Thursday, 12th December 2024

ಸ್ಮಾರ್ಟ್‌ ಫೋನ್‌ನ ಮಕ್ಕಳು ಸ್ಮಾರ್ಟ್‌ ಆಗ್ತಿಲ್ಲವೇಕೆ ?

ವಿಶ್ಲೇಷಣೆ

ಎಲ್‌.ಪಿ.ಕುಲಕರ್ಣಿ

kulkarnilp007@gmail.com

ಅದುವರೆಗೂ ಪತ್ರ ಸಂದೇಶದಿಂದ ಕೂಡಿದ್ದ ನಮ್ಮ ಸಂವಹನ; ೧೯೨೬ ರಲ್ಲಿ ಟೆಲಿಫೋನ್‌ಗಳು ಆರಂಭವಾದಾಗ ದೂರದ ವ್ಯಕ್ತಿಗಳ ಜೊತೆಗೆ ಶಬ್ದದ ಮೂಲಕ ಸಾಧ್ಯವಾಯಿತು. ನಂತರ, ೧೯೯೨-೯೩ ರಲ್ಲಿ ಆರಂಭವಾದ ಸ್ಮಾರ್ಟ್ ಫೋಗಳು ಭಾರತಕ್ಕೆ ಲಗ್ಗೆ ಇಟ್ಟದ್ದು ೨೦೦೮ ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಈ ಇವುಗಳು ಲೇಟೆ ವರ್ಷನ್‌ಗಳಾಗುತ್ತ; ಸಾವಿರಾರು ಅಪ್ಡೇಟ್‌ ಗಳನ್ನು ಪಡೆದುಕೊಂಡು ಗ್ರಾಹಕ ಸ್ನೇಹಿಯಾಗಿವೆ.

ಸದ್ಯ, ಚಿಕ್ಕ ಮಕ್ಕಳನ್ನೇ ಮೊದಲು ಮಾಡಿಕೊಂಡು ಯುವ ಕರು, ಹಿರಿಯರಲ್ಲೂ ಈ ಸ್ಮಾರ್ಟ್ ಫೊನುಗಳ ಗೀಳು ಎಷ್ಟಾಗಿದೆ ಯೆಂದರೆ ಒಂದು ಕ್ಷಣವೂ ಅವರು ಇದನ್ನು ಬಿಟ್ಟಿರಲಾರರು. ಕೆಲವರಿಗಂತೂ ಮೊಬೈಲ್ ಇದ್ದರೆ ಸಾಕು ಮುಂದೆ ಯಾರು ಬಂದು ಮಾತನಾಡಿಸಿದರೂ ಅದರ ಪರಿವೇ ಇರುವುದಿಲ್ಲ. ಇದು ಆರೋಗ್ಯಕರ ಲಕ್ಷಣವಲ್ಲ ಎನ್ನುತ್ತಿದ್ದಾರೆ ಜಗತ್ತಿನ ದೈತ್ಯ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಯಾದ ಶಿಯೋಮಿಯ ಇಂಡಿಯಾ ಘಟಕದ ಮಾಜಿ ಮುಖ್ಯಸ್ಥರಾಗಿದ್ದ ಮನು ಕುಮಾರ್ ಜೈನ್. ಈ ಕುರಿತು ಅವರು ತಮ್ಮ ಸುದೀರ್ಘ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

ಜೈನ್ ಅವರು ಹಂಚಿಕೊಂಡ ಆ ಸಂದೇಶವನ್ನು ತಿಳಿಯುವುದಕ್ಕೂ ಮುಂಚೆ ವೈದ್ಯರೊಬ್ಬರು ಕಂಡ ಎರಡು ಸತ್ಯ ಘಟನೆ ಗಳನ್ನು ತಿಳಿದುಕೊಂಡು ಬರೋಣ. ನನ್ನ ಆತ್ಮೀಯ ಸ್ನೇಹಿತ ಡಾ.ಪ್ರವೀಣ ಅಂಗಡಿ ನುರಿತ ವೈದ್ಯನಾಗಿ ಈ ಮೊದಲು ಬೆಂಗಳೂರಿನ ನಿಮ್ಹಾನಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಶೃಂಗೇರಿಯ ಒಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತ್ತಿದ್ದಾನೆ. ಆತನೊಂದಿಗೆ ಆಗಾಗ ಲೋಕಾಭಿರಾಮವಾಗಿ ಮಾತನಾಡುತ್ತ ಹಾಗೆ ಕೆಲವು ಪ್ರಸ್ತುತ ವಿಷಯಗಳ ಕುರಿತು ಚರ್ಚೆ ಮಾಡು
ತ್ತಿರುತ್ತೇನೆ. ಈಗಿನ ಮಕ್ಕಳು, ಯುವಕರು, ಹಿರಿಯರ ಸ್ಮಾರ್ಟ್ ಫೋನ್ ಗೀಳಿನ ಬಗ್ಗೆ ಒಮ್ಮೆ ಚರ್ಚಿಸುತ್ತಿದೆ.

ಆಗ ಆತ ತನ್ನ ಕನ್ಸಲ್ಟಿಗೆಂದು ಬಂದಿದ್ದ ಇಬ್ಬರು ಮಕ್ಕಳ ಘಟನೆಗಳನ್ನು ಹೇಳಿದ. ಹದಿಮೂರು ವರ್ಷದ ಮಗು ದಿನ
ಬೆಳಗಾದರೆ ಸಾಕು ಸ್ಮಾರ್ಟ್ ಫೋನ್ ಬಿಟ್ಟು ಮೇಲೇಳಲ್ಲ. ಕೂತರು, ನಿಂತರೂ, ಆಟ, ಊಟದ ಸಮಯದಲ್ಲೂ ಅದರ ಕೈಯ್ಯಲ್ಲಿ ಮೊಬೈಲ್ ಇರಬೇಕು. ರಾತ್ರಿ ಮಲಗಿದಾಗ ಅದೇನೇನೋ ತನ್ನಷ್ಟಕ್ಕೆ ತಾನೇ ಹುಚ್ಚರ ಹಾಗೆ ಮಾತನಾಡುತ್ತಾನೆ. ಮನೆಯಲ್ಲಿ ಯಾರ ಜೊತೆನೂ ಬೆರೆಯುವುದಿಲ್ಲ. ಮುಂದಿರುವವರ ಮುಖಕ್ಕೆ ಮುಖಕೊಟ್ಟು ಮಾತನಾಡುವುದಿಲ್ಲ.

ಒಂದು ರೀತಿ ಸೈಕೋ ಆದಹಾಗೆ ಆಗಿದ್ದಾನೆ. ಇನ್ನು ಎರಡನೇ ಮಗು(ಪೇಷಂಟ) ಒಂದು ಕೋಣೆಯಲ್ಲಿ ಒಬ್ಬನೇ ಕುಳಿತು ಆರೇಳು ಗಂಟೆ ತದೇ ಕಚಿತ್ತದಿಂದ ಸ್ಮಾರ್ಟ್ ಫೋನಿನ ಮುಳುಗಿಹೋಗಿದೆ. ಮೊಬೈಲು ಹೊರಡಿಸುವ ವಿಕಿರಣಗಳಿಗೆ ತುತ್ತಾಗಿ ಕಣ್ಣಿಗೆ ಕತ್ತಲು ಆವರಿಸಿದಂತಾಗಿ ಮೂರ್ಛೆ ಹೋಗಿ ನೆಲದ ಮೇಲೆ ಬಿದ್ದಿದೆ. ಆ ಮಗುವಿಗೆ ಬಾಹ್ಯ ಜಗತ್ತಿನ ಪರಿವೇ ಇಲ್ಲವೆಂಬಂ
ತಾಗಿದೆ. ಈ ಎರಡೂ ಮಕ್ಕಳ ಸ್ಥಿತಿಯನ್ನು ಕಂಡ ನನ್ನ ವೈದ್ಯ ಸ್ನೇಹಿತ, ಅವರಿಗೆ ಸೂಕ್ತವಾದ ಚಿಕಿತ್ಸೆ ಕೊಟ್ಟು ಮನೆಗೆ
ಕಳಿಸಿಕೊಟ್ಟಿದ್ದಾನೆ.

‘ಮೊಬೈಲಿನಲ್ಲಿನ ವಿಡಿಯೋ ಗೇಮ, ರೀಲ್ಸ್ ಗಳಂತಹ ವರ್ಚ್ಯೂಯಲ್ ಜಗತ್ತಿನ ಕಾಲಕಳೆಯುತ್ತಿರುವ ಇಂದಿನ ಮಕ್ಕಳನ್ನು, ನಾವು ಮರಗಿಡಗಳು, ಅರಣ್ಯ, ಪ್ರಾಣಿ- ಪಕ್ಷಿಗಳಂತಹ ನೈಜ ಪರಿಸರದ ಹತ್ತಿರ ಕರೆದುಕೊಂಡು ಹೋಗಬೇಕಿದೆ. ಹಾಗಾದಾಗ ಮಾತ್ರ ಮಕ್ಕಳು ಸಹಜವಾಗಿ ಬದುಕಲು ಸಾಧ್ಯ. ಇಲ್ಲವಾದರೆ ಇಂದಿನ ಮಕ್ಕಳು ಮಾನಸಿಕ ರೋಗಿಗಳಷ್ಟೇ ಅಲ್ಲ ದೈಹಿಕ ವಾಗಿಯೂ ದುರ್ಬಲರಾಗುವ ಸಾಧ್ಯತೆ ಹೆಚ್ಚಿದೆ.’ ಎನ್ನುತ್ತಾರೆ ಡಾ. ಪ್ರವೀಣ ಅಂಗಡಿ. ನಾವಿಂದು ಬಳಸುತ್ತಿರುವ ರೆಡ್ ಮಿ, ರಿಯಲ್ ಮಿ, ಒಪ್ಪೋ ಮುಂತಾದ ಬ್ರ್ಯಾಂಡೆಡ್ ಸ್ಮಾರ್ಟ್ ಫೋನುಗಳ ಮೂಲ ಕಂಪನಿ ಈ ಶಿಯೋಮಿ ಆಗಿದೆ.

ಶಿಯೋಮಿ ಕಂಪನಿ ಭಾರತದಲ್ಲೂ ತನ್ನ ಬ್ರ್ಯಾಂಚ್‌ನ್ನು ಓಪನ್ ಮಾಡಿದೆ. ಇ.ಡಿ ವಶಪಡಿಸಿಕೊಳ್ಳುವ ಆದೇಶವನ್ನು ವಿರೋಧಿಸಿ ಶಿಯೋಮಿ ಕಂಪನಿ ಸಲ್ಲಿಸಿದ ಪ್ರಕರಣದಲ್ಲಿ, ಮನು ಕುಮಾರ್ ಜೈನ್ ಸೇರಿದಂತೆ ಉನ್ನತ ಅಧಿಕಾರಿಗಳು ಏಜೆನ್ಸಿಯ ವಿಚಾರಣೆಯ ಸಮಯದಲ್ಲಿ ದೈಹಿಕ ಹಿಂಸೆ ಮತ್ತು ಬಲವಂತದ ಬೆದರಿಕೆಗಳನ್ನು ಎದುರಿಸಿದ್ದಾರೆ ಎಂದು ಕಂಪನಿ ಆರೋಪಿಸಿದೆ.

ಇದರಿಂದ ಬೇಸರಗೊಂಡು ಕಳೆದ ಒಂಭತ್ತು ವರ್ಷಗಳಿಂದ ಶಿಯೋಮಿ ಇಂಡಿಯಾದ ಮುಖ್ಯಸ್ಥರಾಗಿದ್ದ ಮನುಕುಮಾರ್ ಜೈನ್ ಕಂಪನಿಯಿಂದ ಹೊರ ಬಂದಿದ್ದಾರೆ. ಹೀಗೆ ಹೊರಬಂದ ಜೈನ್ ಸುಮ್ಮನೇ ಕುಳಿತಿಲ್ಲ. ಲಿಂಕ್ಡ್ ಇನ್ ನಂತಹ ತಾಣಗಳಲ್ಲಿ ತಮ್ಮ ಸಾಮಾಜಿಕ ಕಳಕಳಿಯ ಅಭಿಪ್ರಾಯಗಳನ್ನು ಶೇರ್ ಮಾಡುತ್ತಿದ್ದಾರೆ. ಪುಸ್ತಕ ಹಿಡಿದು ಓದಿ-ಬರೆದು, ಪರಿಸರದಲ್ಲಿ ಸ್ವಚ್ಛಂದವಾಗಿ ಆಡಬೇಕಿದ್ದ ನಮ್ಮ ಪುಟ್ಟ ಮಕ್ಕಳು ದಿನಪೂರ್ತಿ ಸ್ಮಾರ್ಟ್‌ಗಳ ಮುಳುಗಿ ಆರೋಗ್ಯ ಹಾಳು ಮಾಡಿಕೊಳ್ಳು ತ್ತಿದ್ದಾರೆ. ಈ ಕುರಿತು ಮನು ಕುಮಾರ್ ಜೈನ್ ಏನು ಹೇಳಿದ್ದಾರೆಂದು ಅವರೇ ಶೇರ್ ಮಾಡಿದ ಲೇಖನವನ್ನು ಒಮ್ಮೆ ಓದೋಣ. ಸ್ಮಾರ್ಟ್-ನ್‌ಗಳು ನಮ್ಮ ಜೀವನದಲ್ಲಿ ನಿರ್ವಿವಾದವಾಗಿ ಕ್ರಾಂತಿಯನ್ನುಂಟುಮಾಡಿವೆ.

ಆದರೆ, ಅವು ಹಲವು ಪ್ರಶ್ನೆಗಳನ್ನು ಉಳಿಸಿವೆ: ಕ್ರೀಡೆಯಲ್ಲಿ ತೊಡಗಿರುವ ಅಥವಾ ಪುಸ್ತಕಗಳಲ್ಲಿ ತೊಡಗಿಸಿಕೊಳ್ಳಬೇಕಾದ ನಮ್ಮ ಮಕ್ಕಳಿಗೆ ನಾವು ಸ್ಮಾರ್ಟ್ ಫೋನುಗಳನ್ನು ಸುಲಭವಾಗಿ ಕೊಡಬೇಕೆ? ದುಃಖಕರವೆಂದರೆ; ಇಂದು, ಮಕ್ಕಳಿಗೆ
ಸ್ಮಾರ್ಟೋನ್‌ಗಳನ್ನು ನೀಡುವ ಕಲ್ಪನೆಯು ನಮ್ಮ ಸಮಾಜ ದಲ್ಲಿ ಸಾಮಾನ್ಯವಾಗಿದೆ. ಇದರಿಂದ ಮಕ್ಕಳು ಬಯಲಿನಲ್ಲಿ
ಆಟ ಆಡುವುದನ್ನು ಬಿಟ್ಟುಬಿಡುತ್ತಿದ್ದಾರೆ. ಬದಲಿಗೆ ಮೊಬೈಲ್ ಆಟಗಳಲ್ಲಿ ಮುಳುಗಲು ಅಥವಾ ವಯಸ್ಸಿಗೆ ಸೂಕ್ತವಲ್ಲದ ಕಾರ್ಯಕ್ರಮಗಳನ್ನು ವೀಕ್ಷಿಸಲು ಆರಿಸಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಅವರ ಅತಿ ಯಾದ ಒಳಗೊಳ್ಳುವಿಕೆ ಪೋಷಕರನ್ನು ಚಿಂತೆಗೆ ದೂಡಿದೆ. ಶಿಯೋಮಿ ಇಂಡಿಯಾದ ಮಾಜಿ ಮುಖ್ಯಸ್ಥ ಮನುಕುಮಾರ್ ಜೈನ್ ಅವರು ಈ ಕುರಿತು ಹೀಗೆ ಎಚ್ಚರಿಕೆಯನ್ನು ಧ್ವನಿಸಿದ್ದಾರೆ. ನಮ್ಮ ಗಮನವನ್ನು ಕೋರುವ ತುರ್ತು ಸಂದೇಶವನ್ನು ಸಾರಿದ್ದಾರೆ. ‘ನಿಮ್ಮ ಮಕ್ಕಳಿಗೆ ಸ್ಮಾರ್ಟೋನ್ ನೀಡುವುದನ್ನು ನಿಲ್ಲಿಸಿ’ ಎಂಬ ಶಿರ್ಶಿಕೆಯೊಂದಿಗೆ ಆರಂಭವಾಗುವ ಅವರ ಲೇಖನವನ್ನು ಲಿಂಕ್ಡ್ ಇನ್‌ನಲ್ಲಿ ಓದಬಹುದು.

ಇತ್ತೀಚೆಗೆ ಪ್ರತಿಷ್ಟಿತ ಸೇಪಿಯನ್ ಲ್ಯಾಬ್ ಹೊರ ಹಾಕಿದ ವರದಿಯಿಂದ ಹಂಚಿಕೊಳ್ಳುತ್ತಾ, ಜೈನ್ ಹೀಗೆ ಬರೆಯುತ್ತಾರೆ,
‘ಸಪಿಯನ್ ಲ್ಯಾಬ್ಸ್‌ನ ಈ ವರದಿಯನ್ನು ಸ್ನೇಹಿತರೊಬ್ಬರು ಹಂಚಿಕೊಂಡಿದ್ದಾರೆ. ಇದು ಚಿಕ್ಕ ಮಕ್ಕಳಿಗೆ ಸ್ಮಾರ್ಟೋನ್‌ಗಳ (
ಟ್ಯಾಬ್ಲೆಟ್‌ಗಳು) ಆರಂಭಿಕ ಪ್ರವೇಶದ ನಡುವಿನ ಆಳವಾದ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಮತ್ತು ವಯಸ್ಕರಂತೆ
ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅಧ್ಯಯನದ ಸಂಖ್ಯೆಗಳು ನಿಜವಾಗಿಯೂ ಆಘಾತಕಾರಿ: ಸುಮಾರು ೧೦ ವರ್ಷಕ್ಕಿಂತ ಮೊದಲು ಸ್ಮಾರ್ಟ್ ಫೋನ್‌ಗಳಿಗೆ ತೆರೆದುಕೊಂಡಿರುವ ೬೦-೭೦ ಪ್ರತಿಶತ ಮಹಿಳೆಯರು ವಯಸ್ಕರಂತೆ ಮಾನಸಿಕ ಆರೋಗ್ಯ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ. ಪುರುಷರು ಸಹ ಪ್ರತಿರಕ್ಷಿತರಲ್ಲ, ಸುಮಾರು ೧೦ ವರ್ಷಕ್ಕಿಂತ ಮೊದಲು ಸ್ಮಾರ್ಟ್ಫೋನ್‌ಗಳಿಗೆ
ತೆರೆದು ಕೊಳ್ಳುವವರಲ್ಲಿ ೪೫-೫೦ ಪ್ರತಿಶತದಷ್ಟು ಜನರು ನಂತರ ಜೀವನದಲ್ಲಿ ಇದೇ ರೀತಿಯ ಸವಾಲುಗಳನ್ನು ಎದುರಿ
ಸುತ್ತಾರೆ. ಅಳುವುದು, ಊಟದ ಸಮಯದಲ್ಲಿ ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಿವಿಧ ಸಂದರ್ಭಗಳಲ್ಲಿ ಮಕ್ಕಳನ್ನು ಆಕ್ರಮಿಸಿಕೊಳ್ಳುವ ಸಾಧನವಾಗಿ ಸ್ಮಾರ್ಟ್ ಫೋನ್‌ಗಳನ್ನು ಹಸ್ತಾಂತರಿಸುವ ಪ್ರಲೋಭನೆಯನ್ನು ವಿರೋಧಿಸಲು
ಪೋಷಕರನ್ನು ಒತ್ತಾಯಿಸುತ್ತದೆ.

ಬದಲಾಗಿ, ಅವರು ನೈಜ-ಪ್ರಪಂಚದ ಸಂವಹನಗಳನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ. ಹೊರಾಂಗಣ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾರೆ. ಮಕ್ಕಳನ್ನು ಆಸಕ್ತಿಕರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಜೈನ್ ಅವರ ಪ್ರಕಾರ, ಅಂತಹ ಕ್ರಮಗಳು ಆರೋಗ್ಯಕರ ಮತ್ತು ಹೆಚ್ಚು ಸಮತೋಲಿತ ವಾತಾವರಣವನ್ನು ರಚಿಸಬಹುದು. ಅದು ಅಧಿಕೃತ ಕಲಿಕೆ ಮತ್ತು ಸಾಮಾಜಿಕ ಸಂವಹನಗಳನ್ನು ಬೆಂಬಲಿಸುತ್ತದೆ.

ಜೈನ್ ಅವರು ತಮ್ಮ ಮಕ್ಕಳ ಮಾನಸಿಕ ಆರೋಗ್ಯವನ್ನು ರಕ್ಷಿಸುವಲ್ಲಿ ಪೋಷಕರ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತಾರೆ. ಮಿತಿಮೀರಿದ ಸ್ಕ್ರೀನ್ ಟೈಮ(ಪರದೆಯ ಸಮಯದ) ಹಾನಿಕಾರಕ ಪರಿಣಾಮಗಳ ವಿರುದ್ಧ ಅವರು ಎಚ್ಚರಿಕೆ ನೀಡುತ್ತಾರೆ. ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ, ಅವರ ಅಮೂಲ್ಯವಾದ ಬಾಲ್ಯದ ಮೌಲ್ಯವನ್ನು ಒತ್ತಿಹೇಳುತ್ತಾರೆ. ತಮ್ಮ ಮಕ್ಕಳಿಗೆ ಉಜ್ವಲ ಮತ್ತು ಆರೋಗ್ಯಕರ ಭವಿಷ್ಯಕ್ಕಾಗಿ ಅತ್ಯುತ್ತಮವಾದ ಅಡಿಪಾಯವನ್ನು ಒದಗಿಸುವುದು ಪೋಷಕರ ಕರ್ತವ್ಯ ಎಂದು ಜೈನ್ ಮತ್ತೊಮ್ಮೆ ಒತ್ತಿಹೇಳುತ್ತಾರೆ.

ಹಾಗಂತ ಜೈನ್ ಅವರು ಸ್ಮಾರ್ಟ್ ಫೋನಿಗಳ ವಿರೋಧಿಯಲ್ಲ. ನಮ್ಮ ಜೀವನದ ಮೇಲೆ ಅವುಗಳ ರೂಪಾಂತರದ ಪ್ರಭಾವವನ್ನು ಮತ್ತು ಅವು ತರುವ ಅನುಕೂಲತೆ ಮತ್ತು ಸಂಪರ್ಕವನ್ನು ಒಪ್ಪಿಕೊಳ್ಳುತ್ತಾರೆ. ಈ ಸಾಧನಗಳನ್ನು ಸ್ವತಃ ವ್ಯಾಪಕವಾಗಿ ಬಳಸುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಆದಾಗ್ಯೂ, ಚಿಕ್ಕ ಮಕ್ಕಳಿಗೆ ಅವುಗಳನ್ನು ಒದಗಿಸುವಾಗ ಎಚ್ಚರಿಕೆಯ ಅಗತ್ಯವನ್ನು ಅವರು ಒತ್ತಿಹೇಳುತ್ತಾರೆ. ಹೀಗೆ ಸ್ಮಾರ್ಟ್ ಫೋನುಗಳ ವ್ಯವಸ್ಥಿತ ನಿರ್ಭಂದಿತ ಬಳಕೆಗೆ ಸಲಹೆ ನೀಡುತ್ತಾರೆ.