ತುಂಟರಗಾಳಿ
ಸಿನಿಗನ್ನಡ
ಸ್ಯಾಂಡಲ್‌ವುಡ್‌ನಲ್ಲಿ ಅನೇಕ ನಟರು ತಮಗೆ ತಾವೇ ಬಿರುದು ಕೊಟ್ಟುಕೊಳ್ಳುವ ಟ್ರೆಂಡ್ ಹೊಸದೇನಲ್ಲ. ಒಬ್ಬರನ್ನು ನೋಡಿ
ಒಬ್ಬರು ಕಾಂಪಿಟೇಶನ್ ಮೂಲಕ ತಮಗೆ ತಾವೇ ಹೆಸರು ಕೊಟ್ಟುಕೊಳ್ಳುತ್ತಾರೆ. ಇಲ್ಲಿ, ಗೋಲ್ಡನ್ ಸ್ಟಾರ್ ಬಂದ್ರೆ, ಅವರ ಹಿಂದೇ ಡೈಮಂಡ್ ಸ್ಟಾರ್ ಬರ್ತಾರೆ. ಒಬ್ಬ ಕಿಂಗ್ ಆದ್ರೆ ಇನ್ನೊಬ್ಬ ಸುಲ್ತಾನ್ ಆಗ್ತಾನೆ. ಒಬ್ಬ ಬಾದ್ ಶಾ ಅಂದ್ರೆ, ಮತ್ತೊಬ್ಬ ಬಾಸ್ ಅಂತಾನೆ.
ಕರುನಾಡ ಚಕ್ರವರ್ತಿಯ ಬೆನ್ನ ಹಿಂದೆ ಅಭಿನಯ ಚಕ್ರವರ್ತಿ ಬರ್ತಾನೆ. ಹೋಗಲಿ, ಅವರೇನೋ ಫೀಲ್ಡನಲ್ಲಿ ಹೆಸರು ಮಾಡಿದ ಮೇಲೆ ನಾಮಕರಣ ಮಾಡಿಕೊಂಡವರು. ಆದರೆ ಹೆಸರು ಮಾಡುವ ಮುನ್ನವೇ ತಮಗೆ ತಾವು ದೊಡ್ಡ ದೊಡ್ಡ ಹೆಸರುಗಳನ್ನು ಇಟ್ಟುಕೊಳ್ಳೋದು ಎಷ್ಟು ಸರಿ ಅನ್ನೋದು ಸಿನಿಕರ ಪ್ರಶ್ನೆ. ಅಂದಹಾಗೆ, ಈ ಶೋ ಕಾಲ್ಡ್ ಸ್ಟಾರ್, ಸಾರಿ, ಸೋ ಕಾಲ್ಡ್ ಸ್ಟಾರ್‌ಗಳು ಇತ್ತೀಚೆಗೆ ಜಾಸ್ತಿ ಆಗ್ತಾ ಇದ್ದಾರೆ. ಈ ಪಟ್ಟಿಯಲ್ಲಿ ಧನ್ವೀರ್ ಅವರಂಥವರೂ ಇದ್ದಾರೆ.
ಆದ್ರೆ, ಯಾರಿವರು ಅಂತ ಕೇಳಬೇಡಿ. ಪಾಪ ತಮಗೆ ತಾವೇ ಬಿರದು ಕೊಟ್ಕೊಂಡಿರೋ ಅವರಿಗೆ ಶಾನೆ ಬೇಸರ ಆಗುತ್ತೆ. ಆದರೂ ನಮ್ಮ ಚಿತ್ರರಂಗ ದಲ್ಲಿ ಬಹುತೇಕರಿಗೆ ಉತ್ತರ ಗೊತ್ತಿಲ್ಲದ ಪ್ರಶ್ನೆ ಇದು. ಈ ಹಿಂದೆ ಸಿಂಪಲ್ ಸುನಿ ಅವರ ಬಜಾರ್ ಚಿತ್ರದಲ್ಲಿ ಅಭಿನಯಿಸಿದ್ದ ಧನ್ವೀರ್ ಆ ನಂತರ ತಮಗೆ ಸ್ಯಾಂಡಲ್ ವುಡ್‌ನ ಶೋಕಿದಾರ್, ಅಭಿಮಾನಿಗಳ ಶೋಕಿದಾರ್ ಎಂದೆಲ್ಲ ಕರೆದುಕೊಂಡಿದ್ದರು. ಇನ್ನೂ ನಮ್ಮ ಚಿತ್ರರಂಗದ ನಿರ್ದೇಶಕರು ಇವರನ್ನು ಕರೆದು ಅವಕಾಶ ಕೊಡುವ ಮಟ್ಟಕ್ಕೇ ಈ ಹುಡುಗ ಬೆಳೆದಿಲ್ಲ. ಆದ್ರೆ ಬಿರುದು ಇಟ್ಕೊಳ್ಳೋ ಶೋಕಿ ಮಾತ್ರ ಕಮ್ಮಿ ಇಲ್ಲ.
ಇಂಥವರ ಸಿನಿಮಾಗಳು ಬಿಡುಗಡೆ ಆದಾಗ ಚಿತ್ರಮಂದಿರದಲ್ಲಿ ಎಲ್ಲಾ ಶೋ ಹೌಸ್ ಫುಲ್ ಆಗುತ್ತೋ ಗೊತ್ತಿಲ್ಲ. ಆದ್ರೂ
ಇವರು ಶೋಕಿದಾರ್. ಅದಾದ ಮೇಲೆ ಅವರಿಗೆ ಈಗ ಅಭಿಮಾನಿ ಸಂಘಗಳು ಕೂಡಾ ಹುಟ್ಟಿಕೊಂಡು, ಧನ್ವೀರ್ ಸ್ಟಾರ್ ಆದಮೇಲೆ ಅವರೆಲ್ಲ ಮುಂದಿನ ದಿನಗಳಲ್ಲಿ ಮೈ ಭೀ ಶೋಕಿದಾರ್ ಅಂತ ಹೇಳಿಕೊಂಡು ತಿರುಗಾಡೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಬಜಾರ್ ಚಿತ್ರದಲ್ಲಿ ಪಾರಿವಾಳ ಹಾರಿಸಿದ್ದ ಧನ್ವೀರ್, ಶೋಕಿದಾರ್ ಆಗಿದ್ದನ್ನ ನೋಡಿ, ಏನ್ ಕಾಗೆ ಹಾರಿಸ್ತಾ ಇದ್ದೀರಾ ಅಂತ ಸಿನಿಪ್ರಿಯರಿಗೆ ಉತ್ತರ ಇನ್ನೂ ಸಿಕ್ಕಿಲ್ಲ.
ಲೂಸ್ ಟಾಕ್
ಸಿದ್ದರಾಮಯ್ಯ (ಕಾಲ್ಪನಿಕ ಸಂದರ್ಶನ)
ಮುಖ್ಯಮಂತ್ರಿಗಳೇ ಕಂಗ್ರಾಜುಲೇಶ. ಆದ್ರೂ, ಕಳೆದ ಬಾರಿ ನಾನು ಚುನಾವಣಾ ರಾಜಕಾರಣದಿಂದ ನಿವೃತ್ತಿ ಆಗ್ತೀನಿ ಅಂತ ಹೇಳಿದ್ರಿ. ಈಗ ಮತ್ತೆ ಸಿಎಂ ಆಗ್ತಾ ಇದ್ದೀರಿ. ಈ ಬಗ್ಗೆ ಏನ್ ಹೇಳ್ತೀರಾ?
-ಅಯ್ಯೋ, ರೆಡ್ ಕಾರ್ಪೆಟ್ ಹಾಸಿ ಕರೆದ್ರೆ ಬರಲ್ಲ ಅನ್ನಬಹುದು, ಆದರೆ ರತ್ನ ‘ಕಂಬಳಿ’ ಹಾಸಿ ಕರೆದರೆ ಕುರುಬ ಆಗಿ ಬ್ಯಾಡ ಅನ್ನೋದ್ ಹೆಂಗಪ್ಪಾ?
ಅದೂ ಸರಿನೇ, ಅಲ್ಲಿಗೇ ಬರ್ತಾ ಇದ್ದೆ. ಒಕ್ಕಲಿಗ ಡಿಕೆಶಿ ಬಿಟ್ಟು, ಕುರುಬರಾದ ನಿಮ್ಮನ್ನ ಸಿಎಂ ಮಾಡಿರೋದಕ್ಕೆ ಹಲವರಿಗೆ ಬೇಸರ ಇದೆಯಂತೆ?
-ಯಾರಿಗೇ? ಬಿಜೆಪಿಯವರಿಗಾ? ರಿಸಲ್ಟ್ ಬಂದಾಗ ಅವರೇ ಹೇಳಿದ್ರಲ್ರೀ, ಜನ ಈ ಸಲ ಕುರಿಗಳ ಥರ ಕಾಂಗ್ರೆಸ್‌ಗೆ ಓಟ್ ಹಾಕಿzರೆ ಅಂತ. ಮತ್ತೆ, ಕುರಿಗಳನ್ನು ಕಾಯೋಕೆ ಕುರುಬ ತಾನೇ ಬರಬೇಕು?
ಆದ್ರೂ, ಕುರುಬ ಜನಾಂಗಕ್ಕೆ ಬೆಲೆ ಕೊಟ್ರು, ನಮಗೆ ಕೊಡಲಿಲ್ಲ ಅಂತ ಒಕ್ಕಲಿಗರು ಬೇಜಾರಾಗಿಲ್ವಾ?
-ನೋಡ್ರೀ, ಈ ‘ಕುರಿ’ತಂತೆ ‘ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ’ ಅಷ್ಟೇ.
ಓಹೋ, ಕವಿರತ್ನ ಕಾಳಿದಾಸ..ಜನ ೫ ಗ್ಯಾರಂಟಿ ಬಗ್ಗೆ ಕೇಳಿದಾಗ್ಲೂ ಹಿಂಗೇ ಹೇಳಿಬಿಟ್ಟೀರಾ ಆಮೇಲೆ. ಹೋಗ್ಲಿ, ದುನಿಯಾ ವಿಜಿ ಅವರು ಯಾಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ರು?
-ಸಮಾರಂಭ ನಡೆದಿದ್ದು ‘ಕಂಠೀರವ’ ಸ್ಟೇಡಿಯಂನಲ್ಲಿ ಅಲ್ವೇನಪ್ಪಾ, ಅದಕ್ಕೇ ಬಂದಿದ್ರು.
ನಿಮ್ ಮಿನಿಸ್ಟ್ರು ಜಮೀರ್ ಅಹಮದ್ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ತಗೊಂಡ್ರು ಅಂತ ಕನ್ನಡಿಗರು ಬೇಜಾರ್ ಆಗಿದ್ದಾರಂತೆ?
-ಅಯ್ಯೋ, ಕನ್ನಡಿಗರು ಖುಷಿ ಪಡೋ ವಿಷ್ಯ ಕಣ್ರೀ ಇದು. ಮೊದ್ಲೇ ಅವ್ನು, ಕ್ಷೀರ ಭಾಗ್ಯಕ್ಕೆ, ಶೀಲ ಭಾಗ್ಯ ಅಂತಾನೆ. ಸುಮ್ನೆ ಕನ್ನಡದಲ್ಲಿ ಪ್ರಮಾಣ ವಚನ ತಗೊಂಡು ಕನ್ನಡ ಹಾಳ್ ಮಾಡೋಕಿಂತ, ಇಂಗ್ಲಿಷ್‌ನೇ ಹಾಳ್ ಮಾಡ್ಲಿ ಬಿಡಿ.
ನೆಟ್ ಪಿಕ್ಸ್
ಒಂದಿನ ಕಾರ್‌ನಲ್ಲಿ ಒಬ್ಬ ವ್ಯಕ್ತಿ ತುಂಬಾ – ಆಗಿ ಹೋಗ್ತಾ ಇದ್ದ. ಹೈ ವೇನಲ್ಲಿ ಟ್ರಾಫಿಕ್ ಪೊಲೀಸ್ ಹಿಡಿದ್ರು. ಯಾಕೆ ಓವರ್ ಸ್ಪೀಡಿಂಗ್ ಮಾಡ್ತಾ ಇದ್ದೀರಾ ಅಂತ ಕೇಳಿದ್ದಕ್ಕೆ ನನ್ನ ಕೆಲಸಕ್ಕೆ ಲೇಟ್ ಆಗ್ತಾ ಇದೆ ಅದಕ್ಕೆ – ಆಗಿ ಹೋಗ್ತಾ ಇದ್ದೆ ಅಂದ.
ಏನಂತ ಅರ್ಜೆಂಟ್ ಕೆಲ್ಸ, ಎಲ್ಲಿ ಕೆಲ್ಸ ಮಾಡೋದು ನೀನು, ಏನು ನಿನ್ನ ಕೆಲ್ಸ ಅಂತ ಕೇಳಿದ್ರು ಪೊಲೀಸ್. ಅದಕ್ಕೆ ಆ ವ್ಯಕ್ತಿ ನಾನು ಜಂಬೋ ಸರ್ಕಸ್‌ನಲ್ಲಿ ಕೆಲ್ಸ ಮಾಡ್ತಾ ಇರೋದು, ಅಲ್ಲಿ ನಾನು ಬ್ಯಾಲೆನ್ಸಿಂಗ್ ಕೆಲ್ಸ ಮಾಡ್ತೀನಿ. ಒಂದ್ ಇಪ್ಪತ್ತು ರಿಂಗ್‌ಗಳನ್ನ ಗಾಳಿಯಲ್ಲಿ ಎಸೆದು, ಅವು ಕೆಳಗೆ ಬರ್ತಾ ಇದ್ದ ಹಾಗೆ ಹಿಡಿಯುತ್ತಾ ಮತ್ತೆ ಕೈಯಲ್ಲಿರೋದನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆ ಮಾಡೋದು ನನ್ನ ಕೆಲಸ ಅಂದ.
ಅದಕ್ಕೆ ಪೊಲೀಸ್ ಇಪೆಕ್ಟರ್ ನಿನ್ನ ನಂಬೋದು ಹೆಂಗೆ, ಎಲ್ಲಿ, ಒಂದ್ಸಲ ಇ ಮಾಡಿ ತೋರಿಸು ಅಂದ. ಅದಕ್ಕೆ ಆ ವ್ಯಕ್ತಿ, ಇಲ್ಲ ರಿಂಗ್‌ಗಳೆ ಅ ಸರ್ಕಸ್ ನಲ್ಲಿ ಇರ್ತಾವೆ. ನನ್ನತ್ರ ಇರಲ್ಲ ಅಂದ. ಹೀಗೆ ಪೊಲೀಸ್ ಮತ್ತು ಆ ವ್ಯಕ್ತಿ ಮಧ್ಯೆ ಸಂಭಾಷಣೆ ನಡೆಯುತ್ತಿರುವಾಗ ಅಲ್ಲಿಗೆ ಖೇಮು ಕಾರಲ್ಲಿ ಬಂದ.
ಖೇಮು ಸಂಜೆ ಹೊತ್ತಿಗೇ ಕುಡಿದು ಫುಲ್ ಟೈಟ್ ಆಗಿದ್ದ. ಇವರಿಬ್ಬರೂ ಮಾತಾಡ್ತಾ ಇರೋದನ್ನ ಗಮನಿಸಿ ಅ ಸೈಡಲ್ಲಿ ನಿಂತುಕೊಂಡ. ಈ ವ್ಯಕ್ತಿ ರಿಂಗ್ ಇಲ್ಲ ಅಂದಿದ್ದಕ್ಕೆ, ಸರಿ ನನ್ನ ಕಾರ್‌ನಲ್ಲಿ ಒಂದಷ್ಟು ರಿಂಗ್ಸ್ ಇದ್ದಾವೆ ಅವುಗಳನ್ನೇ ಎಸೆದು, ಹಿಡಿದು ಬ್ಯಾಲೆ ಮಾಡಿ ತೋರಿಸು ಅಂದ ಪೊಲೀಸ್. ಆ ವ್ಯಕ್ತಿ ಒಪ್ಪಿಕೊಂಡು ಪೊಲೀಸ್ ತಂದುಕೊಟ್ಟ ಆ ರಿಂಗ್‌ಗಳನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆ ಮಾಡಿ ತೋರಿಸಿದ. ಅದಕ್ಕೆ ಪೊಲೀಸ್, ಸರಿ, ನೀನಿನ್ನು ಹೊರಡು ಅಂತ ಅವನನ್ನು ಕಳಿಸಿದ. ಇದನ್ನು ನೋಡಿದ ಖೇಮು, ತನ್ನ ಕಾರನ್ನು ಅ ಬಿಟ್ಟು, ಸೀದಾ ಹೋಗಿ ಪೊಲೀಸ್ ಗಾಡಿಯಲ್ಲಿ ಕುಳಿತುಬಿಟ್ಟ.
ಪೊಲೀಸ್‌ಗೆ ಆಶ್ಚರ್ಯ ಆಯ್ತು. ಯಾಕೆ ನೀನೇ ಬಂದು ಪೊಲೀಸ್ ಕಾರಲ್ಲಿ ಕೂತೆ ಅಂತ ಕೇಳಿದ್ದಕ್ಕೆ ಖೇಮು ಹೇಳಿದ ಅಯ್ಯೋ, ಅಷ್ಟೆ ರಿಂಗ್ ಎಸೆದು ಹಿಡಿದು ಬ್ಯಾಲೆ ಮಾಡಿ ತೋರಿಸಿ, ನಾನು ಕುಡಿದಿಲ್ಲ ಅಂತ ಪ್ರೂವ್ ಮಾಡೋಕೆ ನನ್ ಕೈಲಾಗಲ್ಲ, ನಾನೇ ಹೇಳ್ತಾ ಇದ್ದೀನಿ, ಫುಲ್ ಟೈಟಾಗಿದ್ದೀನಿ. ಅರೆ ಮಾಡಿ ನನ್ನ.
ಲೈನ್ ಮ್ಯಾನ್
ಜನ ನಿನ್ನೆ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಏನಂತ ಹಾಡಿ ಸಂಭ್ರಮ ಪಡ್ತಾ ಇದ್ರು?
ಫಾಸಿದ್-ರಾಮಯ್ಯಾ ವಸ್ತಾವಯ್ಯಾ
೨೦೦೦ ರುಪಾಯಿ ನೋಟು ಬ್ಯಾನ್
-ಕಾಂಗ್ರೆಸ್ ನೋರು ಟಿಪ್ಪು ಜಯಂತಿ ಮಾಡೋಕೆ ರೆಡಿ ಆಗ್ತಿದ್ರೆ, ಈ ಕಡೆ ಚಿಪ್ಪು ತಿಥಿ ಆಗ್ತಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿ ಮಾಡಿದ್ದು
-ಏ‘ಕಾಂಗಿ’ ಹೋರಾಟ
ಲಾಸ್ ಆಗ್ತಿದೆ ಅಂತ ಬಾಗಿಲು ಮುಚ್ಚಿದ ಫೋರ್ಡ್ ಕಂಪನಿ ಮಾಲೀಕ
ಹೇಳಿದ್ದೇನು ?
-ಸಾರಿ, ವಿ ಕೆನ್ ನಾಟ್ ಅಫೋರ್ಡ್.
ವರ್ಷಾ ಅನ್ನೋ ಇಬ್ಬರು ಗರ್ಲ್ ಫ್ರೆಂಡ್ ಇದ್ರೆ, ಹೊಸಬಳ ನಂಬರ್ ಅನ್ನು ಹೇಗೆ ಸೇವ್ ಮಾಡಿಕೊಳ್ಳಬೇಕು
-ನ್ಯೂ ಇಯರ್
ಚೌಚೌ ಮಾರೋ ಅಂಗಡಿಗೆ ಏನಂತ ಹೆಸರಿಡಬಾರದು ?
-ಚೌಚಾಲಯ
ಪುರುಷರ ಎದೆ ಮೇಲೆ ಬೆಳೆಯುವ ಕೂದಲು
-ಎದೆ‘ಗರಿಕೆ’
ಲವ ತನ್ನ ಸಹೋದರನನ್ನು ಭೇಟಿ ಆದಾಗ ಏನು ವಿಚಾರಿಸ್ತಾನೆ?
-ಕುಶಲೋಪರಿ
ನಿಮ್ಮ ಎ ಪಾಪಗಳನ್ನು ಇಲ್ಲಿ ತೊಳೆಯಲಾಗುತ್ತದೆ ಎಂದು ಹೇಳಿ ಜನರ ತಲೆಕೆಡಿಸಿ ಮರುಳು ಮಾಡುವ ಢೋಂಗಿ ಧಾರ್ಮಿಕ ಸ್ಥಳ
-ಬ್ರೈನ್ ವಾಷ್ ಬೇಸಿನ್
ಹಳೇ ಕಾಲದ ಹಳ್ಳಿ ಶೈಲಿಯಲ್ಲಿ ಊಟ ಮಾಡೋ ಪದ್ಧತಿ
-ತಾಟ್ ಪ್ರೊಸೆಸ್
ದುಂಬಿ ಜೇನಿಗೆ ಹೇಳಿದ್ದೇನು?
-ನಾನು ನಿನ್ನ ಮನದುಂಬಿ ಪ್ರೀತಿಸ್ತೀನಿ