ತುಮಕೂರು: ಸಿದ್ಧಗಂಗಾ ಆಸ್ಪತ್ರೆ ನೂರಕ್ಕೂ ಹೆಚ್ಚು ಯಶಸ್ವಿ ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆಗಳ ಮೂಲಕ ಮಂಡಿ ಸವತೆಕ್ಕೆ ಒಳಗಾದವರಿಗೆ ಸ್ವಂತ ಶಕ್ತಿಯ ಮೇಲೆ ನಡೆಯುವಂತೆ ಮಾಡಿ ಮರಳಿ ಜೀನವ ನೀಡಿದೆ ಎಂದು ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಆರ್ಥೊಪಡಿಕ್ ಅಂಡ್ ಸ್ಪೆöÊನ್ ಸರ್ಜನ್ ಡಾ.ದೀಪಕ್ ಶಿವರಾತ್ರೆ ತಿಳಿಸಿದರು.
ಅವರು ಸಿದ್ಧಗಂಗಾ ಆಸ್ಪತ್ರೆ ಹಾಗೂ ಸುಮಿತ್ರ ಮಹದೇವಪ್ಪ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆದ ಮರಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಮಾತನಾಡಿ ಜಿಲ್ಲೆಯಲ್ಲಿಯೆ ಅತಿಹೆಚ್ಚು ಮಂಡಿ ಮರುಜೋಡಣೆ ನಡೆಸಿದ ಏಕೈಕ ಆಸ್ಪತ್ರೆ ಎನ್ನುವ ಕೀರ್ತಿ ನಮ್ಮ ಆಸ್ಪತ್ರೆಯದ್ದಾಗಿದೆ. ಕಡಿಮೆ ಸಮಯದಲ್ಲಿ ಪರಿಣಾಮಕಾರಿ ಶಸ್ತçಚಿಕಿತ್ಸೆ ನಡೆಸುವುದು ನಮ್ಮ ವಿಭಾಗದ ಧ್ಯೇಯವಾಗಿದೆ ಎಂದರು.
ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಹಾಗೂ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಹೆಚ್.ಎಂ. ಮಾತನಾಡಿ ಲಿಂಗೈಕ್ಯ ಶಿವಕುಮಾರ ಮಹಾಸ್ವಾಮೀಜಿಗಳ ೧೧೫ನೇ ಹುಟ್ಟುಹಬ್ಬದ ಅಂಗವಾಗಿ ಶುರುವಾದ ಈ ಮಂಡಿಮರುಜೋಡಣೆ ಶಸ್ತ್ರಚಿಕಿತ್ಸಾ ಕಾರ್ಯ ಶೇ.೧೦೦ ರಷ್ಟು ಯಶಸ್ಸಿನ ಫಲಿತಾಂಶದೊಂದಿಗೆ ನಡೆಯು ತ್ತಿರುವುದಕ್ಕೆ ಪೂಜ್ಯರ ಆಶಿರ್ವಾದವೇ ಕಾರಣವಾಗಿದೆ. ಚೇತರಿಕೆ ಹೊಂದಿದವರು ನೀಡುತ್ತಿರುವ ಪ್ರತಿಕ್ರಿಯೆ ನಮ್ಮ ಹೃದಯ ತುಂಬಿ ಬಂದಿದೆ ಎಂದರು.
ಮಂಡಿಮರುಜೋಡಣೆಗೆ ಒಳಗಾದ ೫೦ ವರ್ಷದ ರಾಮಯ್ಯನವರು ಮಾತನಾಡಿ ಸಿದ್ಧಗಂಗಾ ಆಸ್ಪತ್ರೆ ನನಗೆ ಮರಳಿ ಜೀವನ ಕೊಟ್ಟಿದೆ. ಈಗ ನನ್ನ ಸ್ವಂತ ಶಕ್ತಿಯ ಮೇಲೆ ಎಲ್ಲಾ ಕಾರ್ಯಗಳನ್ನು ಮಾಡಬಹುದಾಗಿದೆ. ಇಳಿವಯಸ್ಸಿನಲ್ಲಿ ಸ್ವಂತ ಕಾಲಿನ ಮೇಲೆ ನಡೆಯುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸುವ ಜೊತೆಗೆ ಜೀವನವನ್ನು ಸುಂದರವಾಗಿಸಿದೆ ಎಂದರು.
ಸಿಇಓ ಡಾ.ಸಂಜೀವ್ಕುಮಾರ್, ಕೀಳುಮೂಳೆ ತಜ್ಞರುಗಳಾದ ಡಾ.ಆದರ್ಶ್, ಡಾ.ಕಾರ್ತಿಕ್, ಡಾ.ದುಷ್ಯಂತ್ ಇದ್ದರು.