Thursday, 19th September 2024

ಕಾಂಗೋ: ಹಠಾತ್ ಪ್ರವಾಹ, ಭೂಕುಸಿತ: ಮೃತರ ಸಂಖ್ಯೆ 200

ಕಾಂಗೋ: ಕಾಂಗೋದ ಪೂರ್ವಭಾಗದಲ್ಲಿ ಹಠಾತ್ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿರುವವ ಸಂಖ್ಯೆ 200 ಕ್ಕಿಂತಲೂ ಅಧಿಕವಾಗಿದೆ.

ಭೀಕರ ಪ್ರವಾಹ ತಂದ ಸಂಕಷ್ಟಹಾನಿಗೊಳಗಾದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಕಲೆಹೆಯ ಆಡಳಿತಾಧಿಕಾರಿ ಥಾಮಸ್ ಬಾಕೆಂಗೆ ಮಾತನಾಡಿ, “ಇದುವರೆಗೆ 203 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಣೆಯಾದ ಇತರರಿಗಾಗಿ ಹುಡುಕಾಟ ಮುಂದುವರೆದಿದೆ. ಇಲ್ಲಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ” ಎಂದು ಹೇಳಿ ದರು.

ನೆಲೆ ಕಳೆದುಕೊಂಡ ಜನರ ಗೋಳು”ನ್ಯಾಮುಕುಬಿ ಗ್ರಾಮದಲ್ಲಿ ಪ್ರವಾಹಕ್ಕೆ ನೂರಾರು ಮನೆಗಳು ಕೊಚ್ಚಿ ಹೋಗಿವೆ.

ಶನಿವಾರ ಅವಶೇಷಗಳಡಿ, ಕೆಸರಿನಲ್ಲಿ ಹುದುಗಿ ಹೋಗಿದ್ದ ಕೆಲವರ ಮೃತದೇಹಗಳನ್ನು ಅಗೆದು ಹೊರತೆಗೆಯಲಾಗಿದೆ. ಮೃತ ದೇಹಗಳ ಸುತ್ತ ಜಮಾಯಿಸಿದ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದು, ಬದುಕುಳಿದವರ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಇನ್ನೊಂದೆಡೆ, ರಕ್ಷಣಾ ಕಾರ್ಯಕರ್ತರ ಪೋಸ್ಟ್‌ನ ಬಳಿ ಸಹ ಭೂಕುಸಿತ ಸಂಭವಿಸಿದೆ.

ಮಳೆ ಸಂಬಂಧಿ ದುರಂತಗಳಲ್ಲಿ ಸಾವನ್ನಪ್ಪಿದವರ ಸ್ಮರಣಾರ್ಥ ಸೋಮವಾರ ರಾಷ್ಟ್ರೀಯ ಶೋಕಾಚಾರಣೆಗೆ ಅಧ್ಯಕ್ಷ ಫೆಲಿಕ್ಸ್ ತ್ಶಿಸೆಕೆಡಿ ಕರೆ ನೀಡಿದ್ದಾರೆ. ಅಂದು ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸುವಂತೆ ಸೂಚಿಸಲಾಗಿದೆ. ಪ್ರಾಂತೀಯ ಸರ್ಕಾರವನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ದಕ್ಷಿಣ ಕಿವುಗೆ ಬಿಕ್ಕಟ್ಟು ನಿರ್ವಹಣಾ ತಂಡವನ್ನು ಕಳುಹಿಸುತ್ತಿದೆ.

ಉಗಾಂಡಾ ಮತ್ತು ಕೀನ್ಯಾದ ಕೆಲವು ಭಾಗಗಳಲ್ಲಿ ಸಹ ಭಾರಿ ಮಳೆಯಾಗುತ್ತಿದೆ. ಈ ವಾರದ ಆರಂಭದಲ್ಲಿ ಕಾಂಗೋ ಗಡಿಯಲ್ಲಿ ರುವ ರುವಾಂಡಾದಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ 129 ಮಂದಿ ಸಾವನ್ನಪ್ಪಿದ್ದರು.