ಕಿಂಗ್ ಚಾರ್ಲ್ಸ್ ಅವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರದ ಮುಖ್ಯಸ್ಥರು ಮತ್ತು 2000 ಗಣ್ಯರ ಜೊತೆ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕೂಡ ಭಾಗಿಯಾಗಲಿದ್ದಾರೆ.
ಇಂಗ್ಲೆಂಡ್ ಭೇಟಿ ವೇಳೆ, ಉಪಾಧ್ಯಕ್ಷರ ಪತ್ನಿ ಸುದೇಶ್ ಧನಕರ್ ಕೂಡಾ ಭಾಗವಹಿಸ ಲಿದ್ದಾರೆ.
ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕ ಸಮಾರಂಭಕ್ಕಾಗಿ ಯುನೈಟೆಡ್ ಕಿಂಗ್ಡಮ್ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಗಳಿಗೂ ಇತ್ತೀಚೆಗೆ ಆಹ್ವಾನ ನೀಡಿತ್ತು.
ಮೇ 2 ರಂದು ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ನಡೆಯುವ ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕ ಸಮಾರಂಭದ ಸಿದ್ಧತೆಗಳ ಕುರಿತು ಚರ್ಚಿಸಲು ಉಪಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ಭೇಟಿಯಾಗಿದ್ದರು. ಅಲ್ಲದೇ, ಬ್ರಿಟಿಷ್ ಹೈ ಕಮಿಷನರ್ ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೊದಲೇ ಭಾರತದ ಉಪಾಧ್ಯಕ್ಷರನ್ನು ಭೇಟಿ ಮಾಡುತ್ತಿರುವುದಕ್ಕೆ ಗೌರವವಿದೆ. ಈ ಮಹತ್ವದ ಸಂದರ್ಭ ಯುಕೆ ಮತ್ತು ಭಾರತದ ಸಂಬಂಧ ವನ್ನು ಮತ್ತಷ್ಟು ಗಟ್ಟಿಯಾಗಿಸುವ ಅವಕಾಶ ಎಂದು ಟ್ವೀಟ್ ಮಾಡಿದ್ದರು.
ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕವು ಲಂಡನ್ನ ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ಶನಿವಾರ ನಡೆಯಲಿದೆ. 1953 ರಲ್ಲಿ ನಡೆದ ರಾಣಿ ಎಲಿಜಬೆತ್ II ಕೊನೆಯ ಪಟ್ಟಾಭಿಷೇಕದ ನಂತರ ನಡೆಯುತ್ತಿರುವ ಪಟ್ಟಾಭಿಷೇಕವಾಗಿದೆ.