ಈಕೆ ಬೇಕಿಂಗ್ ಕಂಪನಿ ಉದ್ಯಮಿಯಾಗಿದ್ದರು. ರಜೆ ದಿನಗಳ ಹಿನ್ನೆಲೆ ಈಕೆ ಥಾಯ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದರು. ಆ ವೇಳೆ ಆಕೆ ಸ್ಕೂಬಾ ಡೈವಿಂಗ್ ನಡೆಸೋದಕ್ಕೆ ಹೋಗಿ ಈ ಘೋರ ಅನಾಹುತಕ್ಕೆ ಸಾವನ್ನಪ್ಪಿದ್ದಾರೆ.
ಸೈಂಟ್ ಆಗ್ನೇಸ್ ಕಾಲೇಜು ಮರ್ಕರಾ ಟ್ರಂಕ್ ರೋಡ್ ಬಳಿ ಬೇಕಿಂಗ್ ಕಂಪನಿ ಆರಂಭಿಸಿ ಮಂಗಳೂರಿನಲ್ಲಿ ಭಾರಿ ಜನಪ್ರಿಯರಾಗಿದ್ದರು. ಅಷ್ಟೇ ಅಲ್ಲದೇ ಆಕೆ ಮಂಗಳೂರಲ್ಲಿ ಬೇಕಿಂಗ್ ಕಂಪನಿ ಆರಂಭಿಸಿ ಯಶಸ್ಸು ಕಂಡಿದ್ದರು.
5 ವರ್ಷದಲ್ಲಿ ಇತರ ನಗರದಲ್ಲಿ ಶಾಖೆಗಳನ್ನು ಆರಂಭಿಸುವ ಪ್ಲಾನ್ ಮಾಡಿದ್ದರು. ಥಾಯ್ಲೆಂಡ್‌ನಲ್ಲಿ ಸ್ಕೂಬಾ ಡೈವಿಂಗ್ ಜೀವವನ್ನೆ ಅಂತ್ಯ ಕಂಡಿರುವುದು ಭಾರೀ ಆತಂಕದ ಸಂಗತಿಯಾಗಿದೆ.