Sunday, 24th November 2024

ಸ್ಮಶಾನದಲ್ಲಿ ಆಡೋ ಆಟ- ಲಗೋರಿ

ತುಂಟರಗಾಳಿ

ಸಿನಿಗನ್ನಡ

ಸಿನಿಮಾರಂಗ ಮತ್ತು ರಾಜಕೀಯ ರಂಗ ಮೊದಲಿನಿಂದಲೂ ದೂರ ದೂರ ಇರುವಂಥವೇನಲ್ಲ. ಸಿನಿಮಾ ರಂಗದಲ್ಲಿ ಹೆಸರು ಮಾಡಿ, ತಮ್ಮ ಕಾಲ ಮುಗಿಯುತ್ತಾ ಬಂದಂತೆ, ತಮ್ಮ ಡಿಮ್ಯಾಂಡ್ ಕಮ್ಮಿ ಆಗುತ್ತಾ ಬಂದಂತೆ ಹಲವು ಸಿನಿಮಾ ಮಂದಿ ಮೆಲ್ಲಗೆ ರಾಜಕೀಯ ಮಾತಾಡೋಕೆ ಶುರು ಮಾಡೋದು ಸಹಜ. ಆದರೆ ಇತ್ತೀಚೆಗೆ ಈಗಿನ್ನೂ ಅಂಬೆಗಾಲಿಡುತ್ತಿರುವ ನಟ ನಟಿಯರೂ ಕೂಡ ರಾಜಕೀಯದ ಬಗ್ಗೆ ಮಾತಾಡೋಕೆ ಶುರು ಮಾಡ್ತಾ ಇರೋದು ಹೊಸ ಟ್ರೆಂಡು.

ಕನ್ನಡದಲ್ಲಿ ಅನಂತ್ ನಾಗ್, ಅಂಬರೀಷ್ ಅವರಂಥ ಹಿರಿಯರ ನಂತರ ಈಗಿನ ಸಿನಿಮಾ ಹೀರೋಗಳು ರಾಜಕೀಯದ ವರಸೆ ಶುರು ಮಾಡಿದ್ದಾರೆ. ಉಪೇಂದ್ರ ಅವರಂಥ ಕೆಲವರು ರಾಜಕೀಯದಲ್ಲಿ ಭವಿಷ್ಯಕಂಡುಕೊಳ್ಳುವ ಪ್ರಯತ್ನಕ್ಕೆ ಈಗಲೇ ಮುನ್ನುಡಿ ಬರೆಯುತ್ತಿದ್ದಾರೆ. ಇನ್ನು ಚೇತನ್ ಅವರಂಥ ನಟ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರೂ ರಾಜಕೀಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಇವರ ಹೊರತಾಗಿ ಒಂದೆರಡು ಸಿನಿಮಾ ಮಾಡಿದ ನಟ ನಟಿಯರೂ ಈಗ ರಾಜಕೀಯ ಪ್ರಿಯರಾಗಿದ್ದಾರೆ. ರಿಶಭ್ ಶೆಟ್ಟಿಯಂಥವರು ರಾಜಕೀಯವಾಗಿ ಸಕ್ರಿಯರಾಗಿಲ್ಲವಾದರೂ ಮುಂದೊಂದು ದಿನ ಕೆಲಸಕ್ಕೆ ಬರುತ್ತೆ ಎಂಬ ದಾರಿಯಲ್ಲಿ ಮಾತನಾಡುತ್ತಿದ್ದಾರೆ.

ಆದರೆ ಇದೇ ಹಾದಿಯಲ್ಲಿ ಕೆಲಸಕ್ಕೆ ಬಾರದ ನಾಲ್ಕು ಸಿನಿಮಾ ಮಾಡಿ ಒಂದೂ ಗೆಲುವು ನೋಡಿಲ್ಲದವರೂ ಕೆಲಸಕ್ಕೆ ಬಾರದ ಮಾತಾಡುತ್ತಿರೋದು ಮಾತ್ರ ಎಡೆ ಚರ್ಚೆಗೆ ಕಾರಣವಾಗುತ್ತಿದೆ. ನಮ್ಮ ಸಿನಿಮಾನೇ ಜನ ನೋಡಿಲ್ಲ, ಇನ್ನು ನಮ್ಮ ಮಾತು ಯಾರು ಕೇಳ್ತಾರೆ ಎಂಬ ಪರಿಜ್ಞಾನವೂ ಇಂಥವರಿಗೆ ಇರಲ್ಲ. ಅಥವಾ ಬಾಲಿವುಡ್‌ನಲ್ಲಿ ರಾಜಕೀಯ ಮಾತನಾಡಿ ಲೈಮ್ ಲೈಟಿಗೆ ಬಂದಿರೋ ಕೆಲವು ಉದಾಹರಣೆಗಳನ್ನು ನೋಡಿ, ಇವರೂ ಅದನ್ನೇ ಕಾಪಿ ಮಾಡ್ತಾ ಇದ್ದರೂ ಇರಬಹುದು.

ಬಾಲಿವುಡ್ ನಲ್ಲಿ ಸ್ಮೃತಿ ಇರಾನಿ, ಕಂಗನಾ ರನಾವತ್, ಸ್ವರಾ ಭಾಸ್ಕರ್, ಮನೋಜ್ ವಾಜಪೇಯಿ ಅವರೆಲ್ಲ ಮಾತಾಡುವಾಗ ನಾನೂ ಮಾತಾಡಿದ್ರೆ ನಾನೂ ಅವರಂತೆ ಆಗಬಹುದು ಅಂತ ಕನಸು ಕಾಣೋದ್ರಲ್ಲಿ ತಪ್ಪಿಲ್ಲ ಬಿಡಿ. ಆದರೆ ಇಂಥ ಕೆಲವರು, ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ, ದೇಶದ ಹಿರಿಯ ನಾಯಕರ ಬಗ್ಗೆ, ಮಹಾತ್ಮರ ಬಗ್ಗೆ ಹಗುರವಾಗಿ ಮಾತಾಡುವ ಮೂಲಕ ತಮ್ಮ ಆತುರ ಮತ್ತು ಅeನವನ್ನ ತೋರಿಸಿಕೊಂಡು ನಗೆಪಾಟಲಿಗೆ ಈಡಾಗಿರೋದಂತೂ ನಿಜ.

ಲೂಸ್ ಟಾಕ್
ರೌಡಿ ರಂಗಣ್ಣ (ಕಾಲ್ಪನಿಕ ಸಂದರ್ಶನ)
? ಏನು ರೌಡಿ ರಂಗಣ್ಣೋರೆ, ಬರ್ಟ್ ಡೇ ಭಾರೀ ಜೋರಾಗಿ ಸೆಲೆಬ್ರೇಟ್ ಮಾಡ್ಕೊತಾ ಇದ್ದೀರಾ?
-ಹೌದೌದು, ಅದರ ಜತೆಗೆ, ಇನ್ಮೇಲೆ ನನ್ನ ಹುಟ್ಟುಹಬ್ಬನ ‘ವೈಲೆಂಟೈ ಡೇ’ ಅಂತ ಸೆಲೆಬ್ರೇಟ್ ಮಾಡ್ಬೇಕು ಅಂತ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟವ್ರೆ ನಮ್ಮುಡುಗ್ರು.

? ರೀ, ಈ ರೌಡಿಸಂನ ನೀವೇನ್ ಸರಕಾರಿ ನೌಕರಿ ಅಂದ್ಕೊಂಡಿದ್ದೀರಾ. ಇಷ್ಟೊಂದ್ ವೈಲೆಂಟ್ ಆಗಿದ್ರೆ, ಯಾವಾಗ ಪೊಲೀಸ್ನೋರು ನಿಮಗೆ ಲೈಫಿಂದಲೇ ವಾಲೆಂಟರಿ ರಿಟೈರ್ಮೆಂಟ್ ಕೊಡ್ತಾರೋ ಗೊತ್ತಾಗಲ್ಲ.
-ಅಯ್ಯೋ, ಅವರಿಗೆ ವಾರೆಂಟ್ ಇಲ್ದೆ ನಮ್ಮನ್ನ ಅರೆ ಮಾಡೋಕೇ ಆಗಲ್ಲ, ನೀವ್ ಹೇಳ್ದಂಗೆ ನಮ್ಗೆ ಅಷ್ಟು ಸುಲಭವಾಗಿ ರೆ ಇನ್ ಪೀಸ್ ಎಲ್ಲ ಹೇಳೋಕಾಗಲ್ಲ, ಅರೆ ಮಾಡಿ ಜೈಲಿಗ್ ಹಾಕಿದ್ರೂ, ಒಳಗೂ ಆರಾಮಾಗಿ ರೆ ತಗೋತೀವಿ.

? ಅದಿರ್ಲಿ, ನಿಯತ್ತಾಗಿ ಬದುಕೋಕೆ ಏನ್ ಕಷ್ಟ ನಿಮಗೆ?
-ಹಲೋ, ಯಾಕ್ರೀ, ನಿಯತ್ತಾಗಿ ಬದುಕೋಕೆ, ನಾವೇನ್ ನಿಮ್ ಕಣ್ಣಿಗೆ ನಾಯಿಗಳ ಥರ ಕಾಣ್ತೀದೀವಾ?

? ಥೋ, ಹಂಗಲ್ಲ, ಈ ರೌಡಿಸಂ ಮಾಡೋದೇನ್ ದೊಡ್ಡ ಕೆಲಸ ಅಂದ್ಕೊಂಡಿದ್ದೀರಾ ಅಂತ ಕೇಳಿದ್ದು?
-ಮತ್ತೆ, ಇನ್ನೇನು, ಈ ಕೆಲ್ಸ ಮಾಡೋಕೂ ಚಾಕು’ ಚಕ್ಯತೆ ಇರಬೇಕು ಗೊತ್ತಾ.

? ಅಲ್ಲ ಕಣಪ್ಪಾ, ಎಲ್ಲರ ಹತ್ರ ಉಗಿಸ್ಕೊಂಡು ಬಾಳೋ ಈ ಥರ ಬಾಳು ಬೇಕಾ ನಿಮಗೆ?
-ಹಲೋ, ಯಾಕ್ರೀ, ನಾವೂ ಈ ಸಮಾಜದಲ್ಲಿ ‘ತಲೆ ಎತ್ಕೊಂಡೇ ಬದುಕ್ತಾ ಇರೋದು’ ಗೊತ್ತಾ ?

ನೆಟ್ ಪಿಕ್ಸ್
ಖೇಮು ಕಾಲೇಜಲ್ಲಿ ಓದುವಾಗ ಒಂದು ದಿನ ಲೈಬ್ರೆರಿಗೆ ಅಂತ ಹೋದ. ಅಲ್ಲಿ ತುಂಬಾ ಜನ ಇದ್ರು. ಎಲ್ಲರೂ ಕಾಮ್ ಆಗಿ ಕೂತು ಓದ್ತಾ ಇದ್ರು. ಖೇಮು ಕೂತ್ಕೊಳ್ಳೋಕೆ ಜಾಗ ಹುಡುಕ್ತಾ ಇದ್ದ. ಆದ್ರೆ ಎಲ್ಲೂ ಜಾಗ ಇರಲಿಲ್ಲ. ತುಂಬಾ ಹುಡುಕಿದ ಮೇಲೆ ಅಲ್ಲಿ ಒಂದು ಕಡೆ ಒಂದು ಸುಂದರವಾದ ಹುಡುಗಿ ಕೂತಿದ್ದು ಕಾಣಿಸಿತು. ಅವಳ ಪಕ್ಕದಲ್ಲಿ ಒಂದು ಜಾಗ ಖಾಲಿ ಇತ್ತು. ಆದರೆ ಖೇಮು ಸ್ವಲ್ಪ ನಾಚಿಕೆ ಸ್ವಭಾವದ ಹುಡುಗ. ಅವನಿಗೆ ಹುಡುಗಿಯ ಪಕ್ಕದಲ್ಲಿ ಹೋಗಿ ಕೂರೋದು ಮುಜುಗರ ಅನ್ನಿಸಿತು. ಆದರೆ ಬೇರೆ ದಾರಿ ಇರಲಿಲ್ಲ. ಸ್ವಲ್ಪ ಹೊತ್ತು ಯೋಚನೆ ಮಾಡಿ ನಂತರ ಧೈರ್ಯ ಮಾಡಿ ಆಕೆಯ ಬಳಿ ಹೋದ.

ಎಕ್ಸ್ ಕ್ಯೂಸ್ ಮೀ ಅಂತ ಆಕೆಯನ್ನು ಮಾತನಾಡಿಸಿ, ಮೆಲುದನಿಯಲ್ಲಿ, ಲೈಬ್ರೆರಿಯಲ್ಲಿ ಬೇರೆ ಎಲ್ಲೂ ಜಾಗ ಇಲ್ಲ. ಇಫ್ ಯೂ ಡೋಂಟ್ ಮೈಂಡ್, ನಾನು ನಿಮ್ಮ ಪಕ್ಕದಲ್ಲಿ ಕೂತ್ಕೋಬಹುದಾ? ಅಂತ ಕೇಳಿದ. ಅವಳು ಒಂದು ಕ್ಷಣ ಇವನ ಮುಖ ನೋಡಿ,
ನಂತರ ಲೈಬ್ರೆರಿಯಲ್ಲಿರುವ ಎಲ್ಲರನ್ನೂ ಒಮ್ಮೆ ನೋಡಿ ಎದ್ದು ನಿಂತು ಎಲ್ಲರಿಗೂ ಕೇಳಿಸುವಂತೆ ಹೇಳಿದಳು ಎಷ್ಟು ಧೈರ್ಯ ನಿಂಗೆ, ಎಲ್ಲರ ಮುಂದೆ, ನಿನ್ ನತೆ ಒಂದ್ ನೈಟ್ ಮಲಗಬೇಕು ಅಂತ ಕೇಳ್ತೀಯಾ?. ಖೇಮುಗೆ ಶಾಕ್ ಆಯ್ತು. ಗಾಬರಿ ಯಾದ. ಲೈಬ್ರೆರಿಯಲ್ಲಿದ್ದ ಎಲ್ಲರೂ ಇವನನ್ನೇ ಅಸಹ್ಯವಾಗಿ ನೋಡೋಕೆ ಶುರು ಮಾಡಿದ್ರು. ಖೇಮುಗೆ ನಾಚಿಕೆ ಆಗಿ, ಒಂದು ಬುಕ್‌ಸ್ಟ್ಯಾಂಡ್ ಬಳಿ ಹೋಗಿ ಒಂದು ಪುಸ್ತಕ ತೆಗೆದು ಮುಖ ಮುಚ್ಚಿಕೊಂಡ. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗಿ ಖೇಮು ಹತ್ರ ಬಂದು, ಸಾರಿ, ನಾನೊಬ್ಬ ಸೈಕಾಲಜಿ ಸ್ಟೂಡೆಂಟ್. ಈ ಥರ ಸಂದರ್ಭದಲ್ಲಿ ಗಂಡಸರು ಹೇಗೆ ವರ್ತಿಸ್ತಾರೆ ಅಂತ ನೋಡ ಬೇಕಿತ್ತು. ಅದಕ್ಕೆ ಹಾಗೆ ಮಾಡಿದೆ ಅಂದಳು.

ಅದಕ್ಕೆ ಖೇಮು ಅಲ್ಲಿದ್ದ ಎಲ್ಲರಿಗೂ ಕೇಳುವಂತೆ ಜೋರಾಗಿ ಹೇಳಿದ ಏನು? ಒಂದ್ ನೈಟಿಗೆ ೧೦,೦೦೦ ರುಪಾಯಿನಾ, ನೀನೇನು ತ್ರಿಪುರ ಸುಂದರಿ ಅಂತ ತಿಳ್ಕೊಂಡಿದ್ದೀಯಾ?. ಮತ್ತೆ ಅಲ್ಲಿದ್ದ ಎಲ್ಲರೂ ಇನ್ನಷ್ಟು ಆಶ್ಚರ್ಯದಿಂದ ಆ ಹುಡುಗಿಯನ್ನು ನೋಡಿದರು. ಹುಡುಗಿ ಗಾಬರಿಯಾಗಿ ನಿಂತಿದ್ದು ನೋಡಿ ಖೇಮು ಹೇಳಿದ, ನಾನು ಲಾ ಸ್ಟೂಡೆಂಟ್, ಒಬ್ಬರು ಹಾಕಿದ ಕೇಸನ್ನ ಅವರಿಗೆ ಉಲ್ಟಾ ತಿರುಗಿಸೋದು ಹೆಂಗೆ ಅಂತ ನನಗೆ ಗೊತ್ತು.

ಲೈನ್ ಮ್ಯಾನ್
? ಕಾಡುಪಾಪಗಳ ಫೋಟೋ ತೆಗೆಯೋನು, ವೈಲ್ಡ್ ಲೈಫ್ ಫೋಟೋಗ್ರಾಫರ್
-ಮನೆಯಲ್ಲಿ ಪಾಪುಗಳ ಫೋಟೋ ತೆಗೆಯೋನು, ಚೈಲ್ಡ ಲೈಫ್ ಫೋಟೋಗ್ರಾಫರ್

? ಫೋಟೋಗ್ರಾಫರ್ ಒಬ್ಬ ಸತ್ತರೆ, ನ್ಯೂಸ್ ಹೆಡ್ ಲೈನ್ -ಫೋಟೋಗ್ರಾಫರ್ ಫಿನಿಷ್

? ಸಂಸಾರಗಳ ಗುಟ್ಟು -ಒಂದ್ ಸಂಸಾರ ಇದ್ರೆ – family.
-೨-೩ ಸಂಸಾರ ಇದ್ರೆ – joint family.
-ಅದಕ್ಕೂ ಜಾಸ್ತಿ ಇದ್ರೆ?- Giant family
? ತುಂಬಾ ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ
-Celan- ik
? ಗೊಂಬೆ ಆಡ್ಸೋಕೆ ಇರಬೇಕಾದ ಪ್ರಮುಖ ಅಂಶ
-‘ಕೀ’ ಫ್ಯಾಕ್ಟರ್
? ಜಗತ್ತಿನ ಅತಿ ಕಷ್ಟದ ಕೆಲಸ
-ಚೀನಾದಲ್ಲಿ ಫೇಸ್ ರೀಡಿಂಗ್ ಕೆಲಸ ಮಾಡೋದು
? ಇನ್ನೊಬ್ಬರನ್ನ ತುಳಿದು ಚೆನ್ನಾಗಿ ಬದುಕ್ತಾ ಇರೋರನ್ನ ನೋಡಿ ಹುಟ್ಟಿದ ಗಾದೆ
-ತುಳಿದವನು ಬಾಳಿಯಾನು
? ಮದುವೆ ಆದ್ಮೇಲೆ ಲೈಫ್ ತುಂಬಾ ಚೆನ್ನಾಗಿರುತ್ತೆ ಅನ್ನೋ ಬ್ಯಾಚುಲರ್ ನಂಬಿಕೆ
-ತಾಳಿ ಕಟ್ಟಿದವನು ಬಾಳಿಯಾನು
? ಬೈಜೂಸ್ ನಂತಹ ಎಜ್ಯುಕೇಶನ್ ಆಪ್ ಗಳ ಕಾಲ
-‘ಕಲಿ’ಯುಗ
ಸ್ಮಶಾನದಲ್ಲಿ ಆಡೋ ಆಟ
-ಲ‘ಗೋರಿ’