Friday, 18th October 2024

ಇಂದಿನಿಂದ ಮೂರು ದಿನ ನಗರದಲ್ಲಿ ವಿಜೃಂಭಣೆಯಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ

ರಾಯಚೂರು : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮುನ್ನೂರು ಸಮಾಜವು ಕಾರ ಹುಣ್ಣಿಮೆ ಅಂಗವಾಗಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಎನ್ನುವ ಕಾರ್ಯಕ್ರಮವನ್ನು ಇಂದಿನಿಂದ ಮೂರು ದಿನಗಳ ಕಾಲ ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ಸಜ್ಜಾಗಿ ನಿಂತಿದೆ.

ಮುಂಗಾರು ಸಾಂಸ್ಕೃತಿಕ ರಾಯಚೂರು ಪುಟ್ಟ ಕಾರ್ಯಕ್ರಮಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿ ಕೊಳ್ಳಗಿದೆ ಎಂದು ಮುರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಸಿದ್ದವಾಗಿದೆ ಎಂದು ಮಾಜಿ ಶಾಸಕ ಹಾಗೂ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರ ಎಂ. ಪಾಪರೆಡ್ಡಿ ಅವರು ತಿಳಿಸಿದ್ದಾರೆ.

ಕಳೆದ 23 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಮೂರು ದಿನಗಳ ಕಾಲ ಅತ್ಯಂತ ವೈಭವದಿಂದ ನಡೆದಲಾಗುತ್ತದೆ. ನಮ್ಮ ಈ ಕಾರ್ಯಕ್ರಮ ಕರ್ನಾಟಕ ರಾಜ್ಯ ಅಷ್ಟೇ ಅಲ್ಲದೇ ದಕ್ಷಿಣ ಭಾರತ, ಉತ್ತದ ಭಾರದಲ್ಲಿ ಖ್ಯಾತಿಯನ್ನು ಹೊಂದಿದೆ. ಮುಂಗಾರು ಸಾಂಸ್ಕೃತಿಕ ರಾಯಚೂರು ಪಟ್ಟ ಕಾರ್ಯಕ್ರಮದ ಮೊದಲನೇ ದಿನವಾದ ಇಂದು ಕರ್ನಾಟಕದ ಎತ್ತುಗಳಿಗೆ ಮಾತ್ರ ಭಾರದ ಕಲ್ಲು ಎಸೆಯುವ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯನ್ನು ನೂತನ ಸಣ್ಣ ನೀರಾವರಿ ಹಾಗೂ ಪ್ರವಾಸೋದ್ಯಮ ಸಚಿವರಾದ ಎನ್‌.ಎಸ್.ಬೋಸರಾಜು ಅವರು ಉದ್ಘಾಟನೆ ಮಾಡಲಿದ್ದಾರೆ.

ಪ್ರಥಮ ದಿನದ ಸ್ಪರ್ಧೆಯಲ್ಲಿ ವಿಜೇತ ಎತ್ತು ಗಳಿಗೆ ಐದು ಬಹುಮಾನಗಳನ್ನು ನಿಗದಿಪಡಿಸಲಾಗಿದೆ. ಪ್ರಥಮ ಬಹು ಮಾನ 65,000 ರೂ.ದ್ವಿತೀಯ ತೃತೀಯ ಬಹುಮಾನ 45,000 ರೂ. ನಾಲ್ಕನೇ ಬಹುಮಾನ 35000 ಐದನೇ ಬಹುಮಾನ 30,000 ರೂ. ನೀಡಲಾಗುತ್ತದೆ.

ಕಾರ್ಯಕ್ರಮದ ಎರಡನೇ ದಿನವಾದ ಜೂನ್ 4 ರಂದು 2 ಟನ್ ಭಾರದ ಕಲ್ಲು ಎಳೆಯುವ ಅಖಿಲ ಭಾರತ ಮಟ್ಟದ ಎತ್ತುಗಳ ಸ್ಪರ್ಧೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಡಾ ಶಿವರಾಜ್ ಪಾಟೀಲ್ ಅವರು ಉದ್ಘಾಟಿಸಲಿದ್ದಾರೆ.ಎರಡು ಟನ್ ಬಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ವಿಜೇತ ಎತ್ತುಗಳಿಗೆ ಪ್ರಥಮ ಬಹುಮಾನ 80,000 ರೂ.ದ್ವಿತೀಯ ಬಹುಮಾನ 65,000 ರೂ.ತೃತೀಯ ಬಹುಮಾನ 55,000 ರೂ.ನಾಲ್ಕನೇ ಬಹುಮಾನ 45,000 ರೂ.ಐದನೇ ಬಹುಮಾನ ಕಾರ್ಯಕ್ರಮದ ಕೊನೆಯ ದಿನವಾದ ಜೂನ್ 5 ರಂದು ಎರಡುವರೆ ಟನ್ ಭಾರದ ಕಲ್ಲು ಎಳೆಯುವ ಅಖಿಲ ಭಾರತ ಮಟ್ಟದ ಎತ್ತುಗಳ ಸ್ಪರ್ಧೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಉದ್ಘಾಟಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ವಿಜೇತ ಎತ್ತುಗಳಿಗೆ ಪ್ರಥಮ ಬಹುಮಾನ 90,000 ರೂ., ದ್ವಿತೀಯ ಬಹುಮಾನ 75,000 ರೂ., ತೃತೀಯ ಬಹುಮಾನ 65,000 ರೂ., ನಾಲ್ಕನೇ ಬಹುಮಾನ 55000 ರೂ., ಐದನೇ ಬಹುಮಾನ 45,000 ರೂ., ಆರನೇ ಬಹುಮಾನ 35,000 ನೀಡಲಾಗುತ್ತದೆ ಎಂದು ಹೇಳಿದರು.

ಈ ಬಹುಮಾನ ಗಳ ವಿತರಣೆಗಾಗಿ ಕಳೆದ ಸಲ 8 ಲಕ್ಷ ರೂ.ವೆಚ್ಚ ಮಾಡಲಾಗಿತ್ತು. ಈ ವರ್ಷ 10 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಎಲ್ಲಾ ಬಹುಮಾನಗಳ ಮೊತ್ತ 2 ಲಕ್ಷ ರೂ.ಗಳನ್ನು ಈ ವರ್ಷ ಹೆಚ್ಚಿಸಲಾಗಿದೆ, ಭಾರದ ಕಲ್ಲು ಎತ್ತುಗಳ ಸ್ಪರ್ಧೆಯು ಪ್ರತಿ ಬೆಳಿಗ್ಗೆ 8 ಗಂಟೆಗೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ನಡೆಯ ಲಿದೆ.

ಜೂ. 4 ರಂದು ಕಾರ ಹುಣ್ಣಿಮೆ ದಿನದಿಂದ ಸಂಜೆ ಮುನ್ನೂರು ಕಾಪು ಸಮಾಜದ ಕುಲದೇವತೆ ಮಾತಾ ಶ್ರೀ ಲಕ್ಷ್ಮಮ್ಮದೇವಿಯ ಉತ್ಸವ ಮೂರ್ತಿ ಹಾಗೂ ಎತ್ತುಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ. ಕಣ್ಮನ ಸೆಳೆಯುವ ಈ ಬೃಹತ್ ಮೆರವಣಿಗೆ ನಗರದ ಪ್ರಮುಖ ವೃತ್ತ ರಸ್ತೆಗಳಲ್ಲಿ ನಡೆಸ ಲಾಗುತ್ತದೆ. ಮೈಸೂರಿನ ಜಂಬೂ ಸವಾರಿ ಮಾದರಿಯಲ್ಲಿ ಅದ್ಧೂರಿ ಮೆರವಣಿಗೆ ರಾಯಚೂರಿನಲ್ಲಿ ಮುನ್ನೂರು ಕಾಪು ವಿವಿಧ ಸಮಾಜ ನಡೆಸುತ್ತಿರು ವುದು ವಿಶೇಷವಾಗಿದೆ. ಈ ಮೆರವಣಿಗೆಯಲ್ಲಿ ಆಂಧ್ರ ಪ್ರದೇಶ, ತಮಿಳುನಾಡು, ತೆಲಂ ಗಾಣ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ ಗಳಿಂದ 35ಕ್ಕೂ ಅಧಿಕ ವೈವಿಧ್ಯ ಮಯ ಕಲಾತಂಡಗಳು ಈ ಮೆರ ವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಗ್ರಾಮೀಣ ಶೈಲಿಯ ಕಲಾ ರೂಪಕಗಳಾದ ವೀರಗಾಸೆ, ಕತ್ತಿ ವರಸೆ, ಡೊಳ್ಳು ಕುಣಿತ, ಗಾಲಿ ಹಲಿಗೆ, ಕರಡಿ ಮಜಲು, ಜಗ್ಗುಳಿಗೆ, ನಾದಸ್ವರ ವಾದನ, ನಂದಿ ಧ್ವಜ ಹೀಗೆ ಹಲವು ವೈವಿಧ್ಯಮಯ ಕಲಾತಂಡಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರು ವುದು ವಿಶೇಷ ಆಕರ್ಷಣೆಯಾಗಿದೆ.

ಮೂರು ದಿನಗಳ ಸಂಜೆ 6 ಗಂಟೆಗೆ ವೈವಿಧ್ಯಮಯವಾದ ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಮೊದಲ ದಿನವಾದ ದಿ.3 ರಂದು ಸಂಜೆ ನಗರದ ಡ್ಯಾಡಿ ಕಾಲೋನಿಯ ಶ್ರೀ ಈಶ್ವರ ದೇವಸ್ಥಾ ನದ ಹತ್ತಿರ, ದಿ. 4 ರಂದು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಹಾಗೂ ಕಾರ್ಯಕ್ರಮದ ಕೊನೆಯ ದಿನವಾದ ದಿ. 5 ರಂದು ನಗರದ ಗದ್ವಾಲ್ ರಸ್ತೆಯ ಶ್ರೀವೀರಾಂಜ ನೇಯ ಮುನ್ನೂರು ಕಾಪು ಕಲ್ಯಾಣ ಮಂಟಪದಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಗುಜರಾತ, ರಾಜಸ್ಥಾನ ಸೇರಿದಂತೆ ದೇಶದ ದಕ್ಷಿಣ ರಾಜ್ಯ,ಈಶಾನ್ಯ ರಾಜ್ಯಗಳ ಖ್ಯಾತ ಕಲಾವಿದರು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾ ಪ್ರದರ್ಶನ ನೀಡಲಿದ್ದಾರೆ ಎಂದು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಕಾರ್ಯಕ್ರಮದ ರುವಾರಿಗಳಾದ ಎ.ಪಾಪಾರೆಡ್ಡಿ ಅವರು ತಿಳಿಸಿದ್ದಾರೆ.