Friday, 22nd November 2024

ಭಾರಿ ಬಿರುಗಾಳಿಗೆ ಇಬ್ಬರು ಬಲಿ, ಸಪ್ತ ಋಷಿಗಳ ಪ್ರತಿಮೆಗಳು ಭಗ್ನ

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಬೀಸುತ್ತಿರುವ ಭಾರಿ ಬಿರುಗಾಳಿಗೆ ಇಬ್ಬರು ಬಲಿಯಾಗಿ, ಮೂವರು ಗಾಯಗೊಂಡಿದ್ದಾರೆ.  ಮಹಾಕಾಲ್ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸ ಲಾಗಿದ್ದ ಸಪ್ತ ಋಷಿಗಳ ಪ್ರತಿಮೆ ಗಳು ಭಗ್ನಗೊಂಡಿವೆ.

ಕಳೆದ ಅಕ್ಟೋಬರ್ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಮಹಾಕಾಲ್ ಲೋಕ ದೇವಾಲಯದ ಕಾರಿಡಾ ರ್‍ನಲ್ಲಿದ್ದ ಏಳು ಸಪ್ತ ಋಷಿಗಳ ಪ್ರತಿಮೆಗಳು ಹಾನಿಗೊಳಗಾಗಿವೆ.

ಸುಮಾರು 50 ಮರಗಳು ಹಾಗೂ ಹಲವು ವಿದ್ಯುತ್ ಕಂಬಗಳು ಧರೆಗುರು ಳಿವೆ. ಮಹಾಕಾಲ್ ಲೋಕದಲ್ಲಿ 155 ವಿಗ್ರಹಗಳಿವೆ. ಹಾನಿಗೊಳಗಾದ ಮೂರ್ತಿಗಳನ್ನು ಗುತ್ತಿಗೆದಾರರೇ ದುರಸ್ತಿಗೊಳಿಸಲಿದ್ದಾರೆ.

ಉಜ್ಜಯಿನಿ ನಗರದಲ್ಲಿ ಮರವೊಂದು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮತ್ತೋರ್ವ ನಾಗಡಾದಲ್ಲಿ ಕಚ್ಚೆ ಮನೆಯ ಗೋಡೆ ಕುಸಿದು ಮೃತಪಟ್ಟಿ ದ್ದಾನೆ. ಇದೇ ಜಿಲ್ಲೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ದೇವಾಲಯದ ಕಾರಿಡಾರ್ ನಿರ್ಮಾಣ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿ ಸಿದ್ದು, ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಳೇಶ್ವರ ದೇವಸ್ಥಾನದ ಸುತ್ತಲಿನ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಪುನರುಜ್ಜೀವನಗೊಂಡ ಹಳೆಯ ರುದ್ರಸಾಗರ ಸರೋವರವನ್ನು ದೇಶದಲ್ಲೇ ಅತಿ ಉದ್ದದ ಕಾರಿಡಾರ್ ಎಂದು ಹೇಳಲಾಗುತ್ತದೆ.

ಭಾರತೀಯ ಹವಾಮಾನ ಇಲಾಖೆಯ ಭೋಪಾಲ್ ಕೇಂದ್ರದ ಕರ್ತವ್ಯ ಅಧಿಕಾರಿ ಜೆ ಪಿ ವಿಶ್ವಕರ್ಮ ಅವರು, ಉಜ್ಜಯಿನಿಯಲ್ಲಿ ಗಾಳಿಯ ವೇಗವನ್ನು ಅಳೆಯಲು ನಾವು ಉಜ್ಜಯಿನಿಯಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರವನ್ನು ಹೊಂದಿಲ್ಲ, ಅಂತಹ ಯಂತ್ರವನ್ನು ಸ್ಥಾಪಿಸುವಂತೆ ನಾವು ಬೇಡಿಕೆ ಸಲ್ಲಿಸಲಿದ್ದೇವೆ ಎಂದು ಹೇಳಿದರು.