Sunday, 24th November 2024

ಮತದಾನ ಮಾಡದಿದ್ದರೆ ವೇತನ ಕಡಿತ

ತುಮಕೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಚುನಾವಣಾ ಆಯೋಗ ಗರಿಷ್ಠ ಮತದಾನಕ್ಕೆ ಕ್ರಮ ಕೈಗೊಂಡಿದ್ದು, ಇದನ್ನು ಸಾಕಾರಗೊಳಿಸಲು ಕೈಗಾರಿಕೋದ್ಯಮಿಗಳು ವೇತನ ಸೂತ್ರ ಕೈಗೊಂಡಿದ್ದಾರೆ.

ಮತದಾನ ಮಾಡದಿದ್ದರೆ ವೇತನ ಕಡಿತಗೊಳಿಸಲು ಕೈಗಾರಿಕಾ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಗಳು ತೀರ್ಮಾನ ಕೈಗೊಂಡಿವೆ. ಕೆಲಸಕ್ಕೆ ರಜೆ ಎಂದು ಊರು, ಪ್ರವಾ ಸಕ್ಕೆ ಹೊರಟರೆ ಅಂದಿನ ವೇತನ ನೀಡುವುದಿಲ್ಲ ಎಂದು ಉದ್ಯಮಿಗಳು ತಿಳಿಸಿದ್ದಾರೆ.

ಮತದಾನದ ಮರುದಿನ ಮೇ 11ರಂದು ಕಚೇರಿ, ಸಂಸ್ಥೆಗಳಿಗೆ ಹೋದ ಕೂಡಲೇ ಹಾಜರಾತಿ ಹಾಕಿ ಮತ ಹಾಕಿರುವುದಕ್ಕೆ ಸಾಕ್ಷಿ ಯಾಗಿ ಬೆರಳಿಗೆ ಅಂಟಿಸಿದ ಶಾಯಿ ತೋರಿಸಬೇಕು. ಆಗ ಮೇ 10 ನೇ ತಾರೀಖಿನ ಸಂಬಳ ಖಾತೆಗೆ ಜಮಾ ಆಗುತ್ತದೆ. ಇಲ್ಲದಿದ್ದರೆ ವೇತನ ಕಡಿತವಾಗುತ್ತದೆ.