Sunday, 15th December 2024

ಯೋಜನಾತ್ಮಕ ಮೈತ್ರಿ ರಚಿಸಿಕೊಂಡ ಬ್ರಿಡ್ಜ್ ಹೆಲ್ತ್ ಮತ್ತು ಪ್ರೈಮಸ್ ಸೀನಿಯರ್ ಲಿವಿಂಗ್

ಬೆoಗಳೂರು: ಕ್ರಿಶ್ ಗೋಪಾಲ ಕೃಷ್ಣನ್ ಅವರಿಂದ ನಿಧಿ ಪಡೆದಿರುವ ಸಕ್ರಿಯ ಆರೈಕೆ ಆರೋಗ್ಯ ತಂತ್ರಜ್ಞಾನ ಕಂಪನಿಯಾದ ಬ್ರಿಡ್ಜ್ ಹೆಲ್ತ್ ಈಗ ಭಾರತದಲ್ಲಿ ಹಿರಿಯ ವಯಸ್ಕರಿಗೆ ವಿಲಾಸಿ ಸಮುದಾಯಗಳ ಚಿಂತನೆಗಳನ್ನು ಸಾದರಪಡಿಸುವಲ್ಲಿ ಮತ್ತು ಅವುಗಳನ್ನು ಸೃಷ್ಟಿಸುವಲ್ಲಿ ಆದ್ಯಪ್ರವರ್ತಕರಾದ ಪ್ರೈಮಸ್ ಸೀನಿಯರ್ ಲಿವಿಂಗ್ ಅವರೊಂದಿಗೆ ಯೋಜನಾತ್ಮಕ ಮೈತ್ರಿಯನ್ನು ಮಾಡಿಕೊಂಡಿದೆ.

ಈ ಎರಡು ಸಂಸ್ಥೆಗಳು ಒಟ್ಟಾಗಿ ತನ್ನ ರೀತಿಯ ಪ್ರಥಮ ನಿರ್ವಹಿಸಲಾದ ಹಿರಿಯರ ಆರೈಕೆ ಸೇವೆ-`ಒನ್ ಕೇರ್’ ಅನ್ನು ಆರಂಭಿಸಲು ಮುಂದಾಗಿದೆ. ವರ್ಷಪೂರ್ತಿ ಇರುವಂತಹ ಮತ್ತು ವೈಯಕ್ತಿಕ ಅಗತ್ಯಗಳಿಗೆ ತಕ್ಕಂತಹ ಆರೋಗ್ಯ ಯೋಜನೆ ಒಂದೇ ಸೂರಿನಡಿ ಜಗತ್ತಿನಲ್ಲಿ ಅತ್ಯುತ್ತಮವಾದ ಸೌಲಭ್ಯಗಳನ್ನು ಸಾದರಪಡಿಸುತ್ತಿದೆ. ಸಕ್ರಿಯ ಆರೈಕೆ ಮತ್ತು ತುರ್ತು ಸೇವೆಗಳನ್ನು ಇದು ಒಳಗೊಂಡಿದ್ದು, ದೇಶದಲ್ಲಿ ಹಿರಿಯ ವಯಸ್ಕರ ಆರೈಕೆಯಲ್ಲಿ ಕ್ರಾಂತಿ ತರಲು ಮುಂದಾಗಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಸಂಖ್ಯೆಯ ಹಿರಿಯ ವಯಸ್ಕರ ಜೀವನಾವಧಿಯಲ್ಲದೆ, ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಸಹಾಯವಾಗುವಂತೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಬೆಂಗಳೂರಿನ ಕನಕಪುರ ರಸ್ತೆಯ ಪ್ರೈಮಸ್ ರಿಫ್ಲೆಕ್ಷನ್ಸ್ನಲ್ಲಿ ಮೊದಲ ಯೋಜನೆಯನ್ನು ಆರಂಭಿಸಲಾಗುತ್ತಿದೆ.

ಬ್ರಿಡ್ಜ್ ಹೆಲ್ತ್ನ ಚರ‍್ಮನ್ ಆದ ಕ್ರಿಶ್ ಗೋಪಾಲಕೃಷ್ಣನ್ ಅವರು ಮಾತನಾಡಿ, “ಗುಣಪಡಿಸುವ ಆರೈಕೆಯಿಂದ ಸಕ್ರಿಯ ಪೂರ್ವ ಆರೈಕೆಗೆ ಭಾರತದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಪರಿವರ್ತನೆಗೆ ಅವಕಾಶ ಮಾಡಿಕೊಡುವುದು ಬ್ರಿಡ್ಜ್ ಹೆಲ್ತ್ನ ಪ್ರಾಥಮಿಕ ಗುರಿಯಾಗಿದೆ. ಚರ‍್ಮನ್ ಆಗಿ ಈ ಗುರಿಯನ್ನು ಪೂರ್ಣಗೊಳಿಸುವಲ್ಲಿ ಬ್ರಿಡ್ಜ್ ಹೆಲ್ತ್ಗೆ ಮಾರ್ಗದರ್ಶನ ಮಾಡಲು ನಾನು ವೈಯಕ್ತಿಕವಾಗಿ ಸಮರ್ಪಿತನಾಗಿದ್ದೇನೆ. ಜೊತೆಗೆ ಒಬ್ಬರ ಆರೋಗ್ಯ ನಿರ್ವಹಿಸುವಲ್ಲಿ ಸಕ್ರಿಯ ಪೂರ್ವ ಆರೈಕೆಯ ಪ್ರಾಮುಖ್ಯತೆ ಕುರಿತು ಜಾಗೃತಿ ಹೆಚ್ಚಿಸುವುದು ಈ ಗುರಿಯಲ್ಲಿ ಸೇರಿದೆ’’ ಎಂದರು’’.

ಒನ್ ಕೇರ್ ಉಪಕ್ರಮ ಕುರಿತು ಬ್ರಿಡ್ಜ್ ಹೆಲ್ತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರಣ್ ವರ್ಮಾ ಅವರು ಮಾತನಾಡಿ, “ಭಾರತದಲ್ಲಿ ಪ್ರಸ್ತುತ ಜನಸಂಖ್ಯೆಯ ಶೇ.10ರಷ್ಟು ಹಿರಿಯ ವಯಸ್ಕರು ಅಥವಾ ವೃದ್ಧರಿದ್ದಾರೆ. ಈ ಸಂಖ್ಯೆ ಗಮನಾರ್ಹ ವಾಗಿ ಬೆಳೆಯುವ ನಿರೀಕ್ಷೆ ಇದೆ. ಹೆಚ್ಚುವರಿಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದ್ದು, ಮಕ್ಕಳು ತಮ್ಮ ಪೋಷಕರಿಂದ ದೂರದಲ್ಲಿ ವಾಸಿಸುವುದು ಹೆಚ್ಚುತ್ತಿದೆ. ಆದ್ದರಿಂದ ಹಿರಿಯ ವಯಸ್ಕರಿಗೆ ಸಕ್ರಿಯ ಪೂರ್ವ ಆರೈಕೆ ಹೊಂದಿರುವ ಮತ್ತು ಅನುಕೂಲಕರ ಸೇವಾ ವಿತರಣೆ ಒಳಗೊಂಡ ಸಂಪೂರ್ಣ ಆರೈಕೆಯನ್ನು ಪೂರೈಸುವ ಅಗತ್ಯವಿರುತ್ತದೆ. ಪ್ರೆöÊಮಸ್ ಸೀನಿಯರ್ ಲಿವಿಂಗ್ ಜೊತೆಗೆ ನಮ್ಮ ಯೋಜನಾತ್ಮಕ ಸಹಯೋಗದ ಮೂಲಕ ಹಿರಿಯ ವಯಸ್ಕರಿಗಾಗಿ `ಒನ್ ಕೇರ್’ ಯೋಜನೆಯ ಆರಂಭವನ್ನು ಪ್ರಕಟಿಸುವುದರ ಜೊತೆಗೆ ಈ ಗುರಿಯನ್ನು ಸಾಧಿಸಲು ನಾವು ಬದ್ಧತೆ ಹೊಂದಿರುತ್ತೇವೆ’’ ಎಂದರು.

“ಬ್ರಿಡ್ಜ್ ಹೆಲ್ತ್ನ `ಒನ್ ಕೇರ್’ ಯೋಜನೆ ಸಮಗ್ರ ಹಿರಿಯ ವಯಸ್ಕರ ಆರೈಕೆ ಮೌಲ್ಯೀಕರಣ(ಸಿಇಸಿಎ-ಕಾಂಪ್ರೆಹೆನ್ಸಿವ್ ಎಲ್ಡರ್ ಕೇರ್ ಅಸೆಸ್‌ಮೆಂಟ್) ಒಳಗೊಂಡಿದ್ದು, ಇದು ಕಾರ್ಯಾತ್ಮಕ ಸಾಮರ್ಥ್ಯಗಳು, ದೈಹಿಕ, ಗ್ರಹಿಕೆಯ ಮತ್ತು ಮಾನಸಿಕ ಆರೋಗ್ಯವನ್ನು ಮೌಲ್ಯೀಕರಣ ಕೈಗೊಳ್ಳುತ್ತದೆ. ಅದಲ್ಲದೆ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಹಲವಾರು ಪ್ರಯೋಗಾಲಯ ಮತ್ತು ವಿಕಿರಣಶಾಸ್ತç ಪರೀಕ್ಷೆಗಳನ್ನು ನಡೆಸಲಾಗುತ್ತದೆಯಲ್ಲದೆ, ಜೊತೆಗೆ ಭವಿಷ್ಯದ ಆರೋಗ್ಯ ಸ್ಥಿತಿಗಳಲ್ಲಿನ ಅಪಾಯಗಳನ್ನು ಮುಂಚಿತವಾಗಿ ಗುರುತಿಸಲಾಗುತ್ತದೆ. ಈ ಮೌಲ್ಯೀಕರಣಗಳ ನಂತರ ಬ್ರಿಡ್ಜ್ ಹೆಲ್ತ್ನ ಪರಿಣತರು ವೈಯಕ್ತಿಕ ಅಗತ್ಯಗಳಿಗೆ ತಕ್ಕಂತಹ ರೋಗ ನಿರೋಧಕ ಮತ್ತು ಚಿಕಿತ್ಸಾ ಯೋಜನೆಯೊಂದನ್ನು ಸೃಷ್ಟಿಸುವರು.

ಪ್ರೈಮಸ್ ಸೀನಿಯರ್ ಲಿವಿಂಗ್‌ನ ವ್ಯವಸ್ಥಾಪಕ ನಿರ್ದೇಶಕರಾದ ಆದರ್ಶ್ ನರಹರಿ ಅವರು ಮಾತನಾಡಿ, “ಹಿರಿಯ ವಯಸ್ಕರ ವಾಸ್ತವ್ಯದ ಸೌಲಭ್ಯಗಳನ್ನು ಕುರಿತು ವಿಸ್ತಾರವಾದ ಸಂಶೋಧನೆಯ ಮೂಲಕ ಹಿರಿಯ ವಯಸ್ಕರು ಎದುರಿಸುವ ಆರೋಗ್ಯ ಸವಾಲುಗಳನ್ನು ಗಮನಿಸುವಲ್ಲಿ ಬಹುಮುಖಿ ಮಾರ್ಗವನ್ನು ಅನುಸರಿಸುವ ಅಗತ್ಯವಿದೆ ಎಂದು ನಾನು ಅರಿತಿದ್ದೇನೆ. ಬ್ರಿಡ್ಜ್ ಹೆಲ್ತ್ನೊಂದಿಗೆ ನಮ್ಮ ಪಾಲುದಾರಿಕೆ ಮೂಲಕ ಭಾರತದಲ್ಲಿ ಪ್ರೈಮಸ್ ಸೌಲಭ್ಯಗಳಲ್ಲಿ ವಾಸ್ತವ್ಯ ಹೊಂದಿರುವ ಹಿರಿಯ ನಾಗರಿಕರಿಗಾಗಿ ಈ ಸವಾಲುಗಳನ್ನು ಗಮನಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಬ್ರಿಡ್ಜ್ ಹೆಲ್ತ್ನ ಸಮಗ್ರವಾದ ಸಕ್ರಿಯವಾದ ಮತ್ತು ನಿರ್ವಹಿಸಲಾಗುವ ಆರೈಕೆ ಸೇವೆಗಳ ಜೊತೆಗೆ ಸಂಬoಧಿತ ತಂತ್ರಜ್ಞಾನ ಮತ್ತು ವೈದ್ಯಕೀಯ ಹಾಗೂ ಕಾರ್ಯಾಚರಣೆ ಉತ್ಕೃಷ್ಟತೆಗಳು ನಮ್ಮ ಹಿರಿಯ ನಾಗರಿಕರ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ವಿಸ್ತರಿಸಲಿವೆ. ಮುಂದಿನ ಕೆಲವು ವರ್ಷಗಳಲ್ಲಿ ಆರು ನಗರಗಳಲ್ಲಿ 2500 ವಸತಿ ಮನೆಗಳನ್ನು ನಿರ್ಮಿಸುವ ಗುರಿಯ ಜೊತೆಗೆ ನಾವು ಬ್ರಿಡ್ಜ್ ಹೆಲ್ತ್ನೊಂದಿಗೆ ದೀರ್ಘಕಾಲೀನ ಸಹಯೋಗ ಹೊಂದುವುದನ್ನು ಎದುರು ನೋಡುತ್ತಿದ್ದೇವೆ’’ ಎಂದರು.

ಬ್ರಿಡ್ಜ್ ಹೆಲ್ತ್ ತನ್ನ ಬಹು ವಿಭಾಗೀಯ ಸಕ್ರಿಯ ಆರೋಗ್ಯ ಆರೈಕೆ ಪರಿಣತಿಯೊಂದಿಗೆ ಒನ್ ಕೇರ್ ಯೋಜನೆಯ ವಿನ್ಯಾಸ ಮತ್ತು ಕಾರ್ಯನಿರ್ವಹಣೆಯನ್ನು ಕೈಗೊಂಡರೆ, ಪ್ರೈಮಸ್ ಸೀನಿಯರ್ ಲಿವಿಂಗ್ ಅಸಾಧಾರಣ ರೀತಿಯ ಹಿರಿಯರ ವಾಸ್ತವ್ಯದ ಅನುಭವಗಳನ್ನು ಪೂರೈಸುವತ್ತ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸಲಿದೆ.