ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಯ್ಕೆ ಅಂತಿಮವಾಗಿದ್ದು, ಇದೀಗ ಸಂಪುಟ ರಚನೆ ಕಸರತ್ತು ಆರಂಭವಾಗಿದೆ.
ಡಿಕೆ ಶಿವಕುಮಾರ್ ಇಹೊರತುಪಡಿಸಿ ಬೇರೆ ಯಾರು ಡಿಸಿಎಂ ಇರುವುದಿಲ್ಲ ಎಂಬ ಮಾಹಿತಿ ಇದೆ. ಮೊದಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಹಾಗೂ ಡಿಸಿಎಂಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಒಂದೆರಡು ದಿನಗಳ ಬಳಿಕ ಸಚಿವರ ಆಯ್ಕೆ ಆಗಲಿದೆ ಎಂಬ ಮಾಹಿತಿ ಇದೆ.
25 ರಿಂದ 30 ಸಚಿವರಿಗೆ ಅವಕಾಶ 4 ರಿಂದ 5 ಸ್ಥಾನ ಖಾಲಿ ಬಿಟ್ಟುಕೊಳ್ಳಲು ನಿರ್ಧಾರ ಮಾಡಲಾಗಿದೆ. ಪ್ರಾದೇಶಿಕ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟು ಶನಿವಾರ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆಶಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಶರಣಪ್ರಕಾಶ್ ಪಾಟೀಲ್, ಅಜಯ್ ಸಿಂಗ್, ಬಿಕೆ ಹರಿಪ್ರಸಾದ್, ಕೆಜೆ ಜಾರ್ಜ್, ಈಶ್ವರ್ ಖಂಡ್ರೆ, ಎಂಬಿ ಪಾಟೀಲ್, ಆರ್ ವಿ ದೇಶಪಾಂಡೆ, ಯುಟಿ ಖಾದರ್, ರಾಮಲಿಂಗ ರೆಡ್ಡಿ, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್, ಡಾ. ಜಿ ಪರಮೇಶ್ವರ್, ಕೆಎಚ್ ಮುನಿಯಪ್ಪ ಮತ್ತಿತರರು ಅವಕಾಶ ಪಡೆಯಲಿದ್ದಾರೆ.
ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಎಂ ಬಿ ಪಾಟೀಲ್, ಲಕ್ಷ್ಮಣ್ ಸವದಿ, ಸತೀಶ್ ಜಾರಕಿಹೊಳಿ, ಆರ್ ಬಿ ತಿಮ್ಮಾಪುರ್, ಪ್ರಿಯಾಂಕ ಖರ್ಗೆ, ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ, ಎಸ್ ಎಸ್ ಮಲ್ಲಿಕಾರ್ಜುನ್ ಮಧು ಬಂಗಾರಪ್ಪ, ರುದ್ರಪ್ಪ ಲಮಾಣಿ, ನಾಗೇಂದ್ರ, ಚೆಲುವರಾಯಸ್ವಾಮಿ, ಎಚ್ ಸಿ ಮಹದೇವಪ್ಪ, ಪುಟ್ಟರಂಗಶೆಟ್ಟಿ ಹೆಸರು ಸಚಿವರಾಗುವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.
ಡಿಕೆ ಶಿವಕುಮಾರ್ ಏಕೈಕ ಡಿಸಿಎಂ ಆಗಿ ಕಾರ್ಯನಿರ್ವಹಿಸುವ ಜೊತೆಗೆ ಒಂದರಿಂದ ಎರಡು ಪ್ರಮುಖ ಖಾತೆಗಳು ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹೊಂದಿರಲಿದ್ದಾರೆ ಎಂಬ ಮಾಹಿತಿ ಇದೆ.