ಕೇರಳ : ತ್ರಿಶೂರಿನ ತಿರುವಿಲ್ವಾಮಲ ಬಳಿ ವಿಡಿಯೋ ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡು ಬಾಲಕಿ ಬಲಿಯಾದ ಘಟನೆ ಬೆಳಕಿಗೆ ಬಂದಿದೆ.
ಕೇರಳದ ತ್ರಿಶೂರಿನ ತಿರುವಿಲ್ವಾಮಲ ಬಳಿಚಾರ್ಜ್ ಮಾಡಿ ಗೇಮ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಮಾರ್ಟ್ ಫೋನ್ ಸ್ಫೋಟಗೊಂಡಿದ್ದು, 8 ವರ್ಷದ ಪುಟ್ಟ ಕಂದಮ್ಮ ಮೃತಪಟ್ಟಿದೆ. ಪಟ್ಟಿಪರಂಬುವಿನ ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ಕಳೆದು ಕೊಂಡ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಅದರಲ್ಲೂ ಬೇಸಿಗೆಯ ಬಿಸಿಲಿನ ತಾಪಕ್ಕೆ ಮೊಬೈಲ್ ಅತಿ ವೇಗವಾಗಿ ಬಿಸಿಯಾಗುತ್ತದೆ. ಅದರಲ್ಲೂ ಚಾರ್ಜ್ ಮಾಡಿದ ತಕ್ಷಣ ಬಳಸುವುದು ಅಪಾಯಕಾರಿ ಅನ್ನೋದಕ್ಕೆ ಸಾಕ್ಷಿಯಾಗಿದ್ದು, ಈ ಘೋರ ದುರಂತ.