ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣೆ ಹಾಗೂ ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ಮತ್ತೆ ವಿಚಾರಣೆ ಸೆ.24ವರೆಗೆ ಮುಂದೂಡಲಾಗಿದೆ.
ನಟಿ ರಾಗಿಣಿ ಅರ್ಜಿಯನ್ನ ವಿಚಾರಣೆ ನಡೆಸಿದ ಎನ್ಡಿಪಿಎಸ್ ಕೋರ್ಟ್ ಸೆ.24ವರೆಗೆ ಮುಂದೂಡಿ ಎಂದು ಕೋರ್ಟ್ ಅದೇಶ ನೀಡಿದೆ. ಇನ್ನು ರಾಗಿಣಿ ಪರ ವಕೀಲರು, ರಾಗಿಣಿಯ ಮನೆಯಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಆಕೆಯಿಂದ ಕೇವಲ 3 ಅರ್ಗೇನಿಕ್ ಸಿಗಟೇಟ್ ಮತ್ತೆ 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಬಂಧಿಸಿದ್ದಾರೆ. ಅಧಿಕಾರ ಪೂರ್ವ ನಿಯೋಜಿತ ಪ್ಲ್ಯಾನ್ ಇದಾಗಿದ್ದು, ಎಫ್ಐಆರ್ ನಲ್ಲಿ ಯಾವ ಕಾರಣಕ್ಕೆ ಬಂಧಿಸಿದ್ದೇವೆ ಎನ್ನುವುದನ್ನ ಕೂಡ ನಮೂ ದಿಸಿಲ್ಲ. ರಾಗಿಣಿ ಸಂಪೂರ್ಣ ಅಮಾಯಕರು ಹಾಗಾಗಿ ಅವ್ರಿಗೆ ಜಾಮೀನು ನೀಡುವಂತೆ’ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು.