ಪ್ಲೇಆಫ್ ಪಂದ್ಯಗಳಲ್ಲಿ ಪ್ರತಿ ಡಾಟ್ ಬಾಲ್ಗೆ 500 ಸಸಿಗಳನ್ನು ನೆಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾಗ್ದಾನ ಮಾಡಿದೆ. ಈ ಮೂಲಕ ಪರಿಸರ ಕಾಳಜಿಯನ್ನು ಮೆರೆದಿದೆ. ಬಿಸಿಸಿಐನ ಈ ಅದ್ಭುತ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮಂಗಳವಾರ ರಾತ್ರಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣ ಸಾಡಿದವು. ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ಗೆ ಗುದ್ದು ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ ನೇರವಾಗಿ ಫೈನಲ್ ತಲುಪಿತು. ಸೋತ ಗುಜರಾತ್ಗೆ ಫೈನಲ್ ತಲುಪಲು ಮತ್ತೊಂದು ಅವಕಾಶವಿದೆ.
ಪ್ರತಿ ಡಾಟ್ ಬಾಲ್ಗೆ 500 ಸಸಿ: ಪರದೆ ಮೇಲೆ ಕಾಣಿಸುತ್ತಿದ್ದ ಸ್ಕೋರ್ ಬೋರ್ಡ್ನಲ್ಲಿ ಡಾಟ್ ಬಾಲ್ ಆದಾಗ ಮರದ ಗ್ರಾಫಿಕ್ ಪ್ರದರ್ಶಿಸಲಾಗುತ್ತಿತ್ತು. ವೀಕ್ಷಣೆ ವಿವರಣೆಗಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಬಿಸಿಸಿಐ ಪರಿಸರ ಸಂರಕ್ಷಣೆಗೆ ಯೋಜನೆ ರೂಪಿಸಿದ್ದು, ಅದನ್ನು ಐಪಿಎಲ್ನ ಪ್ಲೇಆಫ್ ಪಂದ್ಯಗಳಲ್ಲಿ ಜಾರಿ ಮಾಡಿದೆ. ಪ್ಲೇ ಆಫ್ ಪಂದ್ಯಗಳಲ್ಲಿ ಎಸೆತ ಡಾಟ್ ಆದಲ್ಲಿ ಪ್ರತಿ ಬಾಲ್ಗೂ 500 ಸಸಿ ನೆಡಲಾಗುವುದು ಎಂದು ತಿಳಿಸಿದೆ.
ಟಿವಿ ಪರದೆಯ ಮೇಲೆ ಸ್ಕೋರ್ ಬೋರ್ಡ್ನಲ್ಲಿ ಎಸೆತ ಡಾಟ್ ಆದಾಗ ಆ ಜಾಗದಲ್ಲಿ ಮರದ ಗ್ರಾಫಿಕ್ ಅನ್ನು ತೋರಿಸ ಲಾಗುತ್ತಿತ್ತು. ಡಾಟ್ ಬಾಲ್ ಚಿಹ್ನೆಯ ಜಾಗದಲ್ಲಿ ಹಸಿರು ಮರ ತೋರಿಸುವ ಮೂಲಕ ಎಷ್ಟು ಡಾಟ್ ಬಾಲ್ ಆದವು ಎಂಬ ಅಂಕಿ- ಸಂಖ್ಯೆಯನ್ನೂ ಪ್ರದರ್ಶಿಸಲಾಗುತ್ತಿದೆ. ಪ್ರತಿ ಡಾಟ್ ಬಾಲ್ಗೆ 500 ಮರಗಳು ನೆಡಲಾಗುವುದು ಎಂದು ಘೋಷಿಸಿ ರುವ ಬಿಸಿಸಿಐ, ಯಾವ ನಗರದಲ್ಲಿ ನೆಡಲಿದೆ ಎಂಬುದು ಮುಂದೆ ತಿಳಿದುಬರಲಿದೆ.
ಐಪಿಎಲ್ ಮುಗಿದ ಬಳಿಕ ಭಾರತ ಹೀಗಾಗಲಿದೆ ಎಂದು ಹಚ್ಚಹಸಿರ ಅರಣ್ಯದ ಚಿತ್ರವನ್ನು ಹಾಕಲಾಗಿದೆ. ಮೊದಲ ಕ್ವಾಲಿ ಫೈಯರ್ನ ಸಿಎಸ್ಕೆ ಇನಿಂಗ್ಸ್ನಲ್ಲಿ ಒಟ್ಟು 34 ಎಸೆತಗಳು ಡಾಟ್ ಆಗಿವೆ. ಇದರಿಂದ ಸಿಎಸ್ಕೆ 17,000 ಸಸಿಗಳನ್ನು ನೆಡುವ ಅಭಿಯಾನಕ್ಕೆ ಅಭಿದಾನ ನೀಡಿತು.