Friday, 22nd November 2024

ಕೇರಳದಲ್ಲಿ ಮೊದಲ ಬಾರಿಗೆ ನೀರಿನ ಬಜೆಟ್ ಅಳವಡಿಕೆ

ತಿರುವನಂತಪುರಂ: ಹೇರಳವಾದ ನದಿಗಳು, ಮತ್ತು ಉತ್ತಮ ಪ್ರಮಾಣದ ಮಳೆಯು ಕೇರಳದ ಹಚ್ಚ ಹಸಿರಿಗೆ ಕೊಡುಗೆ ನೀಡುತ್ತದೆ. ಆದರೆ ಬೇಸಿಗೆಯಲ್ಲಿ ಅನೇಕ ಭಾಗಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಹಾಗಾಗಿ ರಾಜ್ಯವು ದೇಶದಲ್ಲೇ ಮೊದಲ ಬಾರಿಗೆ ನೀರಿನ ಬಜೆಟ್ ಅನ್ನು ಅಳವಡಿಸಿಕೊಳ್ಳಲು ಕಾರಣವಾಗಿದೆ.

ರಾಜ್ಯದ 15 ಬ್ಲಾಕ್ ಪಂಚಾಯತ್‌ಗಳ 94 ಗ್ರಾಮ ಪಂಚಾಯತ್‌ಗಳನ್ನು ಒಳಗೊಂಡ ಮೊದಲ ಹಂತದ ನೀರಿನ ಬಜೆಟ್ ನ ವಿವರಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನಾವರಣಗೊಳಿಸಿದರು.

ರಾಜ್ಯದಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಆದ್ದರಿಂದ, ಸಂಪನ್ಮೂಲವನ್ನು ಸರಿ ಯಾಗಿ ಬಳಸಿಕೊಳ್ಳಲು ಮತ್ತು ವ್ಯರ್ಥ ವಾಗುವುದನ್ನು ತಡೆಯಲು ನೀರಿನ ಬಜೆಟ್ ಸಹಕಾರಿಯಾಗಲಿದೆ ಎಂದು ಹೇಳಿದರು.

ಜಲ ತಜ್ಞರು ಈ ಉಪಕ್ರಮವನ್ನು ಸ್ವಾಗತಿಸಿದರು ಮತ್ತು ಇದು ಅಮೂಲ್ಯವಾದ ದ್ರವ ಸಂಪನ್ಮೂಲದ ಬೇಡಿಕೆ ಮತ್ತು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ಹಂಚಿಕೆ ಮಾಡಲು ರಾಜ್ಯಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.