2022ರ ಮೇ 17ರಂದು ಎಲ್‌ಐಸಿ ಷೇರು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿತ್ತು. ಐಪಿಒ ದರ ಪ್ರತಿ ಷೇರಿಗೆ 949 ರೂ. ಆಗಿತ್ತು. ಈ ಮಟ್ಟದಿಂದ ದರದಲ್ಲಿ 40% ಇಳಿಕೆ ಯಾಗಿದೆ. ಪರಿಣಾಮ ಮಾರುಕಟ್ಟೆ ಮೌಲ್ಯದಲ್ಲಿ ಒಟ್ಟು 2.5 ಲಕ್ಷ ಕೋಟಿ ರೂ. ನಷ್ಟ ವಾಗಿದೆ.
ಮ್ಯೂಚುವಲ್ ಫಂಡ್‌ಗಳು ಮತ್ತು ಎಫ್‌ಐಐಗಳು ಎಲ್‌ಐಸಿಯಲ್ಲಿ ಕಳೆದೊಂದು ವರ್ಷ ದಲ್ಲಿ ಹೂಡಿಕೆಯನ್ನು ತಗ್ಗಿಸಿವೆ. ಎಲ್‌ಐಸಿಯಲ್ಲಿ ರಿಟೇಲ್ ಹೂಡಿಕೆದಾರರ ಸಂಖ್ಯೆಯೂ ಇಳಿದಿದೆ.
ಎಲ್‌ಐಸಿಯಲ್ಲಿ ಈಗ 33 ಲಕ್ಷ ರಿಟೇಲ್ ಹೂಡಿಕೆದಾರರು ಇದ್ದು, ಕಳೆದ ಒಂದು ವರ್ಷದಲ್ಲಿ 6.87 ಲಕ್ಷ ಮಂದಿ ನಿರ್ಗಮಿಸಿದ್ದಾರೆ.
21,000 ಕೋಟಿ ರೂ. ಗಾತ್ರದ ಎಲ್‌ಐಸಿ ಐಪಿಒ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇದುವರೆಗಿನ ಅತಿ ದೊಡ್ಡ ಐಪಿಒ ಆಗಿದೆ. ಹೊಸ ಹೂಡಿಕೆದಾರರನ್ನು ಆರಂಭದಲ್ಲಿ ಆಕರ್ಷಿಸಿತ್ತು. ಆದರೆ ಕಳೆದೊಂದು ವರ್ಷದಲ್ಲಿ ಉಂಟಾಗಿರುವ ಷೇರು ದರ ಕುಸಿತದ ಪರಿಣಾಮ ಲಕ್ಷಾಂತರ ರಿಟೇಲ್ ಹೂಡಿಕೆದಾರರು ನಷ್ಟಕ್ಕೀಡಾಗಿದ್ದಾರೆ. ಈಗ ಎಲ್‌ಐಸಿ ಷೇರು ದರ 568 ರೂ.ಗಳಾಗಿದೆ.