Thursday, 12th December 2024

ಮನಸ್ಸು, ಮತದಾನ, ಮನೋವಿಜ್ಞಾನ: ಒಂದು ತುಲನೆ

ಶ್ವೇತಪತ್ರ

shwethabc@gmail.com

ಟ್ರೈನ್ ಹತ್ತಿದ ಮರುಕ್ಷಣವೇ ಮೂತ್ರದ ವಾಸನೆ ನಿಮ್ಮ ಮೂಗಿಗೆ ರಾಚ್ಚುತ್ತದೆ. ತಪ್ಪಿಸಿಕೊಳ್ಳಲಾಗದ ಈ ವಾಸನೆಯಿಂದ ಮೂಗು ಮುಚ್ಚಿಕೊಳ್ಳುತ್ತೀರಿ, ಸೀಟು ಹಿಡಿಯುತ್ತೀರಿ. ಎದುರುಗಿರುವ ನಿಮ್ಮ ಸಹ ಪ್ರಯಾಣಿಕರೊಬ್ಬರು ಹಜಾರಕ್ಕೆಲ್ಲ ಸಿಡಿಯುವಂತೆ ಸೀನುತ್ತಾರೆ. ಅಲ್ಲಿಂದ ನೀವು ಕಾಲ್ ಕಿತ್ತು ಮುಂದೆ ಕಾಲಿಟ್ಟಿರಬಹುದು, ಚೂಯಿಂಗ್ ಗಮ್ ಮುದ್ದೆಯೊಂದು ನಿಮ್ಮ ಕಾಲಿಗೆ ಅಂಟುತ್ತದೆ.

ಅಸಹ್ಯಕರವೆನಿಸುತ್ತದೆಯೇ? ಇಂತಹ ವಿಚಾರಗಳಿಗೆ ನೀವು ಹೇಗೆ ಪ್ರತಿಕ್ರಿಸುತ್ತೀರಿ ಎಂಬುದು ನಿಮ್ಮ ಬಗ್ಗೆ ಇನ್ನೂ ಹೆಚ್ಚಿನದನ್ನು ತಿಳಿಸುತ್ತದೆ. ಜೊತೆಗೆ ನಿಮಗೆ ಗೊತ್ತಿಲ್ಲದ ರಾಜಕೀಯ ಕಲಿಕೆಗಳನ್ನು ಸಹ ಪ್ರಕಟಿಸುತ್ತದೆ. ಇದೊಂದು ವಿಚಾರವಷ್ಟೇ ಅಲ್ಲ, ನಿಮ್ಮೊಳಗಿನ ರಾಜಕೀಯವನ್ನು ನಿಮಗೆ ಗೊತ್ತಿಲ್ಲದ ಹಾಗೆ ಪ್ರಭಾವಿಸುವ ಇನ್ನೂ ಅನೇಕ ಅಂಶಗಳಿವೆ. ಯಾವಾಗೆಲ್ಲ ಚುನಾವಣೆ ಗಳು ಬರುತ್ತವೆಯೋ ಆಗೆಲ್ಲ ಮತದಾರರು ಅನೇಕ ತಿಂಗಳುಗಳ ಕಾಲ ಪಾಲಿಸಿಗಳ, ಪಾಲಿಟಿಷಿಯನ್‌ಗಳ ಮತ್ತು ಸಿದ್ಧಾಂತಗಳ ಕುಸ್ತಿಗೆ ಸಾಕ್ಷಿಯಾಗ ಬೇಕಾಗು ತ್ತದೆ.

ಮತದಾನದ ದಿನ ಬಂದಾಗ ಆ ಹೊತ್ತು ವೋಟ್ ಮಾಡಲು ತೆರಳಿದಾಗ ಕೆಲವೊಂದು ತರ್ಕಬದ್ಧ ಲೆಕ್ಕಾಚಾರಗಳು ಮನಸ್ಸಿಗೆ ಮುತ್ತುತ್ತವೆ. ಹೌದಲ್ಲವೇ? ಹೀಗೆ ಯೋಚಿಸಿದಷ್ಟು ನಮ್ಮ ಮತದ ಮೇಲಿನ ಹಿಡಿತವನ್ನು ನಾವೇ ಕಳೆದುಕೊಳ್ಳುತ್ತೇವೆ-ಹೀಗೆನ್ನುತ್ತಾರೆ ಮನೋ ವಿಜ್ಞಾನಿಗಳು. ಶಿಕ್ಷಣ ಆರೋಗ್ಯ ಆರ್ಥಿಕತೆ ಈ ಎಲ್ಲದರ ಆಧಾರದಲ್ಲಿ ಮತದಾನ ಮಾಡುವುದು ಬಹಳ ಮುಖ್ಯ.

ಆದರೆ ಮತದಾರರ ಆಯ್ಕೆಗಳು ಹವಾಮಾನ ಮತ್ತು ಕ್ರೀಡಾ ಫಲಿತಾಂಶಗಳಿಗೆ ಪ್ರತಿಕ್ರಿಯಿಸಿದಷ್ಟು ಸುಲಭವಿಲ್ಲ. ನಮ್ಮ ಪ್ರಜ್ಞಾ ಪೂರಕ ನಿರ್ಧಾರಗಳ ಮೇಲೆ ಸುಪ್ತಪ್ರಜ್ಞೆಯ ಆಲೋಚನೆಗಳು, ಭಾವನೆಗಳು, ಪೂರ್ವಗ್ರಹಗಳು ಪ್ರಭಾವ ಬೀರುತ್ತಲೇ ಇರುತ್ತವೆ. ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾನಿಲಯದ ಪೊಲಿಟಿಕಲ್ ಸೈನ್ಸ್ ಪ್ರೊಫೆಸರ್ ಜಾನ್ ಕ್ರಾನ್ಸ್ ನಿಕ್ ಮತದಾನದ ಹಿಂದಿನ ಮನೋ ವಿಜ್ಞಾನದ ಕ್ರಿಯೆಯನ್ನು ಅರಿಯಲು ತಮ್ಮ ವೃತ್ತಿಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.

ಅವರೇ ಹೇಳುವಂತೆ ಮತದಾನದ ನಿರ್ಧಾರ ಹೆಚ್ಚಿನದಾಗಿ ಸುಪ್ತಪ್ರಜ್ಞೆಯದಾಗಿರುತ್ತದೆ (Unconscious). ಕ್ರಾನ್ಸ್ ವಿವರಿಸುವಂತೆ ಮತದಾನದ ಸಂದರ್ಭದಲ್ಲಿ ಮತದಾರರು ಟಿವಿಯಲ್ಲಿ ಬರುವ ಚರ್ಚೆಗಳಿಗೆ ಕಿವಿಯಾದರೂ ಬೇರೆಲ್ಲಾ ಅಂಶಗಳು ಅವರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತವೆ. ಟೊರೆಂಟೋ ವಿಶ್ವವಿದ್ಯಾನಿಲಯದ ಮನೋ ವಿಜ್ಞಾನದ ಪ್ರೊಫೆಸರ್ ಯೋಲ್ ಇನ್ ಬಾರ್ ನಡೆಸಿದ ಸಂಶೋಧನೆಯು ಅಹಿತಕರವಾದದ್ದನ್ನು, ಅಸಹ್ಯಕರವಾದದನ್ನು ಸಹಿಸಿಕೊಳ್ಳಲಾಗದವರು ರಾಜಕೀಯವಾಗಿ ಸಾಂಪ್ರದಾಯಿಕ ಮನಸ್ಥಿತಿಯವರಾಗಿರುತ್ತಾರೆ ಎಂಬುದನ್ನು ವಿವರಿಸುತ್ತದೆ. (ಕ್ರೆಡಿಟ್ : istock) ಅಹಿತಕರ ಸಂಗತಿಗಳು ರಾಜಕೀಯತೆಯ ಮೇಲೆ ಗೊತ್ತಿಲ್ಲದೆ ಪರಿಣಾಮ ಬೀರಬಲ್ಲವು.

ಇದಕ್ಕೆ ಆಧಾರವಾಗಿ ಕ್ರಾನ್ಸ್ ತಮ್ಮ ಸಂಶೋಧನೆಯಲ್ಲಿ Disgust Scale ಅನ್ನು ರೂಪಿಸುತ್ತಾರೆ. ಸಂಶೋಧನೆಯಲ್ಲಿ ಭಾಗವಹಿ ಸುವವರಿಗೆ ಹೊಟ್ಟೆ ತೊಳಿಸುವಂತಹ ಹೇಳಿಕೆಗಳನ್ನು ನೀಡುತ್ತಾರೆ – ಉದಾಹರಣೆಗೆ ನಿಮ್ಮ ಸ್ನೇಹಿತರೊಬ್ಬರು ಒಂದು ವಾರ ಕ್ಕೊಮ್ಮೆ ಮಾತ್ರ ತಮ್ಮ ಒಳ ಉಡುಪನ್ನು ಬದಲಾಯಿಸುವುದು ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ಇಂತಹ ಅಸಹ್ಯಕರ, ಅಹಿತಕರ ಪ್ರಶ್ನೆಗಳನ್ನು ವಿಷಯಗಳನ್ನು ಹೇಳಿ ನಂತರದಲ್ಲಿ ಅವರಿಗೆ ರಾಜಕೀಯ ಸಿದ್ಧಾಂತಗಳ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಸಂಶೋಧನೆಯಲ್ಲಿ ಗುರುತಿಸುವ ಮುಖ್ಯ ಅಂಶವೆಂದರೆ ಸುಲಭವಾಗಿ ಅಸಹ್ಯಿಸಿಕೊಳ್ಳುವ ವ್ಯಕ್ತಿಗಳು ರಾಜಕೀಯ ವಾಗಿ ಸಾಂಪ್ರದಾಯಿಕ ಮನಸ್ಥಿತಿಯನ್ನು ಉಳ್ಳವರಾಗಿರುತ್ತಾರೆ ಎಂಬ ವಿಷಯವು ಸ್ಪಷ್ಟವಾಗುತ್ತದೆ.

ಈ ವಿಚಾರವಾಗಿ ಪ್ರಪಂಚದ ಎಲ್ಲಾ ಭಾಗಗಳಲ್ಲೂ ನಮಗೆ ದತ್ತಾಂಶ ದೊರೆತಿದೆ. ಆದರೆ ಸಬ್ ಸಹಾರ ಆಫ್ರಿಕಾ ಭಾಗವೊಂದನ್ನು ಹೊರತುಪಡಿಸಿ ಮತ್ತು ಪ್ರಪಂಚದ ಎಲ್ಲಾ ಭಾಗಗಳಲ್ಲೂ ಈ ವಿಚಾರವಾಗಿ ಸ್ಥಿರವಾದ ಉತ್ತರಗಳೇ ಗೋಚರಿಸುತ್ತವೆ ಎನ್ನುತ್ತಾರೆ ಕ್ರಾನ್ಸ್. ಇದಕ್ಕೆ ವಿವರಣೆಯ ನ್ನೊದಗಿಸುವ ಕ್ರಾನ್ಸ್ ರಾಜಕೀಯ ಮತ್ತು ನೈತಿಕತೆಗಳಿಗೂ ಅಸಹ್ಯಕರ ಅಹಿತಕರ ಮತ್ತು ಅನಾರೋಗ್ಯ ಇವುಗಳ ನಡುವಿನ ಸಮಯೋಜನೆಯನ್ನು ಪೂರ್ವ ಐತಿಹಾಸಿಕ ಜೀವಶಾಸ್ತ್ರದ ಆಧಾರದಲ್ಲಿಡಬೇಕಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

ಜನರು ದೊಡ್ಡ ದೊಡ್ಡ ಗುಂಪುಗಳಾಗಿ ಬೆರೆಯುವುದಕ್ಕೆ ಶುರುವಿಟ್ಟ ದಿನಗಳಿಂದಲೂ ಜನರು ನಿರ್ದಿಷ್ಟ ವರ್ತನೆಯನ್ನು ರೂಢಿಸಿಕೊಂಡರು ಮತ್ತು ಈ ವರ್ತನೆಯು ಕಾಯಿಲೆಗಳನ್ನು ಬೇರೆಯವರಿಂದ ಅಂಟಿಸಿಕೊಳ್ಳುವ ಅಪಾಯವನ್ನು ಕಡಿತ ಗೊಳಿಸಿಕೊಳ್ಳಬಹುದಾದ ವರ್ತನೆಯಾಗಿರುತ್ತದೆ ಮತ್ತು ಇದನ್ನೇ ಮುಂದೆ ಮನೋವಿಜ್ಞಾನಿಗಳು Behavioural Immune
system ಎಂದು ಗುರುತಿಸುತ್ತಾರೆ. ಮತ್ತೊಂದು ಸಂಶೋಧನೆಯ ಪ್ರಕಾರ ಆ ದಿನದ ನಿಮ್ಮ ಮನಸ್ಥಿತಿ  ಹೇಗಿರುತ್ತದೆ ಎನ್ನುವುದು ಕೂಡ ಮತದಾನದ ಮೇಲೆ ಪ್ರಭಾವ ಬೀರಬಲ್ಲದು, ನಿಜವಲ್ಲವೇ? ಮತ್ತೊಂದು ಸಂಶೋಧನೆಯ ಪ್ರಕಾರ ಕಾಯಿಲೆಗಳ ಬಗ್ಗೆ ಜನರು ಯೋಚಿಸಿದಷ್ಟು ಅವರು ಜನಾಂಗೀಯ ವ್ಯತ್ಯಾಸಗಳ ಬಗ್ಗೆ ಅನುವು ಮಾಡಿಕೊಟ್ಟಂತಾ ಗುತ್ತದೆ ಎಂಬುದನ್ನು ಆ ಸಂಶೋಧನೆಯು ಸೂಚಿಸುತ್ತದೆ.

ಇದೇ ವಿಷಯದ ಆಧಾರದಲ್ಲಿ ಅಮೆರಿಕಾದಲ್ಲಿ 2014ರ ಚುನಾವಣಾ ಸಂದರ್ಭದಲ್ಲಿ ಕಂಡುಬಂದ ವಿಷಯವೆಂದರೆ ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿಗಳಲ್ಲಿ ಬಹಳ ಆಕರ್ಷಕವಾಗಿದ್ದವರು ಕಾಯಿಲೆ ಬಿದ್ದ ಜನರಿಗೆ ಹೆಚ್ಚು ಇಷ್ಟವಾಗುತ್ತಿದ್ದರು ಮತ್ತು ಅವರ ಪರವಾಗಿ ಜನರು ಮತ ಚಲಾಯಿಸುತ್ತಿದ್ದರು ವರ್ತನ ಪ್ರತಿರಕ್ಷಣಾ ವ್ಯವಸ್ಥೆ (Behavioural imm-une system) ನಿಂದ ಹರಿಯು ತ್ತಿದ್ದ ಮನೋಭಾವಗಳನ್ನು ಅಸಾಮಾಜಿಕ ಸಂಪ್ರದಾಯಕತ್ವ ಎಂದು ಪರಿಗಣಿ ಸಬಹುದು ಎನ್ನುತ್ತಾರೆ ಕ್ರಾನ್ಸ್.

ಅಂದರೆ ನಮಗೆ ಪರಿ ಚಿತವಲ್ಲದ ಗುಂಪುಗಳಿಂದ ದೂರ ಉಳಿಯುವುದು ಇದೊಂದು ಸಾಂಪ್ರದಾಯಿಕ ಸಾಮಾಜಿಕ ಆಚರಣೆ ಮತ್ತು ಈ ಗುಂಪುಗಳಲ್ಲಿ ಎಲ್ಲಾ ತರಹದ ಲೈಂಗಿಕ ವಿಚಾರಗಳನ್ನು ಒಳಗೊಂಡಂತೆ ನಿರ್ದಿಷ್ಟತೆಗಳನ್ನು ಹೇರುವುದು ಸ್ಪಷ್ಟವಾಗಿ ತೋರುತ್ತದೆ. ಇಲ್ಲಿ ಅಸಹ್ಯಕರ ಅಹಿತಕರವೆಂಬುದು ಒಂದು ಭಾವನೆ. ಅದು ಜನರಿಗೆ ಹೇ ಅದನ್ನು ಮಾಡಬೇಡ? ಅದರಿಂದ ದೂರವಿರು? ಅದು ಅಪಾಯ ಎಂದು ತಿಳಿಸು ಕೊಡುತ್ತಿರುತ್ತದೆ. ಇದರ ಸೂಚ್ಯ ಅರ್ಥವೆಂದರೆ ಚುನಾವಣಾ ಪ್ರಚಾರಗಳು ಮತ್ತು ಮಾಧ್ಯಮದ ವಿವರಣೆಗಳು ಅಸಹ್ಯಕರ ಸಂಗತಿಗಳನ್ನು ಮುಂದಿಟ್ಟು ಜನರನ್ನು ಪ್ರಚೋದಿಸುವುದು.

ಉದಾಹರಣೆಗೆ, ಈ ಪಕ್ಷದವರು ಮಾಡಿರುವ ನೀತಿ ಗಬ್ಬುನಾರುವಂತಿದೆ ಎಂದು ಪ್ರಚುರಪಡಿಸುವುದು. ಇದು ಜನರ ಮನಸ್ಸಿ ನಾಳದಲ್ಲಿ ಪ್ರಭಾವವನ್ನು ಬೀರುತ್ತದೆ. ಕೆಲ ವರ್ಷಗಳ ಹಿಂದೆ ಅಮೆರಿಕದ ರಾಜಕೀಯ ವ್ಯಕ್ತಿಯೊಬ್ಬರು ಮತ್ತು ಮುಂದುವರಿದು ಮೇಲಿನ ಸಂಶೋಧನೆಯ ಭಾಗವಾಗಿ ಚುನಾವಣಾ ಕರಪತ್ರಗಳಿಗೆ ಕಸದ ವಾಸನೆಯನ್ನು ತುಂಬಿ ಪ್ರಚಾರ ಗೈದದ್ದನ್ನು ಇಲ್ಲಿ ಸ್ಮರಿಸಲೇಬೇಕು.

Impact of fear sensitivity on political ideology ಎಂಬ ವರದಿಯು ಸಹ ಇದೇ ವಿಷಯವನ್ನು ಎತ್ತಿ ಹಿಡಿಯುತ್ತದೆ. ನೆಬ್ರಸ್ಕಾ (ಮಧ್ಯ ಅಮೆರಿಕಾದ) ರಾಜ್ಯದ ನಲವತ್ತಾರು ಜನರ ರಾಜಕೀಯ ವಿಚಾರಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ಸಂಗ್ರಹಿಸ ಲಾಯಿತು. ಇರಾಕ್ ಯುದ್ಧದಿಂದ ಹಿಡಿದು ಮರಣದಂಡನೆಯವರೆಗೂ ಅನೇಕ ವಿಚಾರಗಳನ್ನು ಪ್ರಸ್ತಾಪಿಸಲಾಯಿತು. ಶಕ್ತಿ ಯುತವಾದ, ಆಳವಾದ ಅಭಿಪ್ರಾಯಗಳನ್ನು ಹೊಂದಿದ್ದ ಜನರನ್ನು ಮುಂದಿನ ಭಾಗಕ್ಕೆ ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಜನರಿಗೆ ಭಯಾನಕ ದೃಶ್ಯಗಳನ್ನು ತೋರಿಸಲಾಯಿತು. ಈ ದೃಶ್ಯಗಳಲ್ಲಿ ಮನುಷ್ಯರ ಮುಖದ ಮೇಲೆ ಜೇಡದ ಹುಳುಗಳು ಓಡಾಡುವುದು ಜೊತೆಗೆ ಗಾಬರಿಗೊಂಡು ಕಿರುಚುವ ಜೋರಾದ ಧ್ವನಿ ಗಳನ್ನು ಕೇಳಿಸಲಾಯಿತು. ನಂತರ ಭಯ ದಿಂದ ಅವರಲ್ಲಾದ ಶಾರೀರಿಕ ಪ್ರತಿಕ್ರಿಯೆಗಳನ್ನು ಮಾಪನ ಮಾಡಲಾಯಿತು. ಅಂದರೆ ಭಯಾನಕ ದೃಶ್ಯ ಹಾಗೂ ಧ್ವನಿಯನ್ನು ನೋಡಿದಾಗ, ಕೇಳಿದಾಗ ಅವರ ಚರ್ಮ ವಾಹಕ, ಉಸಿರಾಟ, ಹೃದಯ ಬಡಿತದಲ್ಲಾದ ಬದಲಾವಣೆಗಳನ್ನು ಗುರುತಿಸುವುದು. ಹೀಗೆ ಈ ಸಂಶೋಧನೆಯ ಪ್ರಕಾರ ಸುಲಭವಾಗಿ ಗಾಬರಿಗೊಂಡು ಹೆದರಿದ ವ್ಯಕ್ತಿಗಳು ಬಲಪಂಥೀಯ ಅಭಿಪ್ರಾಯಗಳನ್ನು ಹೊಂದಿರುವ ವಿಷವು ತಿಳಿದು ಬಂದಿರುತ್ತದೆ. ಇದರ ವರದಿಯು ಬಲಪಂಥದ ಅಭಿಪ್ರಾಯವನ್ನು ಹೆಚ್ಚು ಹೊಂದಿರುವ ವ್ಯಕ್ತಿಗಳು ಪರಿಸರದ ಋಣಾತ್ಮಕ ಅಂಶಗಳಿಗೆ ಸೂಕ್ಷ್ಮವಾಗಿರುತ್ತಾರೆ ಎಂಬುದನ್ನು ವಿವರಿಸುತ್ತದೆ.

ಬಹುಶಃ ಇಲ್ಲಿ ಜನರ ಮನಸ್ಸಿನ ಮೇಲೆ ರಾಜಕೀಯ ವಾಕ್ಚಾತುರ್ಯವು ಭಯದ ನೆರಳನ್ನು ಪ್ರಚೋದಿಸುತ್ತದೆ. ಉದಾಹರಣೆಗೆ ಕೆಲವೊಂದು ಪಕ್ಷಗಳು ಭಯೋತ್ಪಾದನೆಗೆ ಇಂಬು ನೀಡುವುದು ಆರ್ಥಿಕ ಅಸ್ತಿರತೆ ಇವೇ ಮುಂತಾದ ಅಪಾಯಗಳಿಗೆ ಒತ್ತು ನೀಡುವುದರಿಂದ ಯಾವುದೇ ವ್ಯಕ್ತಿಗೆ ಸೂಕ್ಷ್ಮವಾದ ಆದರೆ ಅಷ್ಟೇ ಪರಿಣಾಮಕಾರಿಯಾದ ಪ್ರಭಾವವನ್ನು ಮತದಾನ ಮಾಡು ವಾಗ ಇಂತಹ ಸಂಗತಿಗಳು ಪ್ರಭಾವಿಸುತ್ತವೆ.

ಚುನಾವಣಾ ಸಂದರ್ಭದಲ್ಲಿ ಪಕ್ಷದ ಎದುರಾಳಿಗಳು ಬಳಸುವ ಋಣಾತ್ಮಕ ಪೂರ್ವಗ್ರಹಿಕೆಗಳು ಜನರು ಹೆಚ್ಚು ಋಣಾತ್ಮಕ ವಿಷಯಗಳನ್ನೇ ತಲೆಯಲ್ಲಿ ತುಂಬಿಕೊಳ್ಳುವಂತೆ ಮಾಡುತ್ತವೆ ಮತ್ತು ಆ ವಿಷಯಗಳೇ ಮತದಾನ ಮಾಡುವಾಗ ಅವರ ನಿರ್ಧಾರದ ಮೇಲೆ ಪರಿಣಾಮ ಬೀರುವಲ್ಲಿ ಯಶಸ್ವಿಯಾಗುತ್ತವೆ. ಹೀಗೆ ಋಣಾತ್ಮಕ ಭಾವನೆಗಳು ವೋಟಿಂಗ್ ಪಾಲಿಟಿಕ್ಸ್
ಮೇಲೆ ಮತ್ತೊಂದು ತರಹದ ಪ್ರಭಾವವನ್ನು ಬೀರುತ್ತವೆ. ಅನೇಕ ಸಂಶೋಧನೆಗಳ ಆಧಾರದಲ್ಲಿ ಹೇಳುವುದಾದರೆ ಮತದಾರರು ಕೆಲವೊಮ್ಮೆ ಗೊತ್ತಿಲ್ಲದೆಯೇ ರಾಜಕಾರಣಿಗಳನ್ನು ಸೋಲಿಸಿರುತ್ತಾರೆ.

ಮತದಾನದ ವಿನ್ಯಾಸವು ಮತದಾರನ ಸುಪ್ತಪ್ರಜ್ಞೆಯ ಭಾಗದ ಪೂರ್ವಗ್ರಹಿಕೆಗಳಾಗಿದ್ದರೆ ಆ ಗ್ರಹಿಕೆಗಳು ಚುನಾವಣೆಯ ಸಿಂಧುತ್ವವನ್ನು ಕಡಿಮೆಗೊಳಿಸುತ್ತವೆಯೇ, ಇಂಥದೊಂದು ಆಸಕ್ತಿದಾಯಕವಾದ ಪ್ರಶ್ನೆಯನ್ನು ಎಸೆಯುತ್ತಾರೆ ಕ್ರಾನ್ಸ್. ನಿಮಗೆ ಐಸ್ ಕ್ರೀಮ್ ಏಕೆ ಇಷ್ಟ ಎನ್ನುವುದನ್ನು ವಿವರಿಸುತ್ತಾ ಹೋದರೆ ಐಸ್ ಕ್ರೀಮ್ ಅನ್ನು ಇಷ್ಟ ಪಡುವುದೇ ತಪ್ಪು ಎಂದು
ಹೇಳಬೇಕಾಗುತ್ತದೆ. ಆದರೆ ವ್ಯಕ್ತಿಗತ ಆಧಾರದಲ್ಲಿ ಐಸ್ ಕ್ರೀಮ್ ಅನ್ನು ಇಷ್ಟ ಪಡಬೇಡಿ ಎಂದು ಹೇಳಲು ಸಾಧ್ಯವಿಲ್ಲ
ಎನ್ನುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.

ನಾವೆಲ್ಲ ಇದೇ ಮೇ ೧೦ ರಂದು ವೋಟ್ ಬೂತಿನ ಮುಂದೆ ಹೋಗಿ ನಿಲ್ಲಬೇಕಾಗುತ್ತದೆ. ಕರ್ನಾಟಕ ವಿಧಾನಸಭಾ ಚುಣಾವಣೆಗೆ
ಮತದಾನ ಮಾಡಲು. ಆಗ ಅನೇಕ ಪೂರ್ವಗ್ರಹ ಅಂಶಗಳು ನಮ್ಮನ್ನು ಪ್ರಚೋದಿಸುತ್ತವೆ. ಅವುಗಳೆಡೆಗೆ ಸ್ಪಷ್ಟವಾದ ಚಿತ್ರಣ ವನ್ನು ನಾವೆಲ್ಲ ಹೊಂದಿದ್ದರೆ ಅಷ್ಟೇ ಸಾಕು!