ರಾಯಚೂರು: ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಅಧಿಕಾರಿಗಳು ಚುನಾವಣೆಯ ಕಾರ್ಯದಲ್ಲಿ ತೊಡಗಿರುತ್ತಾರೆ ಆದರೆ ತಮ್ಮ ಇಲಾಖೆಯ ತಮ್ಮ ಟೇಬಲ್, ತಮ್ಮ ಪಕ್ಷಗಳ ಭಾವಚಿತ್ರಗಳು ನಾಮಫಲಕವನ್ನು ತೆರವು ಗೊಳಿಸುವಲ್ಲಿ ರಾಯ ಚೂರು ಜಿಲ್ಲೆಯ ವಿವಿಧ ಇಲಾಖೆಯಗಳಲ್ಲಿ ಅಧಿಕಾರಿ ಗಳು ವಿಫಲರಾಗುತ್ತಿದ್ದಾರೆ.
ಜಿಲ್ಲೆಯ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಇನ್ನು ಹಳೆಯ ಪೋಸ್ಟರ್ಗಳು ಮತ್ತು ಹಳೆಯ ಬಿಜೆಪಿ ಮುಖಂಡರಾ, ಕಾಂಗ್ರೆಸ್ ಪಕ್ಷದ ಮುಖಂಡರ ಭಾವಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ ಗಳು ತೆರವು ಗೊಳಿಸದೆ ಇನ್ನು ಪ್ರಚಾರ ನೀಡುತ್ತಿರು ವುದು ದುರ್ದೈದ ಸಂಗತಿ.
ಜಿಲ್ಲೆಯ ಜಿಲ್ಲಾ ಶಿಕ್ಷಣ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಮತ್ತು ಜಿಲ್ಲಾ (ಜೆ.ಡಿ) ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯ ಗಳಲ್ಲಿ ಏಕೆ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.