ಗುಬ್ಬಿ: ತಾಲೂಕಿನ ಮಾರಶೆಟ್ಟಿ ಹಳ್ಳಿ ಗ್ರಾಮದ ಹೊಸ ಕೆರೆ ಎಂದು ಪ್ರಸಿದ್ಧಿಯಾದ ಕೆರೆಯಲ್ಲಿ ಸರ್ಕಾರದ ಯಾವುದೇ ಹೂಳೆತ್ತುವ ಆದೇಶವಿಲ್ಲದಿದ್ದರೂ ಕೆಲವರು ತೋಟಕ್ಕೆ ಮಣ್ಣು ಹೊಡೆಯುವ ನೆಪದಲ್ಲಿ ಲಕ್ಷಾಂತರ ರೂ ಮಣ್ಣಿನ ಮಾರಾಟ ದಲ್ಲಿ ತೊಡಗಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದು ಅವರ ವಿರುದ್ಧ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಗ್ರಾಹಕರ ಸಂರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮಾರಶೆಟ್ಟಿಹಳ್ಳಿ ಬಸವರಾಜು ಮಾತನಾಡಿ ಇದೇ ಗ್ರಾಮದ ಪರಮಶಿವಯ್ಯ ಎಂಬ ವ್ಯಕ್ತಿ ಟ್ರ್ಯಾಕ್ಟರ್ ಮತ್ತು ಜೆಸಿಪಿ ಮೂಲಕ ಸುಮಾರು ದಿನಗಳಿಂದ ತೋಟಕ್ಕೆ ಮಣ್ಣು ಹೊಡೆ ಯುವ ಕುಂಟು ನೆಪ ಹೇಳಿಕೊಂಡು ಕೆರೆಯ ದಡವನ್ನು ಸಹ ಕಸಿಯುವ ಕೆಲಸವನ್ನು ಮಾಡಿದ್ದಾರೆ. ಅನೇಕ ಬಾರಿ ಗ್ರಾಮಸ್ಥರ ಸಮ್ಮುಖದಲ್ಲಿ ಕೆರೆ ನೀರು ತುಂಬಿದಂತಹ ಸಂದರ್ಭದಲ್ಲಿ ದಡ ಕಸಿಯುತ್ತದೆ. ದಡದ ಮಣ್ಣನ್ನು ತುಂಬಿದರೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು.
ಸಹ ಯಾರ ಮಾತಿಗೂ ಕಿವಿಗೊಡದೆ ಅಕ್ರಮವನ್ನು ಎಸೆಗಿದ್ದಾರೆ. ಕೆರೆಯ ಒಳಗೆ ಹೆಚ್ಚುವರಿ ವಿದ್ಯುತ್ ಕಂಬವಿದ್ದು ಅದರ ಸುತ್ತಲೂ ಜೆಸಿಬಿಯಿಂದ ಬಗೆದು ಮಣ್ಣು ತುಂಬಿದ್ದಾರೆ. ಹೆಚ್ಚುವರಿ ವಿದ್ಯುತ್ ಕಂಬ ಅಪಾಯದ ಅಂಚಿನಲ್ಲಿದೆ ನೂರಾರು ರೈತರು ಪ್ರತಿನಿತ್ಯ ತಮ್ಮ ತೋಟದ ಕೆಲಸದಲ್ಲಿ ತೊಡಗುತ್ತಾರೆ.
ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬದಿಂದ ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಕೆರೆ ನೀರು ಶೇಖರಣೆ ಯಿಂದ ಸಾರ್ವಜನಿಕರಿಗೆ ದನ ಕರುಗಳಿಗೆ ಅನುಕೂಲವಾಗುತಿತ್ತು ನೀರು ತುಂಬಿದ ಸಂದರ್ಭದಲ್ಲಿ ಕೆರೆಯ ದಂಡೆ ಒಡೆಯ ಬಹುದೆಂಬ ಭಯ ಸೃಷ್ಟಿಯಾಗಿದೆ. ಕೂಡಲೇ ಅಧಿಕಾರಿಗಳು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆರೆಯ ಪಕ್ಕದಲ್ಲಿ ಅನೇಕ ಮನೆಗಳಿದ್ದು ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಆಗ್ರಹಿಸಿದರು.