Sunday, 24th November 2024

ಕಾಂಗ್ರೆಸ್‌ನ ಜಾಣತನ, ಬಿಜೆಪಿಯ ಹೊಣೆಗೇಡಿತನ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಕಾಂಗ್ರೆಸಿಗರು ಸರಿಯಾದ ಬುದ್ಧಿವಂತಿಕೆಯಿಂದ ನಮ್ಮ ಬಳ್ಳಾರಿ ಭಾಗದಲ್ಲಿ ತಾಂಡಗಳೆಂದು ಕರೆಯಲ್ಪಡುವ ಅವಿದ್ಯಾವಂತ ಮತದಾರರಲ್ಲಿ ಬಿಜೆಪಿಯ ಒಳಮೀಸಲಾತಿಯ ಅಸವನ್ನು ಪ್ರಯೋಗಿಸಿ ಬಿಜೆಪಿ ವಿರುದ್ಧ ತಿರುಗಿ ಬೀಳುವಂತೆ ಮಾಡುವುದರ ಮೂಲಕ ಅಂಥ ನೂರಾರು ಜನಾಂಗದವರನ್ನು ಎಚ್ಚರಿಸಿ ಮತಗಳನ್ನಾಗಿಸಿಕೊಂಡರು.

ಅಲ್ಲಿ ಧ್ವಜಾರೋಹಣವಾಗಿದ್ದು ಭಾರತದ ರಾಷ್ಟ್ರಧ್ವಜವಲ್ಲ ಕಾಂಗ್ರೆಸ್‌ನ ಪಕ್ಷಧ್ವಜವೂ ಅಲ್ಲ. ಕರ್ನಾಟಕದಲ್ಲಿ ಭಯೋತ್ಪಾದಕರ ಉಗಮಸ್ಥಾನವೆಂದೇ ಕುಖ್ಯಾತಿ ಪಡೆದಿರುವ ಭಟ್ಕಳದ ವೃತ್ತದಲ್ಲಿ ಮತ್ತು ಶಿರಸಿಯ ಮಾರಿಕಾಂಬ ದೇಗುಲದ ಮುಂಭಾಗ ಮುಸಲ್ಮಾನರು ತಮ್ಮ ಧಾರ್ಮಿಕ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ. ಅದು ಅವರಿಗಿರುವ ಸ್ವಾತಂತ್ರ!

ಆದರೆ ಬೆಳಗಾವಿಯ ಆಸೀ-ಸೇಠ್ ಗೆಲುವಿನ ಸಂಭ್ರಮದಲ್ಲಿ ದೇಶದ್ರೋಹಿಗಳು ಪೊಲೀಸರ ಮುಂದೆಯೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ‘ಹಿಂದೂಗಳ ಹೆಣ ಹೆತ್ತಲೂ ಯಾರೂ ಇರಬಾರದು, ಕರ್ನಾಟಕದಲ್ಲಿ ಇನ್ನು ಮುಂದೆ ಮುಸ್ಲಿಂ ಹವಾ, ಅಲ್ಲಾಹು ಅಕ್ವರ್ ’-ಹೀಗೆ ಮುಸ್ಲಿಂ ಯುವಕರು ಮಾಡಿರುವ ಕಾಮೆಂಟ್‌ಗಳು ಹರಿದಾಡುತ್ತಿವೆ. ಅದರರ್ಥ ಕಾಂಗ್ರೆಸಿಗರು ಹಿಂದೂಗಳಲ್ಲ ಎಂಬುದೇ? ಇಂಥ ಮನಸ್ಥಿತಿಗಳು ಕಾಂಗ್ರೆಸ್‌ಗೆ ಓಕೆನಾ? ಕಾಂಗ್ರೆಸ್ ಪಕ್ಷದ ಗೆಲುವಿನ ಜತೆಯಲ್ಲೇ ಇಂಥ ಸೈಡ್ ಎಫೆಕ್ಟ್ ಗಳು ಹೊರಬರುತ್ತದಲ್ಲಾ, ಇಂಥ ಅಪಾಯಕಾರಿ ಲಕ್ಷಣಗಳಿಂದಾಗಿಯೇ ಪ್ರಜ್ಞಾವಂತ ಹಿಂದೂಗಳು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವುದು.

ನಾಳೆ ಸರಕಾರ ಇಂಥ ದೇಶದ್ರೋಹಿಗಳ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತದೆ ಮತ್ತು ಅದ್ಹೇಗೆ ಮುಲಾಜಿಲ್ಲದ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದು ಕಾಂಗ್ರೆಸ್ ಅದೆಷ್ಟು ಸಹ್ಯವೆಂಬುದು ಅನಾವರಣಗೊಳ್ಳಲಿದೆ. ಇನ್ನು ಮುಸಲ್ಮಾನ ಮುಖಂಡರು ದಿಢೀರ್ ಪತ್ರಿಕಾಗೋಷ್ಠಿ ಕರೆದು ನಮ್ಮ ಮುಸಲ್ಮಾನರು ಜೆಡಿಎಸ್ ಪಕ್ಷವನ್ನೂ ಬಿಟ್ಟು ಶೇ. ೯೦ ರಷ್ಟು ಮಂದಿ ಕಾಂಗ್ರೆಸ್‌ಗೇ ಮತ ನೀಡಿದ್ದಾರೆ. ಹೀಗಾಗಿ ಐದು ಮುಸ್ಲಿಂ ಶಾಸಕರಿಗೆ ಮಂತ್ರಿಗಿರಿ, ಒಬ್ಬರಿಗೆ ಉಪಮುಖ್ಯಮಂತ್ರಿ ಮಾಡಬೇಕು. ಅದರಲ್ಲಿ ಗೃಹ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆಗೆ ಆಗ್ರಹಿಸಿದ್ದಾರೆ.

ಈ ಒಪ್ಪಂದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಬ್ಬರೂ ಮೊದಲೇ ಮಾತು ನೀಡಿದ್ದಾರೆ ಮತ್ತು ಈಗ ಒಪ್ಪಿಕೊಂಡು ನಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಹಿಂದೂಗಳ ಬ್ರಾಂಡ್ ಎಂದು ಹೇಳಿಕೊಳ್ಳುವ ರಾಜ್ಯ ಬಿಜೆಪಿ ನಾಯಕರು ಎಂಥವರು ಎಂಬುದನ್ನು ಮುಲಾಜಿಲ್ಲದೇ ಬಿಚ್ಚಿಡಬೇಕಿದೆ. ಇವರ ನಡವಳಿಕೆ ಹೇಗಿತ್ತೆಂದರೆ ಹೋಟೆಲ್‌ಗೆ ಹೋಗಿ ವೇಟರ್‌ಗೆ ಆರ್ಡರ್ ಮಾಡಿ ಹರಟೆಗೆ ಕೂರುವಂತೆ, ಹಿಂದೂಗಳು ತಾವಾಗೇ ಬಂದು ನಮಗೆ ಮತ ನೀಡುತ್ತಾರೆ ಎಂಬ ಧಾರ್ಷ್ಟ್ಯವನ್ನು
ತೋರಿದರು. ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಏಸಪ್ಪನ ಪ್ರತಿಮೆ ಮಾಡುತ್ತಾರೋ, ಮಸೀದಿಗೆ ಹೋಗಿ ನಮಾಜ್ ಮಾಡುತ್ತಾರೋ ಅದು ಬೇರೆ ವಿಚಾರ.

ಆದರೆ ಕಂಡಕಂಡ ದೇವಸ್ಥಾನಗಳಿಗೆ ಹೋಗಿ ಹೋಮಹವನಗಳನ್ನು ಮಾಡಿಸಿ ತಾನು ಮುಖ್ಯಮಂತ್ರಿಯಾಗಲೇ ಬೇಕೆಂದು ಹೊತ್ತ ಹರಕೆ ಮಾಡಿದ ಪ್ರಯತ್ನವಿದೆಯಲ್ಲಾ, ಅಂಥ ಹರಕೆಯನ್ನೂ ಯಾವ ಬಿಜೆಪಿ ನಾಯಕನೂ ಮಾಡಲಿಲ್ಲ. ಸಾಕ್ಷಾತ್ ದೇವರೇ ಬಂದು ನಮಗೆ ಮತಹಾಕುತ್ತಾನೆ ಎಂಬಂತ್ತಿತ್ತು ಇವರ ವರ್ತನೆ. ಹೋಗಲಿ, ಮತದಾರರಲ್ಲಿ ‘ನಮ್ಮಲ್ಲೇನಾದರೂ
ತಪ್ಪಿದ್ದರೆ ದಯವಿಟ್ಟು ಕ್ಷಮಿಸಿಬಿಡಿ, ಮುಂದೆ ಯಾವ ತಪ್ಪನ್ನೂ ಮಾಡದೆ ಅತ್ಯುತ್ತಮ ಆಡಳಿತ ನೀಡು ತ್ತೇವೆ, ಮತ್ತೊಂದು ಬಾರಿ ನಂಬಿ ನಮಗೇ ಅವಕಾಶ ಕೊಡಿ. ನಮ್ಮ ಪಕ್ಷವನ್ನು ಕೈಬಿಡಬೇಡಿ’ ಹೀಗೆ ದಯನೀಯವಾಗಿ ಯಾವ ನಾಯಕನೂ
ಮತಭಿಕ್ಷೆ ಯಾಚಿಸಲಿಲ್ಲ.

‘ಹೇ, ಅದೆಲ್ಲಾ ಬೇಕಿಲ್ಲ, ನಮ್ಮ ಜನ ದೇಶಾಭಿಮಾನಿಗಳಾಗಿಬಿಟ್ಟಿದ್ದಾರೆ, ಮೋದಿಯವರ ಮುಖ ನೋಡಿ ವೋಟ್ ನೀಡುತ್ತಾರೆ, ನಾವು ಸುಮ್ಮನೆ ಕೈ ಮೇಲೆತ್ತಿ ಆಡಿಸಿದರೆ ಸಾಕು’ ಎಂದು ಹೊಣೆಗೇಡಿಗಳಾದರು. ಕೇಂದ್ರ ಬಿಜೆಪಿ ಯಡಿಯೂರಪ್ಪನವರಿಂದ
ಉಣ್ಣುವ ತಟ್ಟೆಯನ್ನು ಕಿತ್ತುಕೊಂಡಂತೆ ಕೆಳಗಿಳಿಸಿದರು. ಅದಕ್ಕೂ ಮೊದಲು ಭೀಕರ ಪ್ರವಾಹದಲ್ಲಿ ಅವರಿಗೆ ನ್ಯಾಯವಾಗಿ ಸಹಕರಿಸದೆ ಪರಿಹಾರ ನೀಡುವುದರಲ್ಲಿ ಗೋಳಾಡಿಸಿಬಿಟ್ಟರು.

ಆನಂತರ ಸಚಿವ ಸಂಪುಟ ವಿಸ್ತರಣೆಗೂ ಸ್ಪಂದಿಸದೆ ಅನೇಕ ಬಾರಿ ದೆಹಲಿಗೆ ಬಂದರೂ ಸರಿಯಾದ ಗೌರವ ನೀಡದೆ ವಾಪಸ್ಸು ಕಳಿಸಿದರು. ಇದು ಹೇಗಿತ್ತೆಂದರೆ ಸಮಸ್ತ ಲಿಂಗಾಯಿತ ಮಠಾಧೀಶರು ರಸ್ತೆಗಿಳಿದು ಯಡಿಯೂರಪ್ಪನವರ ಪರ ಪ್ರತಿ
ಭಟಿಸಿದರು. ‘ಯಡಿಯೂರಪ್ಪನವರ ಕಣ್ಣೀರಿನ ಶಾಪಕ್ಕೆ ರಾಜ್ಯ ಬಿಜೆಪಿ ಹಾಳಾಗಿಹೋಗುತ್ತದೆ’ ಎಂದು ಶಪಿಸಿದರು.

ಇನ್ನು ಂi ಡಿ ಂi g g ಜಾಗದಲ್ಲಿ ಉತ್ತರಪ್ರದೇಶ, ಅಸ್ಸಾಂ, ಮಧ್ಯಪ್ರದೇಶದಲ್ಲಿರುವಂಥ ಫಾರ್ ಬ್ರಾಂಡ್ ಮುಖ್ಯಮಂತ್ರಿ
ಯನ್ನಾದರೂ ಕೂರಿಸುತ್ತಾರೆಂದು ಜನ ನಿರೀಕ್ಷಿಸಿದ್ದರು. ಆದರೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಂತೆ
ಕಾಣುವುದಕ್ಕಿಂತ ಮುಖ್ಯಮಂತ್ರಿಯ ಪಾತ್ರವನ್ನು ಮಾಡುತ್ತಿರುವಂತೆ ಕಂಡರು. ಅಪ್ಪು ಸಾವಿನ ಸಂದರ್ಭ ಒಂದನ್ನು ಹೊರತುಪಡಿಸಿದರೆ ಇನ್ನಾವ ವಿಚಾರದಲ್ಲೂ ಅವರು ಮುಖ್ಯಮಂತ್ರಿ ಛಾಪು ತೋರಲಿಲ್ಲ. ಇನ್ನುಳಿದಂತೆ ಸಕಲರಿಗೂ ಒಳ್ಳೆಯ
‘ಮಾಮ’ ನಂತೆ ಕಂಡರೇ ಹೊರತು ಕರ್ಮಠ ಮುಖ್ಯಮಂತ್ರಿಯಾಗಿ ಗೋಚರಿಸಲೇ ಇಲ್ಲ.

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಬಳ್ಳಾರಿ ಕೊಪ್ಪಳ ಸುತ್ತಮುತ್ತಲಿನ ಕ್ಷೇತ್ರಗಳನ್ನು ಕೇಸರಿಮಯ ಮಾಡಿದ್ದ ಶ್ರೀರಾಮುಲು ಮತ್ತು ರೆಡ್ಡಿ ಬ್ರದರ್ಸ್‌ಗಳನ್ನು ಸರಿಯಾಗಿ ಬಳಸಿಕೊಳ್ಳದೆ ಅವರನ್ನು ಕೇವಲ ಅಭ್ಯರ್ಥಿಗಳನ್ನಾಗಿಸಿ ದರು. ಇನ್ನು ಮಂತ್ರಿಗಳಾಗಿದ್ದ ಬಹುತೇಕ ಬಿಜೆಪಿ ನಾಯಕರು ಪಕ್ಷದ ಧ್ಯೇಯೋ ದ್ದೇಶಗಳ ಪೂರಕವಾಗಿ ವರ್ತಿಸದೆ ಬಯಲು ನಾಟಕದ ಪಾತ್ರಧಾರಿಗಳಂತೆ ಅಬ್ಬರಿಸದರೇ ಹೊರತು ಜನರಲ್ಲಿ ನಂಬಿಕೆ ವಿಶ್ವಾಸವನ್ನು ಹುಟ್ಟಿಸುವಂಥ ಯೋಗ್ಯತೆಯನ್ನು
ಪ್ರದರ್ಶಿಸಲಿಲ್ಲ. ಇವರ ಬಲಹೀನತೆಗಳು ಯಾವ ಮಟ್ಟಕ್ಕೆ ಇಳಿದಿತ್ತೆಂದರೆ ಹೆಣ್ಣುಮಗಳೊಬ್ಬಳನ್ನು ನೀಚರು ‘ನೀನು ವೇಶ್ಯೆ, ನೀನು ವೇಶ್ಯೆ’ ಎಂದು ನಿಂದಿಸಿದಂತೆ ಸಿಕ್ಕಸಿಕ್ಕವರೆಲ್ಲಾ ೪೦ ಪರ್ಸೆಂಟ್ ಸರಕಾರ ಎಂದು ನಿಂದಿಸುತ್ತಿದ್ದರೂ ರಾಜ್ಯ ಬಿಜೆಪಿ
ನಾಯಕರಿಗೆ ಏನೂ ಅನ್ನಿಸಲಿಲ್ಲ.

ಈ ಒಂದು ನಿಂದನೆಯಿಂದಲೇ ಕಾಂಗ್ರೆಸಿಗರು ರಾಜ್ಯ ಬಿಜೆಪಿಯ ‘ವಸಾಪಹರಣ’ ಮಾಡಿಬಿಟ್ಟರು. ಮುಂದೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ನಾಗಿ ಬಸವನಗೌಡ ಯತ್ನಾಳ್ ಪಾಟೀಲ್ ಅವರನ್ನು ನೇಮಿಸಿದರೆ ಮುಂದಿನ ವರ್ಷ ಲೋಕಸಭೆ ಚುನಾವಣೆಯೊತ್ತಿಗೆ ಬಿಜೆಪಿಗೆ ಒಂದಷ್ಟು ಗಂಡಸುತನ ದೊರಕಬಹುದು.

ಇನ್ನು ಕಾಂಗ್ರೆಸಿಗರು ಸರಿಯಾದ ಬುದ್ಧಿವಂತಿಕೆಯಿಂದ ನಮ್ಮ ಬಳ್ಳಾರಿ ಭಾಗದಲ್ಲಿ ತಾಂಡಗಳೆಂದು ಕರೆಯಲ್ಪಡುವ ಅವಿದ್ಯಾವಂತ ಮತದಾರರಲ್ಲಿ ಬಿಜೆಪಿಯ ಒಳಮೀಸಲಾತಿಯ ಅಸವನ್ನು ಪ್ರಯೋಗಿಸಿ ಬಿಜೆಪಿ ವಿರುದ್ಧ ತಿರುಗಿಬೀಳುವಂತೆ
ಮಾಡುವುದರ ಮೂಲಕ ಅಂಥ ನೂರಾರು ಜನಾಂಗದವರನ್ನು ಎಚ್ಚರಿಸಿ ಮತಗಳನ್ನಾಗಿಸಿಕೊಂಡರು. ಉದಾಹರಣೆಗೆ ಶ್ರೀರಾಮುಲು ಆನಂದ್‌ಸಿಂಗ್ ಅವರಂಥ ಪಕ್ಕಾ ಗೆಲುವಿನ ಅಭ್ಯರ್ಥಿಗಳು ೨೦ ಸಾವಿರಕ್ಕೂ ಹೆಚ್ಚು ಅಂತರದಲ್ಲಿ
ಸೋಲುವಂತೆ ಆಗಿದ್ದು ಇಂಥ ತಾಂಡಗಳ ಮತಗಳು ಕೈಬಿಟ್ಟಿದ್ದರಿಂದ.

ಕೇಂದ್ರ ಬಿಜೆಪಿ ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ತಾಣಗಳನ್ನು ಸರಿಯಾಗಿ ಬಳಸಿಕೊಂಡು ಮತದಾರರಲ್ಲಿ ದೇಶಾಭಿಮಾನದ ಕಿಚ್ಚನ್ನು ಹುಟ್ಟಿಸಿ ಎಚ್ಚೆತ್ತುಕೊಳ್ಳುವಂತೆ ಮಾಡಿ ದೇಶಾದ್ಯಂತ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುತ್ತಾ
ಬಂದಿದ್ದರೆ ರಾಜ್ಯ ಬಿಜೆಪಿ ಇಂಥದರಲ್ಲೂ ಎಚ್ಚೆತ್ತುಕೊಳ್ಳದೆ ಚುನಾವಣೆಯ ಡ್ರಾಮ ಪ್ರಾಕ್ಟಿಸ್ ಮಾಡುತ್ತಾ ಬಾಲಿಶವಾದರು. ಆದರೆ ಕಾಂಗ್ರೆಸ್ ಇದೇ ಸಾಮಾಜಿಕ ತಾಣಗಳನ್ನು ಸಮರ್ಥವಾಗಿ ಬಳಸಿಕೊಂಡಿತು. ಅದೊಂದು ಜಾಹೀರಾತಿನಲ್ಲಿ ಮನೆಯ ಬಾಗಿಲ ಮುಂದೆ ನಿಂತ ಬಿಜೆಪಿಗೆ ಗಂಡಹೆಂಡತಿ ಸಿಲಿಂಡರ್ ಪೆಟ್ರೋಲ್ ಬೆಲೆಗೆ ಸಂಬಂಧಿಸಿದಂತೆ ಜನರನ್ನು ಬಿಜೆಪಿಯ ವಿರುದ್ಧ ಪ್ರಚೋದಿಸುವಂತಿತ್ತು.

ಇಂಥ ಹತ್ತಾರು ಜಾಹೀರಾತುಗಳನ್ನು ಉಪೇಂದ್ರರಂಥ ಸರಿಯಾದ ನಿರ್ದೇಶಕನನ್ನು ಹಿಡಿದುಕೊಂಡು ತಯಾರು ಮಾಡಿದ್ದು ಕಾಂಗ್ರೆಸ್‌ನ ಚುನಾವಣಾ ಪ್ರಚಾರ ತಂಡದ ಹೆಗ್ಗಳಿಕೆಯಾಯಿತು. ಈಗ ನೋಡಿ ಕಾಂಗ್ರೆಸ್ ಕೊಟ್ಟ ಮಾತನ್ನು  ಉಳಿಸಿಕೊಳ್ಳಲು ಗೋಹತ್ಯೆ ನಿಷೇಧ, ಮತಾಂತ ನಿಷೇಧ, ಎನ್‌ಇಪಿ ಕಾನೂನುಗಳನ್ನು ಕಿತ್ತೆಸೆಯಬಹುದು. ಪಿಎಫ್ ಐ, ಎಸ್‌ಡಿಪಿಐ ಯಂಥ ಅಪಾಯಕಾರಿ ಸಂಘಟನೆಗಳ ಪರ ‘ಮಾತೃ ಧೋರಣೆ’ ಮೃದುಧೋರಣೆ ತೋರುತ್ತದೆಂಬ ನಂಬಿಕೆಗೆ ಪಾತ್ರವಾಗಿದೆ.

ಇನ್ನು ಗೋಸೇವಕರು ಗೋಕಳ್ಳರ ಮಧ್ಯೆ ನೈತಿಕ ಪೊಲೀಸ್‌ಗಿರಿ ಹೆಚ್ಚಾಗಿ ಇನ್ನೇನೇನು ದುರ್ಘಟನೆಗಳು ನಡೆಯುತ್ತ
ವೆಯೋ? ಮತಾಂತರ ತಡೆಯಲು ಹೋಗಿ ಅದರಿಂದ ತಡೆದವರ ಮೇಲೆಯೇ ಉಲ್ಟಾ ಕೇಸುಗಳು ದಾಖಲಾಗಿ ಜೈಲು ಸೇರುತ್ತಾರೆಯೋ, ಅಷ್ಟೇ ಆದರೆ ಪರವಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಗಂಜಿಗಿರಾಕಿಗಳು, ಸಾಹಿತಿಗಳು,
ವಿಚಾರವಾದಿಗಳು, ಪತ್ರಕರ್ತರು, ಆಯಾಕಟ್ಟಿನ ಸ್ಥಳಗಳಲ್ಲಿ ಆಪ್ತ ಸಲಹೆಗಾರ, ಮಾಧ್ಯಮ ಸಲಹೆಗಾರ, ಮಾಧ್ಯಮ ಕಾರ್ಯದರ್ಶಿ ಎಂಬ ವಿವಿಧ ಹುದ್ದೆಗಳಲ್ಲಿ ವಕ್ಕರಿಸಿಕೊಳ್ಳುತ್ತಾರೆ.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸರಿಯಿದ್ದರೂ ಇಂಥವರು ಅವರ ತಲೆಗಳನ್ನು ಬಿಡುವುದಿಲ್ಲ. ಅವರನ್ನು ಸುತ್ತಿಕೊಂಡು ತಮ್ಮ ಕಿತ್ತುಹೋದ ಜಾತ್ಯತೀತ ಸಿದ್ಧಾಂತಗಳನ್ನು ಸರಕಾರದ ತಲೆಗೆ ತುಂಬಿ ವಿಕಾರ ಮೆರೆಯುತ್ತಾರೆ. ಸಾಲದೆಂಬಂತೆ ಹೊಟ್ಟೆಪಾಡಿನ ಪೋಸ್ಟ್‌ಪೇಡ್ ಪ್ರೀಪೇಡ್ ಗಿರಾಕಿಗಳ ಆರ್ಭಟ ತಿಗಣೆ ಸೊಳ್ಳೆಗಳಂತೆ ಹೆಚ್ಚಾಗುತ್ತವೆ. ಇವರೊಂದಿಗೆ ವಿಕಲ
ಮನಸ್ಥಿತಿಗಳು, ಆಸ್‌ಕಿಂಗ್‌ನಂಥ ಖಳನಟರು, ಕನವರ್ಟೆಡ್ ಕಾಮಿಡಿಗಳು, ಡೋಂಗಿಗಳು, ಹರ್ಬನ್ ನಕ್ಸಲ್‌ಗಳು ಸಮಯ ಸಿಕ್ಕಾಗಲೆಲ್ಲಾ ಹಿಂದುತ್ವದ ವಿರುದ್ಧ ಮಸಾಲೆ ಅರೆಯುತ್ತಾರೆ.

ರಾಜಕೀಯವಾಗಿ ಡಿ.ಕೆ. ಶಿವಕುಮಾರ್ ಮೇಲ್ನೋಟಕ್ಕೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಪರ ವ್ಯಕ್ತಿಯಾಗಿ ಕಾಣಬಹುದು. ಆದರೆ ತಾನು ಕೆಂಪೇಗೌಡ-ಗೌರಮ್ಮನ ಮಗ, ನಾನು ಹಿಂದೂ, ನಾನೂ ಹನುಮನ ಭಕ್ತ ಎಂದೆಲ್ಲಾ ಹೇಳಿಕೊಂಡು ಮನೆಯ ದೇವರಿಂದ ಆರಂಭಿಸಿ ಶೃಂಗೇರಿ ಕೇರಳ ತಮಿಳುನಾಡುಗಳನ್ನು ಸುತ್ತಿ ವೈದಿಕರಿಂದ ಹೋಮಹವನ ವಿಶೇಷ
ಪೂಜೆ ಗಳನ್ನು ಮಾಡಿಸಿ ತಾನೊಬ್ಬ ಟಿಪಿಕಲ್ ಹಿಂದೂ ಸಂಪ್ರದಾಯಸ್ಥ ಮತ್ತು ಹಿಂದುತ್ವವನ್ನು ನಂಬಿರುವವರಾಗಿದ್ದಾರೆ. ಹೀಗಾಗಿ ಕೇವಲ ಮುಸಲ್ಮಾನ ಅಲ್ಪಸಂಖ್ಯಾತ ಪರವಾಗಿ ಅಸಹಜವಾಗಿ ನಡೆದುಕೊಳ್ಳದೇ ಸಂವಿಧಾನದ ಪೂರಕವಾಗಿ
ಹಿಂದೂಗಳಲ್ಲಿರುವ ಅನುಮಾನ, ಅಸಹನೆಗಳನ್ನು ಹೋಗಲಾಡಿಸಿ ಬೇರೆಯದೇ ಆದ ಡಿ.ಕೆ.ಶಿವಕುಮಾರ್ ಆಗಿ ‘ಎಮರ್ಜ್’
ಆಗುವ ಸಾಮರ್ಥ್ಯವನ್ನು ತೋರಬಹುದಾಗಿದೆ.

ಅದಕ್ಕಾಗಿ ಈ ನಲಪಾಡ್, ಜಮೀರ್‌ನಂಥ ಅತಿರೇಖ ವ್ಯಕ್ತಿಗಳನ್ನು, ಸಮಯಸಾಧಕರನ್ನು ದೂರವಿಡಬೇಕಷ್ಟೇ! ಇನ್ನು ಆರ್ಥಿಕತಜ್ಞ, ಕಾನೂನು ಪಂಡಿತ ಸಿದ್ದರಾಮಯ್ಯನವರ ಬಗ್ಗೆ ಹೇಳುವುದಕ್ಕಿಂತ ನೋಡುವುದೇ ಒಳ್ಳೆಯದು. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಜನಾದೇಶ ಪಡೆದ ಕಾಂಗ್ರೆಸ್‌ಗೆ ಮುಸಲ್ಮಾನರಿಗಿಂತ ಹೆಚ್ಚು ಹಿಂದೂಗಳು ಮತ ನೀಡಿದ್ದಾರೆಂಬುದು ನೆನಪಿರಲಿ. ಬಹುಪಾಲು ಹಿಂದೂಗಳು ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಮಾರುಹೋಗಿ ‘ಅಯ್ಯೋ, ನಮಗೊಂದಿಷ್ಟು ದುಡ್ಡು ಉಳಿದರೆ ಸಾಕಪ್ಪ, ಕಾಂಗ್ರೆಸ್ ಆದರೇನು ಬಿಜೆಪಿಯಾದರೇನು’ ಎಂಬ ನಂಬಿಕೆಯಲ್ಲಿ ಮತ ನೀಡಿದ್ದಾರೆ.

ಆದರೆ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಾಲುಗಳಿಗಿಂತ ಮೊದಲಾಗಿ ಅಂಥ ತೋಟದಲ್ಲಿ ‘ಜನನಿಯ ಜೋಗುಳ ವೇದದ ಘೋಷ’, ‘ರಾಘವ ಮಧುಸೂದನರವತರಿಸಿದ’ (ರಾಘವ=ರಾಮ, ಮಧುಸೂಧನ=ಕೃಷ್ಣ) ‘ಜನಕನ (ಜನಕ= ಸೀತಾಮಾತೆಯ ತಂದೆ, ಪ್ರಜಾಡಳಿತದಲ್ಲಿ ಸರಿಸಾಟಿಯಿಲ್ಲದ ರಾಜ) ಹೋಲುವ ದೊರೆಗಳ ಧಾಮ…’ ಸಾಲುಗಳಿಗೂ
ಸಮಾನತೆಯ ಅನುಭೂತಿ ನೀಡುವುದನ್ನು ಕಾಂಗ್ರೆಸ್ ಮರೆಯದೆ ಹಿಂದೂಗಳೂ ಹೆಮ್ಮೆಪಡುವಂಥ ಆಡಳಿತವನ್ನು ನೀಡುವುದೇ? ಕಾದು ನೋಡೋಣ.