ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ಒಲವು ಕೂಡ ಸಿದ್ದರಾಮಯ್ಯ ಪರ ಇದೆ. ಡಿ.ಕೆ.ಶಿವಕುಮಾರ್ ಸಹ ಸಹಕಾರ ನೀಡುತ್ತಾರೆ. ಮೇ. 18 ರಂದು ಸಿದ್ದರಾಮಯ್ಯ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸ ಬಹುದು. ಮೊದಲಿಗೆ ಸಿದ್ದರಾಮ ಯ್ಯ ಒಬ್ಬರೇ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಸಚಿವ ಸಂಪುಟ ಸ್ವಲ್ಪ ತಡವಾಗಬಹುದು. ಮೊದಲ ಸಂಪುಟದಲ್ಲೇ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ ಎಂದರು.
ನೀವು ಮಂತ್ರಿ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿ ನಾನು ಪಕ್ಷ ನಿಷ್ಠೆಯಾಗಿ ದುಡಿದಿದ್ದೇನೆ. ನಾನು ಸಚಿವ ನಾಗಲೇಬೇಕು. ನನಗೆ ಸಹಕಾರ ಸಚಿವ ಸ್ಥಾನವೇ ಬೇಕು ಎಂದರು. ಡಿ.ಕೆ.ಶಿವಕುಮಾರ್ ಅವರ ಮೇಲಿನ ದ್ವೇಷಕ್ಕಾಗಿಯೇ ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ಅವರನ್ನು ನೇಮಿಸಲಾಗುತ್ತಿದೆ. ಹೆದರಿಸುವುದು ಬ್ಲ್ಯಾಕ್ ಮೇಲ್ ರಾಜಕಾರಣ ಮಾಡುವುದು ಬಿಜೆಪಿಯ ಕೆಲಸ ಎಂದು ಹೇಳಿದ್ದಾರೆ.