Friday, 22nd November 2024

ಮಣಿಪುರದಲ್ಲಿ ಕರ್ಫ್ಯೂ ಸಡಿಲಿಕೆ

ಇಂಫಾಲ್: ಮಣಿಪುರದಲ್ಲಿ ಭಾನುವಾರ ಕರ್ಫ್ಯೂ ಸಡಿಲಿಸಲಾಗಿದ್ದು, ಸೇನಾ ಡ್ರೋನ್ಗಳ ವೈಮಾನಿಕ ಕಾವಲು ಮತ್ತು ಹೆಲಿಕಾಪ್ಟರ್ಗಳ ಕಾವಲು ಅಡಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಗಲಭೆ ಪೀಡಿತ ಚುರಚಂದ್ಪುರ ಪಟ್ಟಣದಲ್ಲಿ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದ್ದು, ಈ ಅವಧಿ ಯಲ್ಲಿ ಜನ ಆಹಾರ, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಕಂಡುಬಂದಿದೆ.
ಕರ್ಫ್ಯೂ ಸಡಿಲಿಕೆ ಮುಗಿದ ತಕ್ಷಣ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪಡೆ ಪಟ್ಟಣದಲ್ಲಿ ಧ್ವಜ ಮೆರವಣಿಗೆ ನಡೆಸಿದವು. ಇಡೀ ಗಲಭೆ ಪೀಡಿತ ರಾಜ್ಯದಲ್ಲಿ ಸುಮಾರು 120-125 ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಮಣಿಪುರದಲ್ಲಿ ಸುಮಾರು 10,000 ಸೈನಿಕರು, ಪ್ಯಾರಾ ಮಿಲಿಟರಿ ಮತ್ತು ಕೇಂದ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.