ಶಿರಸಿ: ನನಗೆ ಕ್ಷೇತ್ರ ಇಲ್ಲ ಎಂದು ಹೇಳಿರುವ ಈಶ್ವರಪ್ಪನಿಗೆ ಟಿಕೆಟೇ ಸಿಗಲಿಲ್ಲ ಈಗೇನಾಯ್ತು ಎಂದು ಈಶ್ವರಪ್ಪ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.
ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು ನನಗೆ ಕ್ಷೇತ್ರ ಇಲ್ಲ ಎಂದು ಟೀಕಿಸಿದ್ದರು.
ಈಗ ಈಶ್ವರಪ್ಪನಿಗೆ ಟಿಕೇಟೆ ಇಲ್ಲದಂತಾಗಿದೆ. ನನಗೆ ರಾಜ್ಯದ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವಂತೆ ಕರೆಯುತ್ತಾರೆ. ಒರ್ವ ಹಿರಿಯ ಮಾಜಿ ಡಿಸಿಎಂ ಆಗಿದ್ದ ಈಶ್ವರಪ್ಪನಿಗೆ ಪಕ್ಷ ಹೀಗೆ ಮಾಡಬಾರದಿತ್ತು ಈಶ್ವರಪ್ಪ ಮಾತ್ರ ಅಲ್ಲ ಸವದಿ, ಶೆಟ್ಟರ್ ಜೊತೆ ನಡೆದುಕೊಂಡ ರೀತಿ ಸರಿಯಲ್ಲ.
ಶೆಟ್ಟರ್ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಮಾತನಾಡಿಲ್ಲ. ಅವರು ಬರುತ್ತೇನೆಂದಾಗ ಸ್ವಾಗತದ ವಿಷಯ ಬರುತ್ತದೆ. ನೋಡಬೇಕು. ಪಕ್ಷಕ್ಕೆ ಬಂದರೆ ನಾವು ಸ್ವಾಗತ ಮಾಡುತ್ತೇವೆ. ಇನ್ನು ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಬರುತ್ತಾರೆ. ನನ್ನನ್ನ ಕಟ್ಟಿಹಾಕಲು ಬಿಜೆಪಿ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗದ ಮಾತು. ಶಿಗ್ಗಾವಿಯಲ್ಲಿ ವಿನಯ್ ಕುಲಕರ್ಣಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದ ನಿಲ್ಲುವುದಿಲ್ಲ ಅಲ್ಲಿ ಅಲ್ಪಸಂಖ್ಯಾತ ಕ್ಯಾಂಡಿಡೇಟ್ ನಿಲ್ಲುತ್ತಾರೆ. ಇಂದು ಅಥವಾ ನಾಳೆ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದ ಅವರು, ಹಳಿಯಾಳದಲ್ಲಿ ಅಭ್ಯರ್ಥಿ ಆರ್ ವಿ ದೇಶಪಾಂಡೆ ಪರ ಪ್ರಚಾರಕ್ಕೆ ಆಗಮಿಸಿದ್ದು, ಅವರೇ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
*
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಸ್ಲಿಂ ಮೀಸಲಾತಿ ರದ್ದು ಮಾಡಿರುವ ಕ್ರಮ ಒಳ್ಳೆಯದಲ್ಲ ೧೯೯೫ ರಿಂದ ಅವರಿಗೆ ಮೀಸಲಾತಿ ಇತ್ತು
ಬೇರೆಯವರಿಗೆ ಮೀಸಲಾತಿ ಹೆಚ್ಚಿಸಿದ್ದು ತಪ್ಪಿಲ್ಲ ಆದರೆ ಮುಸ್ಲಿಂ ಅವರಿಗೆ ಯಾಕೆ ತೆಗೆಯಬೇಕಿತ್ತು ಸುಪ್ರೀಂ ಕೋರ್ಟ್ ಯಾವ ತೀರ್ಪು ಕೊಡಲಿದೆ ಈ ಬಗ್ಗೆ ಕಾದು ನೋಡೋಣ ಎಂದರು.