Saturday, 23rd November 2024

ಲೈಂಗಿಕ ದೌರ್ಜನ್ಯ, ಮಾನಹಾನಿ ಪ್ರಕರಣ: ಡೊನಾಲ್ಡ್ ಟ್ರಂಪ್ ದೋಷಿ

ವಾಷಿಂಗ್ಟನ್‌: ಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನ್ಯಾಯಾ ಲಯವು ನಿಯತಕಾಲಿಕೆಯ ಮಾಜಿ ಅಂಕಣಕಾರರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ಮಾನಹಾನಿ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದೆ. ಅಲ್ಲದೇ 5 ಮಿಲಿಯನ್ ಡಾಲರ್ ನಷ್ಟವನ್ನು ಪಾವತಿಸು ವಂತೆಯೂ ಆದೇಶಿಸಿದೆ.

ಮೂರು ಗಂಟೆಗೂ ಕಡಿಮೆ ಅವಧಿಯ ಚರ್ಚೆಯ ವೇಳೆ ಈ ವಿಚಾರವನ್ನು ಸೂಕ್ಷ್ಮವಾಗಿ ಅವಲೋಕಿಸಿದ ನ್ಯಾಯಾಧೀಶರು ನಾಗರಿಕ ವಿಚಾರಣೆಯಲ್ಲಿ ಅವರ ಇತರ ದೂರುಗಳನ್ನು ಎತ್ತಿಹಿಡಿದರು.

ಟ್ರಂಪ್ ವಿರುದ್ಧದ ಪ್ರಕರಣದಲ್ಲಿ ತೀರ್ಪು ನೀಡಿರುವುದು ಇದೇ ಮೊದಲು. ಟ್ರಂಪ್ ದಶಕಗಳಷ್ಟು ಹಳೆಯದಾದ ಲೈಂಗಿಕ ಆರೋಪಗಳನ್ನು ಮತ್ತು ಡಜನ್​ನಷ್ಟು ಮಹಿಳೆಯರ ವಿರುದ್ಧ ದೌರ್ಜನ್ಯ ಆರೋಪ ಪ್ರಕರಣಗಳನ್ನು ಎದುರಿಸಿದ್ದಾರೆ. ಆದರೆ ಕ್ಯಾರೊಲ್ ಈ ಪ್ರಕರಣದಲ್ಲಿ ನಷ್ಟವನ್ನು ಕೋರಿ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಅಮೆರಿಕದ ಪತ್ರಕರ್ತೆ, ಬರಹಗಾರ್ತಿ ಮತ್ತು ಅಂಕಣಕಾರ್ತಿ ಇ ಜೀನ್ ಕ್ಯಾರೊಲ್ (79) ಕಳೆದ ವರ್ಷ ಏಪ್ರಿಲ್‌ನಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆಯ ಸಂದರ್ಭದಲ್ಲಿ ದೇಶದ ಮಾಜಿ ಅಧ್ಯಕ್ಷರು ಐಷಾರಾಮಿ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.