ಮೇಲ್ವಿಚಾರಣೆಯ ವೇಳೆ, ಒಂದು ಮರಿ ಅನಾರೋಗ್ಯದಿಂದ ಬಳಲುತ್ತಿರುವುದು ಗೊತ್ತಾಗಿದ್ದು, ಅದು ಮಂಗಳವಾರ ಮೃತ ಪಟ್ಟಿದೆ. ಪಿಸಿಸಿ ವನ್ಯಜೀವಿ ಜಸ್ವೀರ್ ಸಿಂಗ್ ಮರಿಯ ಸಾವನ್ನು ದೃಢಪಡಿಸಿದ್ದಾರೆ.
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಎರಡು ತಿಂಗಳಲ್ಲಿ ಮೂರು ಚಿರತೆಗಳು ಸಾವನ್ನಪ್ಪಿದ್ದು, ಸಧ್ಯ ಒಂದು ಮರಿ ಸಹ ಸಾವನ್ನಪ್ಪಿದೆ. ಕುನೊದಲ್ಲಿ ಚಿರತೆಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿರುವುದರಿಂದ, ಚೀತಾ ಯೋಜನೆಯ ಯಶಸ್ಸಿನ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ.
ಈಚಿರತೆಗಳ ಸಾವಿನ ಬಗ್ಗೆಯೂ ಅಧಿಕಾರಿಗಳು ಚಿಂತಿತರಾಗಿದ್ದಾರೆ. ಚೀತಾ ಸಶಾ, ದಕ್ಷ ಮತ್ತು ಗಂಡು ಚಿರತೆ ಉದಯ್ ಸಾವನ್ನಪ್ಪಿವೆ. ಈಗ ಕುನೊದಲ್ಲಿ 17 ಚಿರತೆಗಳು ಮತ್ತು ಮೂರು ಮರಿಗಳು ಉಳಿದಿವೆ.