ವಿಶಾಖಪಟ್ಟಣ: ಎರಡು ಸಾವಿರ ಮುಖಬೆಲೆಯ ನೋಟು ಚಲಾವಣೆ ಹಿಂಪಡೆದಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ಧಾರವನ್ನು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸ್ವಾಗತಿಸಿದ್ದಾರೆ.
2000 ನೋಟು ಗಳನ್ನು ನಿಷೇಧಿಸುವ ನಿರ್ಧಾರ ಖಂಡಿತವಾಗಿಯೂ ಉತ್ತಮ ಸಂಕೇತ ವಾಗಿದೆ. ನೋಟುಗಳ ರದ್ದತಿ ಭ್ರಷ್ಟಾಚಾರವನ್ನು ತಡೆಯುತ್ತದೆ. ರಾಜಕಾರಣಿಗಳು ಮತದಾರರಿಗೆ ಹಣ ಹಂಚುವ ಮೂಲಕ ಚುನಾವಣೆ ಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.
ಆಂಧ್ರ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಗನ್ ಮೋಹನ್ ರೆಡ್ಡಿ ಇಡೀ ರಾಜ್ಯ ವನ್ನು ಲೂಟಿ ಮಾಡಲು ಹೊರಟಿ ದ್ದಾರೆ. ರಾಜ್ಯದಲ್ಲಿ ಎಲ್ಲಾ ವಸ್ತುಗಳ ಬೆಲೆಗಳು, ಅನಿಲ ಇಂಧನ ಮತ್ತು ಇತರ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ ಎಂದು ವಾಗ್ದಾಳಿ ನಡೆಸಿದ ಅವರು, ಈ ಅನ್ಯಾಯದ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ, ಅಂತಹ ವ್ಯಕ್ತಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕಲಾಗುತ್ತಿದೆ ಎಂದು ಆರೋಪಿಸಿದರು.