Friday, 22nd November 2024

ಸಚಿನ್​ ಪೈಲಟ್​​ “ಜನಸಂಘರ್ಷ ಯಾತ್ರೆ” ಇಂದಿನಿಂದ

ಜೈಪುರ: ಕಾಂಗ್ರೆಸ್​ ನಾಯಕತ್ವ ಮತ್ತು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ವಿರುದ್ಧ ಬಹಿರಂಗವಾಗಿ ಸೆಡ್ಡು ಹೊಡೆಯುವ ಪಕ್ಷದ ನಾಯಕ ಸಚಿನ್​ ಪೈಲಟ್​​ ಮತ್ತೊಂದು ಹೋರಾಟ ನಡೆಸುತ್ತಿದ್ದಾರೆ.

ಈ ಹಿಂದಿನ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಇತ್ತೀಚೆಗೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ “ಜನಸಂಘರ್ಷ ಯಾತ್ರೆ” ನಡೆಸುತ್ತಿದ್ದಾರೆ.

ಇಂದಿನಿಂದ ಅಜ್ಮೀರ್​ನಿಂದ “ಜನಸಂಘರ್ಷ ಯಾತ್ರೆ” ಆರಂಭವಾಗಲಿದೆ. 125 ಕಿ.ಮೀ ಕ್ರಮಿಸುವ ಯಾತ್ರೆ ರಾಜಧಾನಿ ಜೈಪುರಕ್ಕೆ 5 ದಿನದಲ್ಲಿ ತಲುಪಲಿದೆ. ಇದು ಭ್ರಷ್ಟಾಚಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಯಾತ್ರೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾ ವಣೆಗೆ ಕಾಂಗ್ರೆಸ್​ ಸಿದ್ಧತೆ ನಡುವೆ ಪೈಲಟ್​ ಅವರು ಈ ಯಾತ್ರೆ ನಡೆಸುತ್ತಿರುವುದು ಪಕ್ಷಕ್ಕೆ ಇರುಸುಮುರುಸು ತಂದಿದೆ.

ಅಜ್ಮೀರದ ಅಶೋಕ ಉದ್ಯಾನದಿಂದ ಇಂದು (ಗುರುವಾರ) ಜನಸಂಘರ್ಷ ಯಾತ್ರೆ ಆರಂಭ ವಾಗಲಿದೆ. ಇದಕ್ಕೂ ಮೊದಲು ಪೈಲಟ್​ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ಬಳಿಕ ರಾಜ್ಯ ರಾಜಧಾನಿ ಕಡೆಗೆ ನಡೆಯುವ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಯಾತ್ರೆ ಕಿಶನ್‌ಗಢದ ತೊಲಮಲ್ ಗ್ರಾಮದಲ್ಲಿ ರಾತ್ರಿ ತಂಗಲಿದೆ ಎಂದು ತಿಳಿದು ಬಂದಿದೆ.