Saturday, 23rd November 2024

50 ಹೊಸ ‘ಇಂದಿರಾ ಕ್ಯಾಂಟೀನ್’ ಆರಂಭಿಸಲು ತೀರ್ಮಾನ

ಬೆಂಗಳೂರು : ಶೀಘ್ರವೇ ಹೊಸದಾಗಿ 50 ‘ಇಂದಿರಾ ಕ್ಯಾಂಟೀನ್’ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಡವರ ಇಂದಿರಾ ಕ್ಯಾಂಟೀನ್ ನನ್ನು 198 ರಿಂದ 250 ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಮೂಲಕ ಬಡವರ ಇಂದಿರಾ ಕ್ಯಾಂಟೀನ್ ಜನರ ಹೊಟ್ಟೆ ತುಂಬಿಸಲಿದೆ. ಗುಣಮಟ್ಟದ ಆಹಾರ ನೀಡಲು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ 250 ಇಂದಿರಾ ಕ್ಯಾಂಟೀನ್ ತಲೆ ಎತ್ತಲಿದ್ದು, ವಿವಿಧ ಬಗೆಯ ತಿಂಡಿ ಊಟ ಸಿಗಲಿದೆ. ತಿಂಡಿಗೆ 10 ರೂ, ಊಟಕ್ಕೆ 20 ರೂ ಬೆಲೆ ನಿಗದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಲೆ ಏರಿಸಿ ಶುಚಿಕರ ತಿಂಡಿ ಊಟ ನೀಡಲು ಸಿದ್ದತೆ ನಡೆಸಲಾಗಿದೆ ಎನ್ನಲಾಗಿದೆ.

ಬೆಳಗ್ಗೆ ತಿಂಡಿಗೆ 2 ಇಡ್ಲಿ 1 ವಡೆ, ಉಪ್ಪಿಟ್ಟು – ಕೇಸರಿಬಾತ್, ಬಿಸಿಬೇಳೆ ಬಾತ್, ಪೂಳಿಯೋಗೆರೆ, ಚಿತ್ರಾನ್ನ , ವಾಂಗಿ ಬಾತ್, , ರೈಸ್ ಬಾತ್ ಟೋಮ್ಯಾಟೋ ಬಾತ್ ಸಿಗಲಿದೆ. ಮಧ್ಯಾಹ್ನ ಊಟಕ್ಕೆ ಒಂದು ಚಪಾತಿ, ಮುದ್ದೆ, ಒಂದು ವೆಜ್ ಪಲ್ಯಾ, ಕಪ್ ವೈಟ್ ರೈಸ್, ಸಾಂಬಾರ್ ಹಾಗೂ ರಸಂ, ವೆಜ್ ಪಲ್ಯಾ ಸಿಗಲಿದೆ.

ವಾರದಲ್ಲಿ ಮೂರು ದಿನ ಮಧ್ಯಾಹ್ನ ಸಿಹಿ ತಿಂಡಿ , ಹೋಳಿಗೆ, ಅಕ್ಕಿಪಾಯಸ, ಕೇಸರಿ ಬಾತ್ ಹಾಗೂ ರಾತ್ರಿ ಊಟಕ್ಕೆ ರೈಸ್ ಬಾತ್, ಅನ್ನ ಸಾಂಬಾರ್ ಇರಲಿದೆ.