ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸರು ತಪಾಸಣೆ ನಡೆಸಿದ್ದರು. ಸಕಲ ಸಿದ್ಧತೆಗಳನ್ನು ಕೂಡ ನಡೆಸಲಾಗುತಿತ್ತು. ಆದರೆ ಸಿಎಂ ಆಯ್ಕೆ ಅಂತಿಮವಾಗದ ಹಿನ್ನೆಲೆ ವಚನ ಕಾರ್ಯಕ್ರಮದ ಸಿದ್ದತೆ ಕಾರ್ಯ ಸ್ಥಗಿತ ಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಠೀರವ ಕ್ರೀಢಾಂಗಣದಲ್ಲಿ 50,000 ಜನರಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಂಠೀರವ ಕ್ರೀಢಾಂಗಣದಲ್ಲಿ ನೂತನ ಸಂಪುಟ ಸಚಿವರು ಪ್ರಮಾಣವಚನ ಕಾರ್ಯಕ್ರಮ, ಗಣ್ಯರಿಗೆ ಯಾವ ರೀತಿಯ ಆಸನದ ವ್ಯವಸ್ಥೆ, ಭದ್ರತಾ ವ್ಯವಸ್ಥೆಯ ಮಾಡಬೇಕು ಎನ್ನುವ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಿದ್ದರು.
ಸಿಎಂ ರೇಸ್ ನಲ್ಲಿದ್ದ ಡಿ.ಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಅವರಿಗೆ ಡಿಸಿಎಂ ಹುದ್ದೆ, 6 ಖಾತೆಗಳ ಆಫರ್ ನೀಡಿದೆ ಎನ್ನಲಾ ಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಂತರ ಅವರು ಸೋನಿಯಾ ಗಾಂಧಿ ಅವರ ನಿವಾಸದಿಂದ ಹೊರಟು ಸ್ವಲ್ಪ ಸಮಯದ ನಂತರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮಿಸಿದರು.