ಗುಬ್ಬಿ : ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ನೀಡಿದ್ದ ಬಿಜೆಪಿ ಸಂಸದ ಮತ್ತು ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಂಧಿಸುವಂತೆ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟಿಸುವ ಮೂಲಕ ಆಗ್ರಹಿಸಿದರು.
ಪಟ್ಟಣದ ಬಾಬು ಜಗಜೀವನ್ ರಾಮ್ ಭವನದಿಂದ ತಾಲೂಕು ಕಚೇರಿಯ ವರೆಗೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಕಾಲ್ನಡಿಗೆ ಮೂಲಕ ಮಹಿಳಾ ಕ್ರೀಡಾಪಟುಗಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತಾ ತಾಲೂಕು ಆಡಳಿತ ಸೌಧದವರೆಗೂ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಶಶಿಕಲಾ ರವರಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಭಾರತ ದೇಶದಲ್ಲಿ ಅನೇಕ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ಪ್ರಚಾರಕ್ಕೆ ಬಾರದೆ ಎಷ್ಟು ಘಟನೆಗಳು ಮುಚ್ಚಿಹೋಗಿವೆ . ಬಿಜೆಪಿ ಸಂಸದ ಕುಸ್ತಿ ಫೆಡರೇಶನ್ ಅಧ್ಯಕ್ಷರಾದ ಬ್ರಿಜ್ ಭೂಷಣ್ ಸಿಂಗ್ ರವರು ಇತ್ತೀಚಿಗೆ ದೆಹಲಿಯಲ್ಲಿ ನಡೆದ 17 ವರ್ಷದ ಬಾಲಕಿಗೆ ಅನೇಕ ಆಮೀಷಯಗಳನ್ನು ಒಡ್ಡಿ ಲೈಂಗಿಕ ದೌರ್ಜನ್ಯವೇಸಗಿದ್ದಾರೆ. ಇದು ಭವ್ಯ ಭಾರತದ ಹಾಗೂ ಅಂತರಾಷ್ಟ್ರೀಯ ಮಟ್ಟದ ಅವಮಾನಕರವಾದ ಸಂಗತಿ ಕೂಡಲೇ ಕೇಂದ್ರ ಸರ್ಕಾರವು ಅಪರಾಧಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ದಲಿತ ಮುಖಂಡ ಜಿ ಎಚ್ ಜಗನ್ನಾಥ್,ಕೊಡಿಯಲ ಮಹದೇವ್, ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಸ್ವಚ್ಛ ಸರ್ಕಾರ ಎಂದು ಮಾಧ್ಯಮದಲ್ಲಿ ಬಿತ್ತರಿಸುತ್ತಿದ್ದಾರೆ ಆದರೆ ತನ್ನದೇ ಪಕ್ಷದ ಸಂಸದ ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ ವೆಸಗಿದ್ದಾನೆ. ಈ ಬಗ್ಗೆ ಪ್ರಧಾನಿಯವರು ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಕೈ ಚೆಲ್ಲಿ ಕುಳಿತಿದ್ದಾರೆ.ನರೇಂದ್ರ ಮೋದಿ ಅವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ವಿನಃ ಶೋಷಿತರ ದಲಿತರ ಬಡ ಹೆಣ್ಣು ಮಕ್ಕಳ ಪರ ನಿಲ್ಲದ ಬಿಜೆಪಿ ಸರ್ಕಾರವು ಶ್ರೀಮಂತರ ಉನ್ನತ ವರ್ಗದವರ ಪರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ತಾಲೂಕು ಸಂಚಾಲಕರಾದ ಅದಲಗೆರೆ ಈಶ್ವರಯ್ಯ, ಎನ್ ಎ ನಾಗರಾಜ್ ಮಾತನಾಡಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಮೇಲೆ ಪೋಕ್ಸೋ ಕಾಯ್ದೆಡಿ ಪ್ರಕರಣ ದಾಖಲಾಗಿ ಸುಮಾರು15 ದಿನಗಳು ಕಳೆದರು ಕೇಂದ್ರ ಸರ್ಕಾರವು ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಕ್ರೀಡಾಪಟುಗಳು ತಾವು ಗೆದ್ದ ಪದಕವನ್ನು ಗಂಗಾ ನದಿಯಲ್ಲಿ ತೇಲಿ ಬಿಡುತ್ತೇವೆ ಎಂದು ಹೇಳುತ್ತಿದ್ದರುಕೇಂದ್ರ ಸರ್ಕಾರವು ಮೂಕ ವಾಗಿರುವುದು ಬಹಳ ವಿಷಾಧಕರವಾದ ಸಂಗತಿ. ದೇಶದ ಪ್ರತಿಯೊಬ್ಬ ರೈತರು ನಾಗರಿಕರು ದೀನದಲಿತರು ವಿದ್ಯಾರ್ಥಿಗಳು ಕ್ರೀಡಾಪಟುಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಕಿಡಿ ಕಾರಿದರು. ದಲಿತ್ ಗಂಗಣ್ಣ ಸಂಗಡಿಗರಿಂದ ಕ್ರಾಂತಿ ಗೀತೆ ಹಾಡುವ ಮೂಲಕ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ , ಕರೆ ತಿಮ್ಮಯ್ಯ, ಕಡಬ ಶಂಕರ್, ಜಿ ಅರಿವೇಸಂದ್ರ ಕೃಷ್ಣಪ್ಪ, ಕಿಟ್ಟದಕುಪ್ಪೆ ನಾಗರಾಜು, ಕಲ್ಲೂರು ರವಿ ಕುಮಾರ್, ದಲಿತ್ ಗಂಗಣ್ಣ,ಕುಂದರನಹಳ್ಳಿ ನಟರಾಜ್, ಬಿಕ್ಕೆಗುಡ್ಡ ಕೃಷ್ಣಪ್ಪ, ನಾಗಭೂಷಣ್, ಸಿಎಸ್ ಪುರ ಬೆಟ್ಟಸ್ವಾಮಿ, ಕೋಟೆ ಕಲ್ಲೇಶ್, ತೊಗರಿ ಘಟ್ಟ ರಂಗಸ್ವಾಮಿ, ನವೀನ್ ಕುಮಾರ್, ರಂಗಸ್ವಾಮಿ( ಪಾಂಡು ) ಆನಂದ್ ಮೂರ್ತಿ, ಶಿವ ಸ್ವಾಮಿ, ಮುಂತಾದವರಿದ್ದರು.