ಭಾರತದಲ್ಲಿ ಕೆಲವರು ನಾಲ್ಕು ಹೆಣ್ಣನ್ನು ಮದುವೆಯಾಗಬಹುದು ಎಂದುಕೊಂಡಿದ್ದಾರೆ. ಅದು ಅವರ ಆಲೋಚನೆಯಾಗಿತ್ತು. ಆದರೆ, ನಾನು ಹೇಳುತ್ತೇನೆ ನೀವು ನಾಲ್ಕು ಮದುವೆ ಗಳನ್ನು ಮಾಡಲು ಸಾಧ್ಯವಿಲ್ಲ. ಆ ದಿನಗಳು ಕೊನೆಗೊಳ್ಳಲಿವೆ. ಭಾರತವನ್ನು ನಿಜವಾದ ಜಾತ್ಯತೀತ ರಾಷ್ಟ್ರವನ್ನಾಗಿ ಮಾಡುವ ಸಮಯ ಕೂಡ ಬಂದಿದೆ ಎಂದು ಶರ್ಮಾ ಹೇಳಿದರು.
ಬಹುಪತ್ನಿತ್ವ ಕೊನೆಗೊಳಿಸಲು ಕಾನೂನನ್ನು ಜಾರಿಗೊಳಿಸಲು ರಾಜ್ಯ ಶಾಸಕಾಂಗದ ಶಾಸಕಾಂಗ ಸಾಮಥ್ರ್ಯವನ್ನು ಪರಿಶೀಲಿ ಸಲು ರಾಜ್ಯ ಸರ್ಕಾರವು ನಾಲ್ಕು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಇತ್ತೀಚೆಗೆ ಹೇಳಿದ್ದರು. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಹೆಸರಿಸದೆ, ತೆಲಂಗಾಣದಲ್ಲಿ ರಾಜರ ಆಳ್ವಿಕೆ ಬದಲಿಗೆ ರಾಮ ರಾಜ್ಯ ಬರಲಿದೆ ಎಂದು ಹೇಳಿದರು.
ತೆಲಂಗಾಣದಲ್ಲಿ ನಮಗೆ ರಾಮರಾಜ್ಯ ಬೇಕು ಮತ್ತು ಅದು ನಮ್ಮ ಗುರಿಯಾಗಿದೆ. ಹಿಂದೂ ನಾಗರಿಕತೆಯ ಆಧಾರದ ಮೇಲೆ ನಾವು ತೆಲಂಗಾಣದಲ್ಲಿ ರಾಮರಾಜ್ಯವನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು.