Friday, 18th October 2024

ಮುಸ್ಲಿಂ ಸಮುದಾಯಕ್ಕೆ ಕೊನೆಯ ಅವಕಾಶ..ಕೈ ಪಕ್ಷ ಸೋತರೆ ಅಸ್ತಿತ್ವ ಅಂತ್ಯ..

ರಾಯಚೂರು: ನಗರ ವಿಧಾನಸಭಾ ಕ್ಷೇತ್ರವು ಸಾಮಾನ್ಯ ಮೀಸಲು ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅನೇಕ ಅಭ್ಯರ್ಥಿಗಳು ಟಿಕೆಟ್ ಪಡೆಯುವುದಕ್ಕೆ ಬಾರಿ ಪೈಪೋಟಿ ನಡೆಸಿದವು ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಹೈಕಮಾಂಡ್ ಆಗಿ ಕೆಲಸ ಮಾಡಿರುವ ಎಐಸಿಸಿ ಕಾರ್ಯದರ್ಶಿ ಎನ್ ಎನ್ ಬೋಸರಾಜ ಹಾಗೂ ನಗರದ ಮುಸ್ಲಿಂ ಸಮುದಾಯದ ಬಾರಿ ಪೈಪೋಟಿ ಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಟಿಕೆಟ್ ಪಡೆದು ರವಿ ಬೋಸರಾಜ ಇವರಿಗೆ ಬಾರಿ ನಿರಾಸೆ ಉಂಟು ಮಾಡಿದ್ದಾರೆ.

ಈಗ ಮುಸ್ಲಿಂ ಮುಂದಿರುವುದು ಟಿಕೆಟ್ ಪಡೆದ ವ್ಯಕ್ತಿಯನ್ನು ಗೆಲ್ಲಿಸಿ ನಗರ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಇಲ್ಲವಾದಲ್ಲಿ ಕೈ ನಾಯಕರ ಮುಂದೆ ತಮ್ಮ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಹುದು ಎಂದು ಕ್ಷೇತ್ರದ ಮತದಾರ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಇದೆ ಮೇ 10ರಂದು ನಡೆಯಲಿರುವ ರಾಯಚೂರು ನಗರ ವಿಧಾನಸಭಾ ಚುನಾವಣೆಗೆ ಭರದ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ, ನಗರದಲ್ಲಿ ಕಾಂಗ್ರೆಸ್ ಗೆಲುವು ಅನಿವಾರ್ಯ ಎಂದು ಶತಾಯಗತಾಯ ಗೆಲ್ಲಲೇ ಬೇಕು ಎಂಬ ಉತ್ಸಾಹದೊಂದಿಗೆ ಕಾರ್ಯೋನ್ಮುಖ ವಾಗಿದೆ.

ಅದರಲ್ಲೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮುಸ್ಲಿಂ ಮತದಾರರಿಗೆ ಯಾವುದೇ ರೀತಿಯ ಅನ್ಯಾಯ ಮಾಡಬಾರದು ಎಂದು ನಿರ್ಧರಿಸಿರುವ ಕೈ ನಾಯಕರ ಪಡೆ, ನಗರ ಕ್ಷೇತ್ರಕ್ಕೆ ಕೊನೆಯ ಕ್ಷಣದಲ್ಲಿ ಮಹಮ್ಮದ್ ಶಾಲಾಂ ಅವರಿಗೆ ಟಿಕೆಟ್ ಘೋಷಿಸಿದ ಹಿನ್ನೆಲೆ ಪಕ್ಷದ ಗೆಲುವಿಗಾಗಿ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.

ಮುಸ್ಲಿಂ ಸಮುದಾಯಗಳಿಗೆ ಈ ಒಂದು ಚುನಾವಣೆಯು ಜನಾಂಗದ ಪ್ರತಿಷ್ಠೆ ಮತ್ತು ಎರಡು ಬಾರಿ ಕ್ಷೇತ್ರದಲ್ಲಿ ಸೋಲು ಕಂಡಿ ರುವ ಇದೆ ಸಮುದಾಯದ ಸೈಯದ್ ಯಾಸಿನ್ ಅವರು ಒಂದು ಬಾರಿ ಶಾಸಕರಾಗಿ ಎರಡು ಬಾರಿ ಸೋಲು ಕಂಡಿದ್ದು, ಆದರೂ ಕೈ ನಾಯಕರ ಪಡೆ ಈ ಬಾರಿ ಮತ್ತೊಮ್ಮೆ ಮುಸ್ಲಿಂ ಸಮುದಾಯದ ಮತ್ತೊಂದು ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು ಈ ಅವಕಾಶ ವನ್ನು ಸದುಪಯೋಗಪಡಿಸಿಕೊಳ್ಳದೆ, ಇದ್ದಲ್ಲಿ ಕ್ಷೇತ್ರ ಮುಸ್ಲಿಮರಿಂದ ಕೈ ತಪ್ಪಿ ಹೋಗುವ ಸಾಧ್ಯತೆ ಇರುವುದರಿಂದ ಅತಿ ಬುದ್ಧಿವಂತಿಕೆಯಿಂದ ಎಲ್ಲರ ಮನವೊಲಿಸಿ ಗೆಲ್ಲುವಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ.

ವಿಶೇಷವಾಗಿ ಕ್ಷೇತ್ರದಲ್ಲಿ ಶಾಸಕ ಅಭ್ಯರ್ಥಿ ಎಂದು ಪ್ರಚಾರ ಕೈಗೊಂಡಂತಹ ಕಾಂಗ್ರೆಸ್ ಪಕ್ಷದ ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜ್ ಮತ್ತು ಅವರ ಪುತ್ರ ರವಿ ಬೋಸರಾಜ್ ಅವರ ಪ್ರಭಾವ ಹೆಚ್ಚಾಗಿದ್ದು ತಮ್ಮ ಬೆಂಬಲಿತ ಅಭ್ಯರ್ಥಿ ಎಂದು ಮುಸ್ಲಿಂ ಸಮುದಾಯದ ಮೊಹಮ್ಮದ್ ಶಾಲಾಮ್ ಅವರಿಗೆ ಟಿಕೆಟ್ ನೀಡಿಸುವಲ್ಲಿ ಯಶಸ್ವಿಯಾಗಿರುವ ರವಿ ಬೋಸರಾಜ್ ಅವರು ತಮ್ಮ ನಾಮಪತ್ರವನ್ನು ಇಂದು ಹಿಂಪಡೆದು, ಮಹಮ್ಮದ್ ಶಾಲಾಮ್ ಅವರಿಗೆ ಬೆಂಬಲಿಸಿ ಗೆಲುವಿನ ನಗೆ ಬೀರುತ್ತಾರೋ ಅಥವಾ ಕ್ಷೇತ್ರ ಮುಸ್ಲಿಮರಿಗೆ ಇನ್ನೊಂದು ಬಾರಿ ಸ್ಪರ್ಧೆಗೆ ಕ್ಷೇತ್ರ ಸಿಗದಂತೆ ಮಾಡುತ್ತಾರೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ.