Friday, 22nd November 2024

ಶಿಗ್ಗಾಂವಿಯಲ್ಲಿ ಮತದಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ: ಪ್ರಜಾಪ್ರಭುತ್ವದ ಗೆಲುವಿಗಾಗಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಿ. ನಿಮ್ಮ ಮತ ಬಹಳ ದೊಡ್ಡದು. ನಾವೆಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ಮತ ದಾನ ಮಾಡಿದ್ದೇವೆ.

ನೀವು ಕೂಡ ಮನೆಗಳಿಂದ ಹೊರಬಂದು ನಿಮ್ಮ ಹಕ್ಕು ಚಲಾಯಿಸಿ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಜನರಲ್ಲಿ ಮನವಿ ಮಾಡಿದರು.

ಶಿಗ್ಗಾಂವಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 102 ರಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿ ಮತದಾನ ಮಾಡಿದ ಬಳಿಕ ಮಾತ ನಾಡಿ, “ರಾಜ್ಯದ ಕ್ಷೇಮಾಭಿವೃದ್ಧಿಗೆ ಜನರ ಮತ ಬೇಕೇ ಬೇಕು. ನಾನೊಬ್ಬ ಶಾಸಕನಾಗಿ, ಸಿಎಂ ಆಗಿ ಮತದಾನ ಮಾಡುವುದರಲ್ಲಿ ಬಹಳ ವ್ಯತ್ಯಾಸವಿಲ್ಲ. ಒಬ್ಬ ನಾಗರಿಕನಾಗಿ ನಾನು ಓಟ್​ ಮಾಡಿದ್ದೀನಿ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ ಎಂಬ ವಿಶ್ವಾಸವಿದೆ”.

“ಒಂದು ಕಡೆ ಅಭಿವೃದ್ಧಿ, ಇನ್ನೊಂದು ಕಡೆ ಆಗಿಲ್ಲ ಎಂಬ ಸುಳ್ಳು, ಪೊಳ್ಳು ಆಪಾದನೆ ಗಳಿವೆ. ಮೈತ್ರಿ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಜನರ ಜವಾಬ್ದಾರಿ ವಹಿಸಲು ಆಗಲ್ಲ. ಈ ಹಿಂದಿನ ಮೈತ್ರಿ ಸರ್ಕಾರದ ಕಾರಣದಿಂದಾಗಿ ಬಿಜೆಪಿ ಮೇಲೆ ಹೆಚ್ಚಿನ ಹೊಣೆ ಬಿತ್ತು. ಕೊರೊನಾ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಆರ್ಥಿಕ ಪ್ರಗತಿ ಮಾಡಿದ್ದೇವೆ. ಹಲವಾರು ಹೊಸ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಸುಳ್ಳು ಆರೋಪಗಳಿಗೆ ಕಿವಿಗೊಡದೇ ಮತ ನೀಡಿ” ಎಂದು ಕೋರಿದರು.