ತುಮಕೂರು: ಅಪಘಾತಕ್ಕೊಳಗಾಗಿದ್ದ ವಾಹನವನ್ನು ಬಿಡುಗಡೆ ಮಾಡಲು ಲಂಚ ಪಡೆಯುತ್ತಿದ್ದ ಎಎಸ್ ಐ ಮತ್ತು ಮುಖ್ಯ ಪೇದೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಕ್ಯಾತ್ಸಂದ್ರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಏ.28ರಂದು ಸಂಭವಿಸಿದ್ದ ಅಪಘಾತ ಪ್ರಕರಣದ ವಾಹನ ಬಿಡುಗಡೆ ಮಾಡಲು ಲಂಚಕ್ಕೆ ಆಗ್ರಹಿಸಿ ಅದರಂತೆ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ವ್ಯಕ್ತಿಯೊಬ್ಬರಿಂದ ಮೇ.5ರಂದು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಎಎಸ್ಐ ಗುರುಮಲ್ಲರಾಧ್ಯ 10 ಸಾವಿರ ರು, ಹೆಡ್ ಕಾನ್ ಸ್ಟೇಬಲ್ ನಾಗರಾಜು 500 ರು ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಸಿಲುಕಿದ್ದಾರೆ.
ಆರೋಪಗಳನ್ನು ಬಂಧಿಸಿ ಮುಂದಿನ ಕ್ರಮವಹಿಸಲಾಗಿದೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿಗಳಾದ ಮಂಜು ನಾಥ್, ಹರೀಶ್ ಹಾಗೂ ಸತ್ಯನಾರಾಯಣ, ಸಲೀಂ, ರಾಮರೆಡ್ಡಿ, ಶಿವರುದ್ರಪ್ಪ ಮೇಟಿ, ಸಿಬ್ಬಂದಿ ಭಾಗವಹಿಸಿದ್ದರು.