ದಾಳಿಯಲ್ಲಿ ಇರುವರೆಗೂ 3500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದಾಗ್ಯೂ, ಘರ್ಷಣೆಯನ್ನು ಶಮನಗೊಳಿಸಲು ತಾತ್ಕಾಲಿಕ ಕದನ ವಿರಾಮಕ್ಕೆ ಎರಡು ಕಡೆಯ ನಡುವೆ ಒಪ್ಪಂದಕ್ಕೆ ಬರಲಾಗಿತ್ತು. ಶುಕ್ರವಾರ ಈದ್ ಪ್ರಾರ್ಥನೆ ವೇಳೆ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.
ಘರ್ಷಣೆಗಳಿಂದ ನೂರಾರು ಜನರು ಸಾಯುತ್ತಿರುವುದರಿಂದ ಸುಡಾನ್‌ನಲ್ಲಿರುವ ತಮ್ಮ ನಾಗರಿಕರನ್ನು ಅವರ ದೇಶಗಳಿಗೆ ಕರೆದೊಯ್ಯಲು ವಿವಿಧ ದೇಶಗಳು ಸಿದ್ಧವಾಗಿವೆ. ಆದರೆ, ಕದನ ವಿರಾಮ ಜಾರಿಯಾಗದೇ ಇದ್ದಾಗ ವಿಮಾನ ನಿಲ್ದಾಣಗಳಲ್ಲೂ ಯುದ್ಧದ ವಾತಾ ವರಣವಿದ್ದ ಕಾರಣ ನಾಗರಿಕರನ್ನು ಸ್ಥಳಾಂತರಿಸುವುದು ಕಷ್ಟವಾಗುತ್ತಿದೆ. ಮತ್ತೊಂದೆಡೆ ಸುಡಾನ್ ಸೇನೆಯು ಅರೆಸೇನಾ ಪಡೆಯೊಂದಿಗೆ ಮಾತುಕತೆಗೆ ಸಿದ್ಧರಿಲ್ಲದ ಕಾರಣ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ.