Thursday, 12th December 2024

ಪ್ರಾಥಮಿಕ ಕೃಷಿ ಸಹಕಾರ ಸಂಘ ನೀಡುವ ಎಲ್ಲಾ ಸೇವೆಗಳ ಬಳಸಿಕೊಳ್ಳಲು ಕೆಆರ್ ದೇವರಾಜು ಕರೆ

ತಿಪಟೂರು: ತಾಲೂಕಿನ ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪ್ರಾರಂಭಿಸಿರುವ ಈ ಸ್ಟಾಂಪಿ0ಗ್ ಕೇಂದ್ರವನ್ನು ಸಂಘದ ಅಧ್ಯಕ್ಷರಾದ ಕೆ ಆರ್ ದೇವರಾಜು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸಂಘವು ಈ ಹಿಂದಿನಿ0ದಲೂ ಉತ್ತಮ ಲಾಭವನ್ನು ಗಳಿಸುತ್ತಾ ಸದಸ್ಯರ ಹಾಗೂ ಗ್ರಾಹಕರ ಅವಶ್ಯಕತೆಗಳಿಗನುಗುಣವಾಗಿ ಹಲವಾರು ಸೇವೆಗಳನ್ನು ನೀಡುತ್ತಾ ಬಂದಿದ್ದು, ಇಂದು ಇ-ಸ್ಟಾಂಪಿ0ಗ್, ಪಹಣಿ, ಎಮ್,ಆರ್, ಎಲ್ ಐ ಸಿ ಪ್ರೀಮಿಯಂ ಪಾವತಿ ಸೇರಿದಂತೆ ಇನ್ನೂ ಹಲವು ಸೇವೆಗಳನ್ನು ಪ್ರಾರಂಭಿಸುತ್ತಿದ್ದೇವೆ. ನಮ್ಮ ಸದಸ್ಯರು ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಸಿಇಓ ಮನು ಎಸ್.ಎಮ್ ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದಿ0ದ ಸದಸ್ಯರಿಗೆ ದೊರೆಯುವ ಸೇವೆಗಳ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಾದ ಡಿ ಲಿಂಗರಾಜು, ನಿರ್ದೇಶಕರಾದ ಕೆ ಎಸ್ ಶಿವಮೂರ್ತಿ, ಕೆ ಬಸವರಾಜು, ವೀರಣ್ಣ, ಭಾರತಿ ಅಮೃತ ಶ್ರೀ ಜಯಣ್ಣ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.