ಬೆಂಗಳೂರಿನಲ್ಲಿನ ಆಮ್ ಆದ್ಮಿ ಪಾರ್ಟಿ ರಾಜ್ಯ ಕಚೇರಿಯಲ್ಲಿ ಎಎಪಿ ರಾಜ್ಯಾದ್ಯಕ್ಷ ಫೃಥ್ವಿ ರೆಡ್ಡಿ ಅವರು ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು. ನಮ್ಮ ಅತಿ ಹೆಚ್ಚು ಅಭ್ಯರ್ಥಿಗಳನ್ನು ಘೊಷಣೆ ಮಾಡಿದ್ದಲ್ಲದೇ 168 ಕ್ಷೇತ್ರಗಳ ಜನತೆಗೆ ಒಂದು ಅತ್ಯುತ್ತಮ ಮತ್ತು ಪ್ರಾಮಾಣಿಕ ಆಯ್ಕೆಯನ್ನು ನೀಡಿದೆ. ಅತಿ ಹೆಚ್ಚು ರೈತರು, ಯುವಕರು ಮತ್ತು ಮಹಿಳಾ ಅಭ್ಯರ್ಥಿಗಳನ್ನು ಇರುವುದು ನಮ್ಮ ಪಕ್ಷದಲ್ಲೇ ಎಂದು ಅವರು ಹೇಳಿ ದರು.
ಎಎಪಿಯಿಂದ ಚುನಾವಣಾ ಕಣಕ್ಕೆ ಇಳಿಯುವವರ ಪೈಕಿ ಬಹುತೇಕ ಮಂದಿಯ ಸರಾಸರಿ ವಯಸ್ಸು 47.
ಒಟ್ಟು168 ಅಭ್ಯರ್ಥಿಗಳ ಪೈಕಿ 16 ಮಂದಿ ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಇಂಜಿನಿಯರ್ ಗಳು, ಡಾಕ್ಟರೇಟ್ ಹೊಂದಿರುವ ಅಭ್ಯರ್ಥಿಗಳು 5, ಸ್ನಾತಕೋ ತ್ತರ ಪದವಿ ಪಡೆದವರು 41 ಹಾಗೂ ಪದವಿ ಪಡೆದ 82 ಅಭ್ಯರ್ಥಿಗಳನ್ನು ಎಎಪಿ ಆಯ್ಕೆ ಮಾಡಿದೆ.
ಇನ್ನೂ ಎಎಪಿಯಂದ 28 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ.
ಎಎಪಿ 3ನೇ ಪಟ್ಟಿಯ ಪ್ರಮುಖ ಹೆಸರು ಹೀಗಿದೆ:
* ಶಿಕಾರಿಪುರ – ಚಂದ್ರಕಾಂತ ರೇವಣಕರ
* ಜಯನಗರ – ಮಹಾಲಕ್ಷ್ಮೀ
* ಗಾಂಧಿನಗರ – ಗೋಪಾನಾಥ್
* ಅರಕಲಗೂಡು – ಜವರೇಗೌಡ
* ನಿಪ್ಪಾಣಿ – ರಾಜೇಶ್ ಅಣ್ಣಸಾಹೇಬ್ ಬಸವಣ್ಣ
* ಬೆಳಗಾವಿ ಉತ್ತರ – ರಾಜಕುಮಾರ್ ಟೋಪಣ್ಣನವರ
* ಸಿಂದಗಿ -ಮುರಿಗೆಪ್ಪಗೌಡ,
* ಬೀದರ್ – ಗುಲಾಂ ಅಲಿ
* ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಅರವಿಂದ ಎಂ
* ಚಿಕ್ಕಬಳ್ಳಾಪುರ – ನಂದಿ ಬಾಷಾ
* ಯಲಹಂಕ – ಪುಟ್ಟಣ್ಣ ಮಂಜುನಾಥ್
* ಕಡೂರು – ರಾಜೇಶ್ವರಿ ಬಿ.ಎಚ್.
* ಸರ್ವಜ್ಞ ನಗರ – ಮೊಹಮ್ಮದ್ ಇಬ್ರಾಹಿಂ
ಇವರು ಸೇರಿದಂತೆ ಹಲವು ಹೆಸರು ಮೂರನೇ ಪಟ್ಟಿಯಲ್ಲಿವೆ.