ಬಿಜಾಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್‌ನ ಅಬ್ದುಲ್ ಹಮೀದ್ ಖಾಜಾಸಾಬ್ ಮುಷ್ರಫ್ ವಿರುದ್ಧ ಕಣಕ್ಕಿಳಿದಿ ದ್ದಾರೆ. ಇನ್ನು ಈ ಕ್ಷೇತ್ರದಲ್ಲಿ 2,47,240 ಮತದಾರರಿದ್ದು, ಈ ಪೈಕಿ 1,24,652 ಪುರುಷ, 1,22,520 ಜನ ಮಹಿಳಾ ಮತದಾರರಿದ್ದರೆ ಇನ್ನು 68 ಇತರರಿದ್ದಾರೆ. ಹಾಗೆಯೇ ಈ ಬಾರಿ 64.68% ಮತದಾನ ಆಗಿದೆ.
ಈ ಹಿಂದೆ ಕ್ಷೇತ್ರ ಕಾಂಗ್ರೆಸ್ ಹಿಡಿತದಲ್ಲಿತ್ತು. ಇದೀಗ ಬಿಜೆಪಿ ವಶದಲ್ಲಿದೆ. ಇಲ್ಲಿ ಮುಸ್ಲಿಂ ಸಮುದಾಯದ ಮತಗಳೇ ಹೆಚ್ಚಿರುವ ಹಿನ್ನೆಲೆ, ಧರ್ಮ ಆಧರಿತ ರಾಜಕಾರಣ ನಡೆಯು ತ್ತಲೇ ಇದೆ.
2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ 76,308 ಮತಗಳನ್ನು ಪಡೆಯುವ ಮೂಲಕ ಗೆಲುವು ಕಂಡಿದ್ದರು.
ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್‌ನಿಂದ ಸ್ಪರ್ಧಿಸಿ 39,235 ಮತ ಪಡೆಯುವ ಮೂಲಕ ಸೋಲನು ಭವಿಸಿದ್ದರು. ಇನ್ನು ಬಿಜೆಪಿಯಿಂದ ಅಪ್ಪು ಪಟ್ಟಣಶೆಟ್ಟಿ ಅವರು 26,235 ಮತಗಳನ್ನು ಪಡೆದು ತೀವ್ರ ಪೈಪೋಟಿ ನಡೆಸಿದ್ದರು.