Saturday, 23rd November 2024

ಫ್ಲಾಗ್‌ಶಿಪ್‌ ಸಿಎಸ್‌ಆರ್‌ ಕಾರ್ಯಕ್ರಮ

ಬೆಂಗಳೂರಿನಲ್ಲಿ ಎಐ ಮತ್ತು ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್‌ನಲ್ಲಿ ಪ್ರಮಾಣಪತ್ರ ಪಡೆದ ಸ್ಯಾಮ್‌ಸಂಗ್‌ ಇನ್ನೋವೇಶನ್ ಕ್ಯಾಂಪಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳು; ಭವಿಷ್ಯದ ತಂತ್ರಜ್ಞಾನ ಕೌಶಲಗಳೊಂದಿಗೆ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧವಾಗಿಸುವ ಫ್ಲಾಗ್‌ಶಿಪ್‌ ಸಿಎಸ್‌ಆರ್‌ ಕಾರ್ಯಕ್ರಮ

ಬೆಂಗಳೂರು: ಸ್ಯಾಮ್‌ಸಂಗ್‌ ಇಂಡಿಯಾ ಫ್ಲಾಗ್‌ಶಿಪ್‌ ಸಿಎಸ್‌ಆರ್ ಕಾರ್ಯಕ್ರಮ ಸ್ಯಾಮ್‌ಸಂಗ್‌ ಇನ್ನೊವೇಶನ್ ಕ್ಯಾಂಪಸ್‌ ಬೆಂಗಳೂರಿನಲ್ಲಿ ತನ್ನ 196 ವಿದ್ಯಾರ್ಥಿಗಳ ಮೊದಲ ಬ್ಯಾಚ್‌ಗೆ ಎಐ ಮತ್ತು ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್‌ ಕೋರ್ಸ್‌ಗಳನ್ನು ಮುಕ್ತಾಯಗೊಳಿಸಿದ್ದು, ಭಾರತದ ಉತ್ತಮ ಪಾಲುದಾರನಾಗಿರುವುದಕ್ಕೆ ಸ್ಯಾಮ್‌ಸಂಗ್‌ನ ಬದ್ಧತೆ ಮತ್ತು ದೇಶದ ಯುವಕರನ್ನು ಸಬಲಗೊಳಿಸಲು ಮತ್ತು #PoweringDigitalIndia ಗೆ ಸರ್ಕಾರದ ಜೊತೆಗೆ ಕೆಲಸ ಮಾಡಲು ತನ್ನ ಬದ್ಧತೆಯನ್ನು ಇದು ಮರುಸ್ಥಾಪಿಸಿದೆ.

ರಾಮನಗರದ ಸರ್ಕಾರಿ ಮಹಿಳೆಯರ ಪಾಲಿಟೆಕ್ನಿಕ್ ಕಾಲೇಜು, ಚನ್ನಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೋರ್ಸ್‌ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಅನುಮೋದಿಸಿದ ತರಬೇತಿ ಮತ್ತು ಶಿಕ್ಷಣ ಪಾಲುದಾರ ರಾಷ್ಟ್ರಾದ್ಯಂತದ ನೆಟ್‌ವರ್ಕ್ ಮೂಲಕ ಸ್ಯಾಮ್‌ಸಂಗ್‌ ಮತ್ತು ಇಎಸ್‌ಎಸ್‌ಸಿಐ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿದರು.

ಇ ಗವರ್ನೆನ್ಸ್‌ ಬೆಂಬಲಕ್ಕೆ ಚಾಟ್‌ಬೋಟ್ ಅಭಿವೃದ್ಧಿಪಡಿಸುವುದು, ಹಣದುಬ್ಬರ ಸಮಸ್ಯೆಯನ್ನು ತಡೆಯಲು ನಕಲಿ ಕರೆನ್ಸಿ ಪತ್ತೆ ಮಾಡುವುದಕ್ಕಾಗಿ ಆಪ್ ಆಧರಿತ ಗುರುತುಕಾರಕ, ದಟ್ಟಣೆಯನ್ನು ಕಡಿಮೆ ಮಾಡಲು ಪಾರ್ಕಿಂಗ್ ಸ್ಪಾಟ್‌ಗಳನ್ನು ಗುರುತಿಸಲು ಎಐಒಟಿ ಆಧರಿತ ಕ್ಲೌಡ್ ಸಿಸ್ಟಮ್‌ನ ಅಭಿವೃದ್ಧಿ, ಪ್ರಾದೇಶಿಕ ಭಾಷೆಗಳನ್ನು ಶಿಕ್ಷಣ ಒದಗಿಸಲು ಬಹುಭಾಷೆಯ ಸೆಟ್ಟಿಂಗ್‌ ಹೊಂದಿರುವ ಹಂಚಿಕೊಂಡಿರುವ ಪ್ಲಾಟ್‌ಫಾರಂ ಮತ್ತು ಆರೋಗ್ಯ ಸೇವೆ ಡೇಟಾ ಸಂಗ್ರಹ ಮತ್ತು ಭದ್ರತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಯಿತು.

ಸ್ಯಾಮ್‌ಸಂಗ್‌ ಸೌತ್‌ವೆಸ್ಟ್‌ ಏಷ್ಯಾದ ಕಾರ್ಪೊರೇಟ್‌ ಉಪಾಧ್ಯಕ್ಷ ಹ್ಯೂನ್‌ ಕಿಮ್‌ ಹೇಳುವಂತೆ “ಸಮುದಾಯಕ್ಕೆ ಮರಳಿ ಕೊಡುಗೆ ನೀಡುವುದರಲ್ಲಿ ಮತ್ತು ದೇಶದ ಬೆಳವಣಿಗೆಗೆ ಕೊಡುಗೆ ನೀಡುವುದರಲ್ಲಿ ಸ್ಯಾಮ್‌ಸಂಗ್‌ ವಿಶ್ವಾಸ ಹೊಂದಿದೆ. ಈ ಉಪಕ್ರಮದ ಮೂಲಕ ಯುವಕರನ್ನು ಸಬಲಗೊಳಿಸಲು ಮತ್ತು ಭವಿಷ್ಯದ ತಂತ್ರಜ್ಞಾನ ಡೊಮೇನ್‌ಗಳಲ್ಲಿ ಅವರಿಗೆ ಅವಕಾಶಗಳನ್ನು ಸೃಷ್ಟಿಸುವುದಕ್ಕೆ ನಾವು ಬಯಸಿದ್ದೇವೆ. ಇದರಿಂದ ಅವರಿಗೆ ಭಾರತದ ಪ್ರಗತಿಯ ಕಥೆಯನ್ನು ಇನ್ನಷ್ಟು ಪ್ರೋತ್ಸಾಹಿಸುವುದು ಮತ್ತು ಡಿಜಿಟಲ್ ಇಂಡಿಯಾಗೆ ಶಕ್ತಿ ನೀಡುವ ನಮ್ಮ ಬದ್ಧತೆಯನ್ನು ಬಲಗೊಳಿಸಲು ನೆರವಾಗಲಿದೆ.”

ದೇಶಾದ್ಯಂತ ಎಂಟು ಕ್ಯಾಂಪಸ್‌ಗಳಲ್ಲಿ ಸ್ಯಾಮ್‌ಸಂಗ್‌ ಇನ್ನೋವೇಶನ್ ಕ್ಯಾಂಪಸ್ ಕಾರ್ಯಕ್ರಮವನ್ನು ಸ್ಯಾಮ್‌ಸಂಗ್ ಇಂಡಿಯಾ ಆರಂಭಿಸಿದ್ದು, ಭವಿಷ್ಯದ ತಂತ್ರಜ್ಞಾನ ಡೊಮೇನ್‌ಗಳಾದ ಎಐ, ಐಒಟಿ, ಬಿಗ್ ಡೇಟಾ ಮತ್ತು ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್‌ನಂತಹವುಗಳಲ್ಲಿ 3,000 ಯುವಕರ ಕೌಶಲವನ್ನು ಸುಧಾರಿಸುವ ಮತ್ತು ಸೂಕ್ತ ಉದ್ಯೋಗ ಪಡೆಯುವುದಕ್ಕೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ.

ಭವಿಷ್ಯದ ತಂತ್ರಜ್ಞಾನಗಳಲ್ಲಿ 18-25 ವರ್ಷಗಳ ಯುವಕರ ಕೌಶಲ ಸುಧಾರಣೆ ಮಾಡುವುದು ಮತ್ತು ಅವರ ಉದ್ಯೋಗ ಅರ್ಹತೆಯನ್ನು ಹೆಚ್ಚಿಸುವ ಗುರಿಯನ್ನು ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಹೊಂದಿದೆ. ನಾಲ್ಕನೇ ಔದ್ಯಮಿಕ ಕ್ರಾಂತಿಗೆ ಇವು ಪ್ರಮುಖ ತಂತ್ರಜ್ಞಾನ ಕೌಶಲಗಳಾಗಿವೆ.

ಕಾರ್ಯಕ್ರಮದ ಅವಧಿಯಲ್ಲಿ ವಿದ್ಯಾರ್ಥಿಗಳು, ಬೋಧಕರ ನೇತೃತ್ವದ ತರಬೇತಿಯನ್ನು ಇಎಸ್‌ಎಸ್‌ಸಿಐನಿಂದ ಅನುಮೋದಿತ ತರಬೇತಿ ಮತ್ತು ಶಿಕ್ಷಣ ಪಾಲುದಾರರಿಂದ ಪಡೆಯುತ್ತಾರೆ.

ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಂಡ ಯುಕವರಿಗೆ ತರಗತಿ ಕೋಣೆಯಲ್ಲಿ ತರಬೇತಿ ನೀಡಲಾಗುತ್ತದೆ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್‌, ಇಂಟರ್ನೆಟ್ ಆಫ್‌ ದಿ ಥಿಂಗ್ಸ್‌, ಬಿಗ್ ಡೇಟಾ ಮತ್ತು ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್‌ನಿಂದ ಆಯ್ದ ತಂತ್ರಜ್ಞಾನದಲ್ಲಿ ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್‌ ಕೆಲಸವನ್ನು ಪೂರೈಸುತ್ತಾರೆ. ಉದ್ಯೋಗ ಅರ್ಹತೆಯನ್ನು ಸುಧಾರಿಸಲು ಸಾಫ್ಟ್ ಸ್ಕಿಲ್ ತರಬೇತಿಯನ್ನೂ ಅವರಿಗೆ ನೀಡಲಾಗುತ್ತದೆ ಮತ್ತು ಸೂಕ್ತ ಸಂಸ್ಥೆಗಳಲ್ಲಿ ಉದ್ಯೋಗ ಪ್ಲೇಸ್‌ಮೆಂಟ್‌ಗಳನ್ನು ನೀಡಲಾಗುತ್ತದೆ.

ಎಐ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವವರು 270 ಗಂಟೆಗಳ ಥಿಯರಿ ತರಬೇತಿಯನ್ನು ಪಡೆಯುತ್ತಾರೆ ಮತ್ತು 80 ಗಂಟೆಗಳ ಪ್ರಾಜೆಕ್ಟ್‌ ಕೆಲಸವನ್ನು ಪೂರ್ತಿಗೊಳಿಸುತ್ತಾರೆ. ಅಲ್ಲದೆ, ಐಒಟಿ ಅಥವಾ ಬಿಗ್‌ ಡೇಟಾ ಕೋರ್ಸ್‌ ಮಾಡುವವರು 160 ಗಂಟೆಗಳ ತರಬೇತಿಯನ್ನು ಪಡೆಯುತ್ತಾರೆ ಮತ್ತು 80 ಗಂಟೆಗಳ ಪ್ರಾಜೆಕ್ಟ್‌ ಕೆಲಸವನ್ನು ಪೂರ್ತಿಗೊಳಿಸುತ್ತಾರೆ. ಕೋಡಿಂಗ್‌ ಮತ್ತು ಪ್ರೋಗ್ರಾಮಿಂಗ್ ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು 80 ಗಂಟೆಗಳ ತರಬೇತಿ ಪಡೆಯುತ್ತಾರೆ ಮತ್ತು ಹ್ಯಾಕಥಾನ್‌ನ ಭಾಗವಾಗಿರುತ್ತಾರೆ.

ಸ್ಯಾಮ್‌ಸಂಗ್ ನ್ಯೂಸ್‌ರೂಂ ಲಿಂಕ್ :

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕೊ., ಲಿ. ಕುರಿತು:
ಸ್ಯಾಮ್ ಸಂಗ್ ಜಗತ್ತಿಗೆ ಸ್ಪೂರ್ತಿಯನ್ನು ನೀಡುತ್ತಿದೆ ಮತ್ತು ಪರಿವರ್ತಕ ಕಲ್ಪನೆಗಳು ಮತ್ತು ತಂತ್ರಜ್ಞಾನದ ಮೂಲಕ ಭವಿಷ್ಯವನ್ನು ನಿರ್ಮಿಸುತ್ತಿದೆ. ಟಿವಿ, ಸ್ಮಾರ್ಟ್ ಫೋನ್, ಧರಿಸುವಂತಹ ಸಾಧನಗಳು, ಟ್ಯಾಬ್ಲೆಟ್ ಗಳು, ಡಿಜಿಟಲ್ ಅಲ್ಲಯನ್ಸಸ್, ನೆಟ್ವರ್ಕ್ ಸಿಸ್ಟಮ್ಸ್ ಮತ್ತು ಮೆಮೊರಿ, ಸಿಸ್ಟಮ್ ಎಲ್.ಎಸ್.ಐ, ಫೌಂಟ್ರಿ ಮತ್ತು ಎಲ್.ಇ.ಡಿ. ಸಲ್ಯೂಶನ್ಸ್ ಜಗತ್ತಿಗೆ ಕಂಪನಿಯು ಹೊಸ ವ್ಯಾಖ್ಯಾನವನ್ನು ನೀಡುತ್ತಿದೆ. ಸ್ಯಾಮ್ಸಂಗ್ ಇಂಡಿಯಾದ ಇತ್ತೀಚಿನ ಸುದ್ದಿಗಳಿಗಾಗಿ ಸ್ಯಾಂಸಂಗ್ ಇಂಡಿಯಾದ ನ್ಯೂಸ್ ರೂಮ್ http://news.samsung.com/in ಅನ್ನು ಸಂಪರ್ಕಿಸಿ. ಹಿಂದಿ ಭಾಷೆಗಾಗಿ ಸ್ಯಾಮ್ ಸಂಗ್ ನ್ಯೂಸ್ ರೂಮ್ ಭಾರತ್ https://news.samsung.com/bharat ಅನ್ನು ಸಂಪಕ್ತಿಸಿ. ನಮ್ಮನ್ನು ಟ್ವಿಟರ್ ನಲ್ಲಿಯೂ ಹಿಂಬಾಲಿಸಬಹುದು @SamsungNewsIN