ಅದರಲ್ಲಿ ಮೋಡದ ಚಿತ್ರವೊಂದನ್ನು ಮಹಿಳೆಯಂತೆ ರಚಿಸಲಾಗಿದ್ದು, ದೇಹಭಾಗವನ್ನು ಕಾಳಿಯಂತೆಯೂ, ತಲೆಕೂದಲನ್ನು ಹಾಲಿವುಡ್ ನಟಿ ಮರ್ಲಿನ್ ಮನ್ರೊà ರೀತಿ ರಚಿಸ ಲಾಗಿದೆ. ಕಾಳಿ ದೇಹವಿರುವ ಚಿತ್ರದಲ್ಲಿ ಮೋಡವನ್ನೇ ಸ್ಕರ್ಟ್ ರೀತಿ ರಚಿಸಿ, ಗಾಳಿಗೆ ಅದು ತೂರುವಂತೆ ಚಿತ್ರಿಸಿ, ಅಪಮಾನ ಮಾಡಲಾಗಿದೆ.
ಕೇಂದ್ರ ಸರಕಾರ ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಒತ್ತಾಯಿಸಿದ್ದಾರೆ. ಜತೆಗೆ ಟ್ವಿಟರ್‌ನಲ್ಲಿ ಕೂಡ ಉಕ್ರೇನ್ ಸರಕಾರದ ಉದ್ಧಟತನಕ್ಕೆ ಆಕ್ರೋಶ ವ್ಯಕ್ತವಾಗಿದೆ. ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಆಕ್ಷೇಪಾರ್ಹ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ.