ಮೇ.23ರ ಮಂಗಳವಾರ ಹಿಂಪಡೆಯಲಾದ 2,000 ರೂಪಾಯಿ ಮುಖಬಲೆಯ ನೋಟು ಗಳನ್ನು ಯಾವುದೇ ಬ್ಯಾಂಕಿನಲ್ಲಿ ನೀಡಿ, ಇತರೆ ಮುಖ ಬೆಲೆಯ ನೋಟುಗಳನ್ನು ಪಡೆಯಬಹುದು ಎಂಬುದಾಗಿ ತಿಳಿಸಿದೆ.
2000 ಮುಖಬೆಲೆಯ ನೋಟುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡುವುದನ್ನು ನಿಲ್ಲಿಸುವಂತೆ ಕೇಂದ್ರ ಬ್ಯಾಂಕ್ ಶುಕ್ರವಾರ ಎಲ್ಲಾ ಬ್ಯಾಂಕುಗಳಿಗೆ ಸಲಹೆ ನೀಡಿದೆ. 2000 ರೂ ಮುಖಬೆಲೆಯ ನೋಟುಗಳು ಕಾನೂನು ಬದ್ಧವಾಗಿ ಮುಂದು ವರಿಯುತ್ತವೆ.
2016 ರ ನವೆಂಬರಿನಲ್ಲಿ 2000 ರೂ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಯಿತು. 2018-19ರಲ್ಲಿ 2000 ರೂ ನೋಟು ಗಳ ಮುದ್ರಣವನ್ನು ನಿಲ್ಲಿಸಲಾಯಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ‘ಕ್ಲೀನ್ ನೋಟ್ ಪಾಲಿಸಿ’ಗೆ ಅನುಸಾರ ವಾಗಿ, 2000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ.