸದ ಮಹಿಳೆಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಮಳಿಗೆಗಳನ್ನು ಬಂದ್‌ ಮಾಡಿಸಲಾಗುವುದು ಎಂದು ಇರಾನ್‌ ಸರ್ಕಾರ ತಿಳಿಸಿದೆ.

“ಇರಾನ್‌ನ ಹೊಸ ಕಾನೂನಿನ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಕಾರಿನೊಳಗೆ ಹಿಜಾಬ್‌ ಧರಿಸದ ಇರಾನಿ  ನ್ಯಾಯಾಲಯದ ವಿಚಾರಣೆ ಎದುರಿಸಬೇಕಾಗುತ್ತದೆ.

ಅವರ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು. ಉದ್ಯೋಗಿಗಳು ಕಡ್ಡಾಯ ಹಿಜಾಬ್‌ ನೀತಿ ಅನುಸರಿಸದೇ ಇದ್ದರೆ, ಅಂತಹ ಅಂಗಡಿ, ಮಳಿಗೆಗಳನ್ನು ಬಂದ್‌ ಮಾಡಿಸಲಾಗು ವುದು,’ ಎಂದು ಇರಾನ್‌ ಪೊಲೀಸ್‌ ಮುಖಸ್ಥರು ತಿಳಿಸಿದ್ದಾರೆ.

ಇರಾನ್‌ನಲ್ಲಿ ಹಿಜಾಬ್‌ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಈವರೆಗೆ ನಾಲ್ವರನ್ನು ಗಲ್ಲಿಗೇರಿಸಲಾಗಿದೆ. ಸಾವಿರಾರು ಜನರನ್ನು ಬಂಧಿಸಲಾಗಿದೆ.