Sunday, 15th December 2024

ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಮನೆಗೆ ಕಳಿಸಲಿದ್ದಾರೆ: ಜಿಎನ್ ಬೆಟ್ಟಸ್ವಾಮಿ

ಗುಬ್ಬಿ : ಕಳೆದ ಬಾರಿ ನನ್ನ ಸೋಲಿಗೆ ಕಾರಣರಾದ ಈಗಿನ ಬಿಜೆಪಿ ಅಭ್ಯರ್ಥಿಯನ್ನು ಜನರು ಸೋಲಿಸಿ  ಮನೆಗೆ ಕಳಿಸಲಿದ್ದಾರೆ ಎಂದು  ಜಿಎನ್ ಬೆಟ್ಟಸ್ವಾಮಿ ತಿಳಿಸಿದರು.

 ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಮ್ಮುಖದಲ್ಲಿ  ಪಕ್ಷ ಸೇರ್ಪಡೆಗೊಂಡು ಪಟ್ಟಣದ ಜೆಡಿಎಸ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾನು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಿಂದ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಸಂಘಟನೆ ಗೊಳಿಸುವ ಮೂಲಕ ವಿಸ್ತರಿಸಿದ್ದೇನೆ. ಪಕ್ಷದ ಹಿರಿಯ ನಾಯಕರಾದ ಯಡಿಯೂರಪ್ಪ ನವರು ತೋರಿದ ಮಾರ್ಗದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಆದರೆ ಬಿಜೆಪಿ ಆಂತರಿಕ ಭಿನ್ನಮತದಿಂದ ನನ್ನನ್ನು ತೇಜೋವದೆ ಮಾಡುತ್ತಾ ಬಂದಿದ್ದಾರೆ . ನನ್ನ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸುತ್ತಾ   ಕೈ ಹಿಡಿದಿದ್ದಾರೆ ಅವರಿಗೆ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ ನನಗೆ ಟಿಕೆಟ್ ಕೈತಪ್ಪಲು ಪಕ್ಷವನ್ನು ತೊರೆದು ಬರಲು ಜೆ ಸಿ ಮಾಧುಸ್ವಾಮಿ ಕಾರಣ ಎಂದು ನೋವಿನಿಂದ ನುಡಿದ ಅವರು  ತಾಲೂಕಿನಲ್ಲಿ ಜೆಡಿಎಸ್ ನ ಬಿಎಸ್ ನಾಗರಾಜ್ ಅವರನ್ನು ಗೆಲ್ಲಿಸುವ ಮೂಲಕ ನನ್ನ ಶಕ್ತಿ ಏನೆಂಬು ದನ್ನು ತೋರಿಸುತ್ತೇನೆ ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ  ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಮುಖಂಡ ಹೊನ್ನಗಿರಿ ಗೌಡ ಮಾತನಾಡಿ ಪ್ರತಿ ಬಾರಿಯೂ ಸಹ ಅವರಿವರಿಗೆ ಟಿಕೆಟ್ ತಪ್ಪಿಸಿ ಕುತಂತ್ರದ ರಾಜಕಾರಣ ಮಾಡುವ ಎಸ್ ಆರ್ ಶ್ರೀನಿವಾಸ್  ಜೆಡಿಎಸ್ ನಲ್ಲಿದ್ದಾಗ ದೇವೇಗೌಡರು ಸಂಬಂಧಿ ಎಂದು ಕಾಂಗ್ರೆಸ್ ಗೆ ಬಂದಾಗ ಡಿಕೆ ಶಿವಕುಮಾರ್ ಸಂಬಂಧಿ ಎಂದು ಜನರನ್ನು ಮರಳು ಮಾಡುತ್ತಾ ರಾಜಕಾರಣ ಮಾಡುತ್ತಿದ್ದಾರೆ ಎಂದ ಅವರು  ಇಷ್ಟು ವರ್ಷಗಳ ಕಾಲ ನಿಮ್ಮ ಅಧಿಕಾರ ವನ್ನು ಜನರು ನೋಡಿದ್ದಾರೆ ಈ ಬಾರಿ ಮನೆಗೆ ಕಳಿಸಲು ಸಿದ್ದರಾಗಿದ್ದಾರೆ. ಬಿಎಸ್ ನಾಗರಾಜ್ ಅವರನ್ನು ಶಾಸಕರನ್ನಾಗಿ ಮಾಡಿ ನಿಮ್ಮನ್ನು ಸೋಲಿಸಿ ತೀರಿಸುತ್ತೇವೆಂದು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ  ಅನೇಕ ಮುಖಂಡರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು ಸಮಯದ ಅಭಾವವಿದ್ಧ ಕಾರಣ ಕಾರ್ಯಕರ್ತರ ಕೈ ಬೀಸಿ  ಶುಭಕೋರಿ ತೆರಳಿದರು.
ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷ ಚಿಕ್ಕವೀರಯ್ಯ, ಕಳ್ಳಿಪಾಳ್ಯ ಲೋಕೇಶ್, ಸುರೇಶ್ ಗೌಡ, ಯೋಗಾನಂದ ಕುಮಾರ್, ಸುರುಗೇನಹಳ್ಳಿ ನರಸಿಂಹಯ್ಯ, ಎಲ್ಲಪ್ಪ, ಸಿದ್ದಗಂಗಮ್ಮ, ಗಂಗಸಂದ್ರ ಮಂಜುನಾಥ್ ಉಪಸ್ಥಿತರಿದ್ದರು.