Friday, 18th October 2024

ಸ್ಕೈಪ್ ಕರೆ ಮೂಲಕ ವೈದ್ಯೆಗೆ 4.47 ಕೋಟಿ ರೂ. ವಂಚನೆ

ನವದೆಹಲಿ: ಮಹಾರಾಷ್ಟ್ರ ಮಾದಕವಸ್ತು ವಿಭಾಗದ ಅಧಿಕಾರಿಗಳು ಎಂದು ಹೇಳಿಕೊಂಡ ವಂಚಕರು ವೈದ್ಯೆಯೊಬ್ಬರ ಉಳಿತಾಯದಿಂದ 4.47 ಕೋಟಿ ರೂಪಾಯಿ ಲಪಟಾಯಿಸಿ ದ್ದಾರೆ.

ವೈದ್ಯೆಗೆ ಬಂದಿದ್ದ ಫೆಡ್‌ಎಕ್ಸ್ ಕೊರಿಯರ್ ಪ್ಯಾಕ್‌ನಲ್ಲಿ ಬೃಹತ್ ಪ್ರಮಾಣದ ಮಾದಕ ವಸ್ತು “ಎಂಡಿಎಂಎ” ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೈದ್ಯೆಗೆ ಮಾಹಿತಿ ನೀಡಿ ಹಣ ವಸೂಲಿ ಮಾಡಲಾಗಿದೆ. ಮಾದಕ ವಸ್ತುಗಳ ಮಾರಾಟ ದಿಂದ ಬಂದ ಹಣವನ್ನು ನೀವು ಸ್ವೀಕರಿಸಿದ್ದೀರಿ ಎಂದು ಆಪಾದಿಸಿದ ವಂಚಕರು ವೈದ್ಯೆಯ ಖಾತೆಯ ಹಣವನ್ನು ತಾತ್ಕಾಲಿಕ ವಾಗಿ ಹಸ್ತಾಂತರಿಸುವಂತೆ ಬಲವಂತಪಡಿಸಿದರು ಎಂದು ತಿಳಿದು ಬಂದಿದೆ.

ಸ್ಕೈಪ್ ಕರೆಯ ಮೂಲಕ ವೈದ್ಯೆಯನ್ನು ಸಂಪರ್ಕಿಸಿದ ವಂಚಕರು ಸುಳ್ಳುಗಳ ಬಲೆ ಹೆಣೆದು, ಅಂಧೇರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಆರ್‌ಬಿಐ ಅಧಿಕಾರಿಗಳು, ಮುಂಬೈ ಪೊಲೀಸ್ ಡಿಸಿಪಿ, ಕಸ್ಟಮ್ಸ್ ಅಧಿಕಾರಿಗಳು ಹಾಗೂ ಮಾದಕ ವಸ್ತು ವಿಭಾಗದ ಪೊಲೀಸರು ಎಂದು ನಂಬಿಸಿ ವಂಚನೆ ಜಾಲಕ್ಕೆ ಬೀಳಿಸಿದ್ದಾರೆ.