Sunday, 15th December 2024

ಅಂಬೇಡ್ಕರ್‌ ಅಪೇಕ್ಷೆಯ ಅನುಷ್ಠಾನ

ತನ್ನಿಮಿತ್ತ

ಛಲವಾದಿ ನಾರಾಯಣಸ್ವಾಮಿ

ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿಯೂ ಸಹ ಅನೇಕ ಕಡೆ ಅತ್ಯಂತ ತಳ ಹಂತದ, ಅತೀ ಗುರುತಿಸಲ್ಪಡದ ಸಮುದಾಯಗಳಿಗೆ ಭಾಜಪ
ಪ್ರಾತಿನಿಧ್ಯ ನೀಡುವ ಮೂಲಕ ಎಲ್ಲ ಇತರ ಪಕ್ಷಗಳಿಗಿಂತ ವಿಭಿನ್ನವಾಗಿದೆ. ಯಾರೂ ಊಹಿಸದ ಕಾರ್ಯ ಮಾಡುವಲ್ಲಿ ಈ ಪಕ್ಷ ಸದಾ ಮುಂದು.

ಹಿಂದೊಂದು ಕಾಲವಿತ್ತು. ಅವರವರ ವರ್ಣಕ್ಕೆ ಅನುಗುಣವಾಗಿ ವೃತ್ತಿ ಕೈಗೊಳ್ಳುತ್ತಿದ್ದರು. ಒಬ್ಬ ಬ್ರಾಹ್ಮಣ ಎಷ್ಟೇ ಶೂರನಾಗಿದ್ದರೂ ಕ್ಷತ್ರೀಯರಂತೆ ರಾಜ್ಯಭಾರ ನಡೆಸಲು ಸಾಧ್ಯವಿರಲಿಲ್ಲ. ಒಬ್ಬ ಶೂದ್ರ ಎಷ್ಟೇ ಆಸಕ್ತಿ ಹೊಂದಿ ದ್ದರೂ ವೈಶ್ಯರಂತೆ ವ್ಯಾಪಾರ ವಹಿವಾಟು ನಡೆಸುತ್ತಿರಲಿಲ್ಲ. ಕಾಲ ಕಳೆದಂತೆ ವರ್ಣಗಳೇ ಜಾತಿಗಳಾಗಿ ಬಿಂಬಿತ ವಾಗಿ ನಕಾರಾತ್ಮಕತೆಗೆ ದಾರಿ ಮಾಡಿತು.

ಆದರೆ ಪ್ರಸ್ತುತ ೨೧ನೇ ಶತಮಾನದ ಆಧುನಿಕ ಯುಗದಲ್ಲಿ ಸಮಾನತೆಯ ಮಂತ್ರದನುಸಾರ ಸಮಾಜದ ಎಲ್ಲ ವರ್ಗದ ಜನರಿಗೆ ಪ್ರಾಶಸ್ತ್ಯ ಲಭಿಸುತ್ತಿದ್ದೆ. ಅದರಲ್ಲೂ ವಿಶ್ವದ ಅತೀ ದೊಡ್ಡರಾಜಕೀಯ ಪಕ್ಷವೆಂಬ ಹೆಗ್ಗಳಿಕೆಯ ಭಾರತೀಯ ಜನತಾ ಪಕ್ಷ ಕೇವಲ ರಾಷ್ಟ್ರೀಯತೆ, ಸನಾತನ ಧರ್ಮರಕ್ಷಣೆಗೆ ಮಾತ್ರ ಹೆಸರಾಗಿಲ್ಲ ಬದಲಾಗಿ ಸಮಾನತೆ ತತ್ವದ ನೆಲೆಯಾಗಿದೆ.

ಶ್ರದ್ಧೆಯ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅಸ್ಪೃಶ್ಯರ ಏಳಿಗೆಗೆ ಶ್ರಮಿಸಿದವರಲ್ಲಿ ಅಗ್ರಗಣ್ಯರು. ಅವರ ಕಾಲಾವಧಿಯ ಪೂರ್ವದಲ್ಲೂ ಅನೇಕ ಸಂತ ಮಹಂತರು, ಸಾಮಾಜಿಕ ಸುಧಾರಕರು ಉಪೇಕ್ಷಿತ ವರ್ಗದ ಏಳಿಗೆಗೆ ಶ್ರಮಿಸಿದ್ದಾರೆ. ಅನೇಕ ಬಾರಿ ಗಮನಿಸಿದ್ದೇವೆ. ಹಲವು ರಾಜಕೀಯ ಪಕ್ಷಗಳು ಅಂಬೇಡ್ಕರ್‌ರನ್ನು ಕೇವಲ ಏಪ್ರಿಲ್ ೧೪, ಜನವರಿ ೨೬, ಡಿಸೆಂಬರ್ ೬ಕ್ಕೆ ಮಾತ್ರ ಸೀಮಿತವಾಗಿಸಿ, ಹೆಸರಿಗೆ ಒಂದು ಕಾರ್ಯಕ್ರಮ ಆಯೋಜಿಸಿ, ಭಾಷಣದುದ್ದಕ್ಕೂ ಅಂಬೇಡ್ಕರ್ ಜೀವನ ಸಾಧನೆ ಉಲ್ಲೇಖಿಸಿದರೆ ಹೊರತು ಅವರ ವಿಚಾರಗಳ ಅನುಷ್ಠಾನದಲ್ಲಿ ಕೊಂಚವೂ ಆಸಕ್ತಿ ತೋರದಿರುವುದು
ವಿಷಾದಕರ.

ಈ ವಿಷಯದಲ್ಲಿ ಭಾರತೀಯ ಜನತಾ ಪಕ್ಷ ವಿಭಿನ್ನವಾಗಿ ಮುಂದುವರಿದಿದೆ. ಅಂಬೇಡ್ಕರ್ ವಿಚಾರಗಳ ಕಾರ್ಯರೂಪ ಹಾಗೂ ಅವರಿಂದ ರಚಿಸಲ್ಪಟ್ಟ ಸಂವಿಧಾನದ ಹಿತಕಾಪಾಡುವಲ್ಲಿ ಸದಾ ಬದ್ಧವಾಗಿದೆ. ಶ್ರೀಕೃಷ್ಣ ಸುಧಾಮನಿಗೆ ಅಭಯ ಹಸ್ತ ನೀಡಿದ ಹಾಗೆ, ರಾಮಾನುಜಾಚಾರ್ಯರು ಜಾತಿ ಅಸಮಾನತೆ ವಿರೋಧಿಸಿದ ಹಾಗೆ, ಬಸವೇಶ್ವರರು ಮೇಲು-ಕೀಳುಗಳೆಂಬ ವಿಚಾರ ಅಳಿಸಿದ ಹಾಗೆ, ಎಲ್ಲ ವರ್ಗದ ಜನರಿಗೆ ಪ್ರಾತಿನಿಧ್ಯ ದೊರಕವುಲ್ಲಿ ಅಂಬೇಡ್ಕರ್ ಶ್ರಮಿಸಿದ ಹಾಗೆ ಪ್ರಸ್ತುತ ಭಾರತೀಯ ಜನತಾ ಪಕ್ಷ ಕಾರ್ಯೋನ್ಮುಖವಾಗಿದೆ.

ಏಕತೆಯಲ್ಲಿ ವಿವಿಧತೆ ಹಾಗೂ ವಿವಿಧತೆಯಲ್ಲಿ ಏಕತೆ ಎಂಬ ವಿಶಿಷ್ಟ ಗುಣ ಹೊಂದಿದ ಭಾರತ ಜಗತ್ತಿನಲ್ಲೇಅತೀ ಹೆಚ್ಚು ಭಾಷೆ, ಜಾತಿಗಳನ್ನು ಹೊಂದಿದೆ. ಹಿಂದಿನ ವರ್ಣ ವ್ಯವಸ್ಥೆ ಜಾತಿಯಾಗಿ ಬದಲಾಗಿದ್ದಕ್ಕೂ ಮೀಗಿಲಾಗಿ, ಜಾತಿ ಹೆಸರಿನಲ್ಲಿ ನಡೆದ ತಾರತಮ್ಯ ಸಮಾಜದ ಅಸ್ವಸ್ಥ್ಯಕ್ಕೆ
ಕಾರಣ ವಾಯಿತು. ಆದರೆ ಭಾಜಪ ಕೇವಲ ರಾಜಕೀಯ ಒಂದೇ ಧ್ಯೇಯವಾಗಿಸದೆ ಸಾಮಾಜಿಕ ಸಮಾನತೆಗೂ ಕಾರಣಕರ್ತೃವಾಗಿದೆ. ಹಿಂದೂಸ್ಥಾನ ದಲ್ಲಿರುವ ಹಿಂದೂಗಳೆಲ್ಲ ಒಂದೇ, ಯಾವ ಹಿಂದೂವು ಪತೀತನಲ್ಲ ಎಂಬುದು ಭಾಜಪ ಹಾಗೂ ಅದರ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತವೂ ಹೌದು.

ಮಾತಿಗಿಂತ ಕೃತಿ ಲೇಸು, ಸಮಾನತೆ ಸಮಾನತೆ ಎಂದು ಕೇವಲ ಭಾಷಣ ಬಿಗಿಯುವುದಲ್ಲ ಬದಲಾಗಿ ಅದರ ಕಾರ್ಯಾನ್ವಯ ಈ ಪಕ್ಷದಲ್ಲಿ ನಡೆದಿದೆ. ಹೇಳುತ್ತ ಹೋದರೆ ಉದಾಹರಣೆಗಳ ಸರಮಾಲೆ ಆಗಬಹುದು. ಆದರೂ ಕೆಲವೊಂದನ್ನು ಉಲ್ಲೇಖಿಸಲೇಬೇಕು. ಕೇವಲ ಕೃಷಿಯನ್ನೇ ನಂಬಿ ಬದುಕಿದ ಕೋಳಿ ಎಂಬ ದಲಿತ ಸಮುದಾಯ ಪ್ರತಿನಿಧಿಸಿದ ವ್ಯಕ್ತಿ ರಾಮನಾಥ ಕೋವಿಂದ ಈ ದೇಶದ ರಾಷ್ಟ್ರಪತಿಗಳಾದರು. ೩೫ ಶತಮಾನಗಳ ಇತಿಹಾಸ
ಹೊಂದಿರುವ ಸಂತಾಲ ವನವಾಸಿ ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಪ್ರಸ್ತುತ ಭಾರತದ ರಾಷ್ಟ್ರಪತಿಗಳು.

ಅತ್ಯಂತ ಕೆಳಮಟ್ಟದ್ದು ಎಂದು ಬಿಂಬಿತವಾದ ಖಟ್ಟರ್ ಸಮುದಾಯ ಪ್ರತಿನಿಽಸುವ ಮನೋಹರ ಲಾಲ ಖಟ್ಟರ್ ಪ್ರಸ್ತುತ ಹರಿಯಾಣ ರಾಜ್ಯದ ಮುಖ್ಯಮಂತ್ರಿ. ಕರ್ನಾಟಕದಲ್ಲಿ ನೋಡುವುದಾದರೆ ಆಫ್ರಿಕಾ ಖಂಡದಿಂದ ವಲಸೆ ಬಂದು ಭಾರತದೆಲ್ಲೆಡೆ ನೆಲೆಸಿರುವ ಸಿದ್ಧಿ ಸಮುದಾಯದ ಮೊದಲ ಪದವೀಧರ ಶಾಂತಾರಾಮ ಸಿದ್ಧಿ ಪ್ರಸ್ತುತ ವಿಧಾನ ಪರಿಷತ್ತಿನ ಸದಸ್ಯ. ಪಕ್ಷದ ಸಾಮಾನ್ಯ ಕಾರ್ಯಕರ್ತೆ ಆದಿದ್ರಾವಿಡ ಸಮುದಾಯ ಪ್ರತಿನಿಽಸುವ
ಭಾಗೀರಥಿ ಮುರುಲ್ಯ ಪ್ರಸ್ತುತ ೨೦೨೩ ವಿಧಾನಸಭೆ ಚುನಾವಣೆಯ ಸುಳ್ಯ ಮೀಸಲು ಕ್ಷೇತ್ರದ ಅಭ್ಯರ್ಥಿ.

ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿಯೂ ಸಹ ಅನೇಕ ಕಡೆ ಅತ್ಯಂತ ತಳ ಹಂತದ, ಅತೀ ಗುರುತಿಸಲ್ಪಡದ ಸಮುದಾಯಗಳಿಗೆ ಭಾಜಪ ಪ್ರಾತಿನಿಧ್ಯ ನೀಡುವ ಮೂಲಕ ಎಲ್ಲ ಇತರ ಪಕ್ಷಗಳಿಗಿಂತ ವಿಭಿನ್ನವಾಗಿದೆ. ಯಾರೂ ಊಹಿಸದ ಕಾರ್ಯ ಮಾಡುವಲ್ಲಿ ಈ ಪಕ್ಷ ಸದಾ ಮುಂದು. ಹಾಗಾಗಿ ಇಲ್ಲಿ ಎಲ್ಲವೂ ಸಾಧ್ಯ. ಮೀಸಲಾತಿ ಸೌಲಭ್ಯ ಪಡೆಯುವ ಸಮುದಾಯಗಳಿಗೆ ಇತರೆ ಪಕ್ಷಗಳು ಉಚಿತ ಭಾಗ್ಯಗಳನ್ನು ನೀಡುವುದರಲ್ಲೇ ಮಗ್ನವಾದವೇ ಹೊರತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ವಿ-ಲವಾದವು. ಆದರೆ ಕೇಂದ್ರ ಹಾಗೂ ಕರ್ನಾಟಕದ ಭಾಜಪ ಸರ್ಕಾರ ಆತ್ಮನಿರ್ಭರ ಧ್ಯೇಯದಡಿ ಸ್ಟಾರ್ಟ್‌ಅಪ್, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಮುಂತಾದ ಸೃಜನಾತ್ಮಕ ಯೋಜನೆಗಳ ಮೂಲಕ ಕೆಳ ವರ್ಗದ ಜನರನ್ನು ಕೇವಲ ಸಾಮಾಜಿಕವಾಗಷ್ಟೇ ಅಲ್ಲದೇ ಆರ್ಥಿಕವಾಗಿಯೂ ಉನ್ನತಿ ಹೊಂದಲು ಪ್ರೇರೇಪಿಸುತ್ತಿರುವುದು ಶ್ಲಾಘನೀಯ ಸಂಗತಿ.

ದೇಶಕ್ಕಾಗಿ ಸದಾ ದುಡಿದ ಪಕ್ಷ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಮತಬ್ಯಾಂಕ್ ರಾಜಕಾರಣಕ್ಕೆ ಮಾತ್ರ ಸೀಮಿತಗೊಳಿಸಿತೆ ಹೊರತು ಅವರ ವಿಚಾರಗಳ ಪ್ರಚಾರವಾಗಲಿ, ಅನುಷ್ಠಾನವಾಗಲಿ, ಅವರ ಲೇಖನಗಳ ಮುದ್ರಣವಾಗಲಿ ಯಾವುದನ್ನೂ ಮಾಡಲಿಲ್ಲ. ಈ ಕುರಿತು ಸ್ವತಃ
ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಬೇಸರ ಸಹ ವ್ಯಕ್ತಪಡಿಸಿದ್ದರು. ಆದರೆ ಭಾಜಪ ಹಾಗೂ ಎನ್‌ಡಿಎ ಸರ್ಕಾರ ಅಧಿಕಾರ ದಲ್ಲಿದ್ದಾಗಲೆಲ್ಲ ಅಂಬೇಡ್ಕರ್ ರ ಆಚಾರ-ವಿಚಾರ, ಬಹುಮುಖಿ ವ್ಯಕ್ತಿತ್ವದ ಅನಾವರಣದ ಕೆಲಸ ಮಾಡಿದೆ. ಅಂಬೇಡ್ಕರ್ ಜೀವನಕ್ಕೆ ಸಂಬಂಽಸಿದ ಸ್ಥಳಗಳನ್ನು ಸ್ಮತಿ ಸ್ಥಳಗಳಾಗಿ ಪರಿವರ್ತಿಸಿದ್ದು, ಸಂವಿಧಾನ ದಿನದ ಅರ್ಥಪೂರ್ಣ ಆಚರಣೆ, ಸಚಿವ ಸಂಪುಟಗಳಲ್ಲಿ ದಲಿತರಿಗೆ ಸ್ಥಾನ ಎಲ್ಲದಕ್ಕೂ
ಮಿಗಿಲಾಗಿ, ಅಂಬೇಡ್ಕರ್ ಅಪೇಕ್ಷಿಸಿದಂತೆ ದಲಿತರಿಗೆ ಸಿಗಬೇಕಾದದ್ದು ಮಾನವಾಽಕಾರ, ಸೂಕ್ತ ಗೌರವ ಹಾಗೂ ಸಮಾನ ಪ್ರತಿನಿಽತ್ವ. ಯಾವ ಉತ್ಪ್ರೇಕ್ಷೆಯೂ ಇಲ್ಲದೇ ಹೇಳಬಹುದು, ಅಂಬೇಡ್ಕರ್ ಅವರ ಅಪೇಕ್ಷೆಯನ್ನು ಅನುಷ್ಠಾನಕ್ಕೆ ತಂದಿರುವುದು ಏಕ ಮಾತ್ರ, ಅದು ಭಾರತೀಯ ಜನತಾ ಪಕ್ಷ.

(ಲೇಖಕರು: ವಿಧಾನ ಪರಿಷತ್ ಸದಸ್ಯರು)