Saturday, 23rd November 2024

ದೆಹಲಿಯ ಮಹಾನಗರ ಪಾಲಿಕೆ: ಮೇಯರ್, ಉಪಮೇಯರ್ ಚುನಾವಣೆ ಇಂದು

ವದೆಹಲಿ: ದೆಹಲಿಯ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಬುಧವಾರ ಮತದಾನ ನಡೆಯಲಿದೆ.

ದೆಹಲಿ ಕಾರ್ಪೊರೇಷನ್ ಸೆಕ್ರೆಟರಿಯೇಟ್ ಸಿವಿಕ್ ಸೆಂಟರ್‌ನಲ್ಲಿ ಮತ ದಾನ ಪ್ರಕ್ರಿಯೆ ಆರಂಭವಾಗಲಿದೆ. ಮೇಯರ್ ಸ್ಥಾನಕ್ಕೆ ಎಎಪಿಯಿಂದ ಶೈಲಿ ಒಬೆರಾಯ್ ಮತ್ತು ಬಿಜೆಪಿಯಿಂದ ಶಿಖಾ ರೈ ಕಣದಲ್ಲಿದ್ದಾರೆ.

ದೆಹಲಿ ಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 18 ಕೊನೆಯ ದಿನಾಂಕವಾಗಿತ್ತು. ಇಂದಿನ ಚುನಾವಣೆಯಲ್ಲಿ ಒಟ್ಟು 274 ಮತಗಳು ಚಲಾವಣೆಯಾಗಬೇಕಿದೆ. ಆಮ್ ಆದ್ಮಿ ಪಕ್ಷ 148 ಮತ್ತು ಬಿಜೆಪಿ 115 ಮತಗಳನ್ನು ಹೊಂದಿದೆ.

ಹೀಗಾಗಿ, ಎಎಪಿಯ ಮೇಲುಗೈ ಸಾಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಗೆಲ್ಲಲು ಸಾಧ್ಯವಿರುವ ಎಲ್ಲಾ ಕಸರತ್ತು ಮಾಡುತ್ತಿದೆ. ಮೇಯರ್ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸಭಾಧ್ಯಕ್ಷ ಮುಕೇಶ್ ಗೋಯಲ್ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಮೇಯರ್‌ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿತ್ತು. ಎಎಪಿ ಅಭ್ಯರ್ಥಿ ಶೈಲಿ ಒಬೆರಾಯ್ ಮೇಯರ್ ಮತ್ತು ಮೊಹಮ್ಮದ್ ಇಕ್ಬಾಲ್ ಉಪಮೇಯರ್ ಆಗಿ ಆಯ್ಕೆಯಾದರು.

ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಶೈಲಿ ಒಬೆರಾಯ್ ಅವರು ಫೆಬ್ರವರಿ 22 ರಂದು ದೆಹಲಿಯ ಮೇಯರ್ ಆಗಿ ಆಯ್ಕೆಯಾದರು. ಅವರು ಭಾರತೀಯ ಜನತಾ ಪಕ್ಷದ ರೇಖಾ ಗುಪ್ತಾ ಅವರನ್ನು 34 ಮತಗಳ ಅಂತರದಿಂದ ಸೋಲಿಸಿದರು. ಒಬೆರಾಯ್ ಒಟ್ಟು 266 ಮತಗಳಲ್ಲಿ 150 ಮತಗಳನ್ನು ಪಡೆದರೆ ರೇಖಾ ಗುಪ್ತಾ 116 ಮತ ಗಳನ್ನು ಪಡೆದರು.

ಮೇಯರ್ ಹುದ್ದೆಗೆ ಶೆಲ್ಲಿ ಒಬೆರಾಯ್ ಮೇಲೆ ಎಎಪಿ ಮತ್ತೆ ನಂಬಿಕೆ ಇಟ್ಟಿದ್ದು, ಉಪಮೇಯರ್ ಹುದ್ದೆಗೆ ಮೊಹಮ್ಮದ್ ಇಕ್ಬಾಲ್ ಕೂಡ ಕಣದಲ್ಲಿದ್ದಾರೆ. ಮತ್ತೊಂದೆಡೆ ಮೇಯರ್ ಸ್ಥಾನಕ್ಕೆ ಬಿಜೆಪಿಯ ಶಿಖಾ ರೈ ಹಾಗೂ ಉಪಮೇಯರ್ ಸ್ಥಾನಕ್ಕೆ ಆಪ್‌ನ ಸೋನಿ ಪಾಂಡೆ ಪೈಪೋಟಿ ನಡೆಸಲಿದ್ದಾರೆ. ಮಾಹಿತಿಯ ಪ್ರಕಾರ, ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು ದೆಹಲಿಯ 14 ಶಾಸಕರು ವಿಧಾನಸಭೆಯಿಂದ ನಾಮ ನಿರ್ದೇಶನಗೊಂಡಿದ್ದಾರೆ.

ಎಎಪಿ ಶಾಸಕ ಅತಿಶಿ ಕ್ಯಾಬಿನೆಟ್ ಸಚಿವರಾಗುವುದರೊಂದಿಗೆ, ಮೆಹ್ರೌಲಿ ಶಾಸಕ ನರೇಶ್ ಯಾದವ್ ಅವರ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಉಳಿದ 13 ಶಾಸಕರು ಕಳೆದ ಬಾರಿ ಮತ ಚಲಾಯಿಸಿದವರೇ ಆಗಿರುತ್ತಾರೆ.