Saturday, 23rd November 2024

ವೆಬ್ ಸೈಟ್ ನಿಂದ ಮತಾಂತರ ವಿಡಿಯೋ ಅಳಿಸುವಂತೆ ಆದೇಶ

ನವದೆಹಲಿ: ಮಹಿಳೆಯೊಬ್ಬಳು ಮುಸ್ಲಿಂ ಪ್ರೇಮಿಯಿಂದ ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸಿದ್ದ ಘಟನೆಯ ವಾರ್ತೆ ಮತ್ತು ವಿಡಿಯೋವನ್ನು ವೆಬ್ ಸೈಟ್ ನಿಂದ ಅಳಿಸು ವಂತೆ ದೆಹಲಿ ಉಚ್ಚ ನ್ಯಾಯಾಲಯವು ಟ್ವಿಟರ್, ಗೂಗಲ್ ಮತ್ತು ಇತರ ಸಾಮಾಜಿಕ ಮಾಧ್ಯಮದವರಿಗೆ ಆದೇಶಿಸಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ ಕಾಸ್ಟಿಂಗ್ ಮತ್ತು ಡಿಜಿಟಲ್ ಮಾನದಂಡ ಗಳ ಪ್ರಾಧಿಕಾರಕ್ಕೂ ನೋಟಿಸ್ ನೀಡಲಾಗಿದೆ. ‘ಸುದ್ದಿ ತೆಗೆದು ಹಾಕದಿದ್ದರೆ ಕ್ರಮ ಕೈಗೊಳ್ಳುವುದಾಗಿ’ ನ್ಯಾಯಾಲಯವು ಎಚ್ಚರಿಕೆ ಯನ್ನೂ ನೀಡಿದೆ.

ಅರ್ಜಿದಾರರ ಹೆಸರು ಅಜ್ಮತ್ ಅಲಿ ಖಾನ್ ಎಂದಾಗಿದೆ. ಕಳೆದ ೮ ವರ್ಷಗಳಿಂದ ಈ ಮಹಿಳೆ ಯೊಂದಿಗೆ ‘ಲಿವ್ ಇನ್ ರಿಲೇಶನ್ ಶಿಪ್’ (ಮದುವೆಯಾಗದೆ ಲಿವಿಂಗ್ ಟುಗೆದರ್) ನಲ್ಲಿದ್ದೇನೆ. ಅವನ ವಿರುದ್ಧವಿರುವ ಮತಾಂತ ರದ ಆರೋಪವೂ ಸುಳ್ಳು ಎಂದು ಹೇಳಿದ್ದಾನೆ.