Friday, 22nd November 2024

ಮತಗಟ್ಟೆಗೆ ವೋಟರ್​ ಐಡಿ ಮರೆತು ಬಂದ ರಾಜಮಾತೆ ಪ್ರಮೋದಾದೇವಿ

ಮೈಸೂರು: ಮೈಸೂರು ಒಡೆಯರ್ ರಾಜಮನೆತನದ ರಾಜಮಾತೆ ಪ್ರಮೋದಾದೇವಿ ವೋಟರ್​ ಐಡಿ ಮರೆತು ಮತಗmಟ್ಟೆಗೆ ತೆರಳಿದ ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ.

ವೋಟರ್ ಐಡಿ ಮರೆತ ಪ್ರಮೋದಾ ದೇವಿ ಒಡೆಯರ್ ಮತಗಟ್ಟೆಯ ಬಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಗಳು ಅವರಿಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲ.

ಆಗ ಅವರು ತಮ್ಮ ಮೊಬೈಲ್‌ನಲ್ಲಿದ್ದ ಸಾಫ್ಟ್ ಕಾಪಿಯನ್ನು ತೋರಿಸಿದ್ದಾರೆ. ಆದರೆ ಇದಕ್ಕೆ ಮತಗಟ್ಟೆ ಅಧಿಕಾರಿಗಳು ಒಪ್ಪಿಗೆ ನೀಡಿಲ್ಲ. ಎಷ್ಟೇ ದೊಡ್ಡವರಾದರೂ ಕಾನೂನು ಎಲ್ಲರಿಗೂ ಒಂದೇ ಎಂದು ಈ ಮೂಲಕ ಮತಗಟ್ಟೆ ಅಧಿಕಾರಿಗಳು ಸಾರಿದ್ದಾರೆ. ಹೀಗಾಗಿ ವೋಟರ್ ಐಡಿ ತರಲು ಮತಗಟ್ಟೆಯಿಂದ ಪ್ರಮೋದಾದೇವಿ ಒಡೆಯರ್ ವಾಪಸ್ ತೆರಳಿದರು. ಹೀಗಾಗಿ ಮತಗಟ್ಟೆಯ ಮುಂಭಾಗದಲ್ಲೇ ಕಾರಿನಲ್ಲಿ ಕುಳಿತ ಪ್ರಮೋದಾ ದೇವಿ ವಾಪಸ್ ತೆರಳಿದರು. ಈ ಘಟನೆ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ನಡೆದಿದೆ.

ಯುವಕರು ಮತದಾನದ ಮೂಲಕ ತಮ್ಮ ಭಾವನೆ ವ್ಯಕ್ತ ಪಡಿಸಬೇಕು. ಅಲ್ಲದೆ ನಮ್ಮ ಧ್ವನಿ ಕೇಳಲ್ಲ ಅಂದ್ರೆ ಏನೂ ಮಾಡೊಕೆ ಆಗಲ್ಲ. ಅವಕಾಶ ಸಿಕ್ಕಾಗ ನಿಮ್ಮ ಭಾವನೆ ವ್ಯಕ್ತಪಡಿಸಿ. ನಿಮ್ಮ ನಿರಾಸಕ್ತಿಯೂ ಇದ್ರೂ ಅದನ್ನ ಇಲ್ಲಿ ಬಂದು ವ್ಯಕ್ತಡಿಸಿ. ನಾನೂ ಕೂಡ ಅದೇ ಉದ್ದೇಶದಿಂದ ಮತದಾನ ಮಾಡಿದ್ದೇನೆ.’ ಎಂದರು.