Sunday, 24th November 2024

ರಾಹುಲ್ ಪ್ರಕಾರ ಮುಸ್ಲಿಂ ಲೀಗ್ ಜ್ಯಾತ್ಯತೀತ !

ವೀಕೆಂಡ್ ವಿತ್ ಮೋಹನ್

camohanbn@gmail.com

ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲ ಏನಾದರೊಂದು ವಿವಾದಾತ್ಮಕ ಹೇಳಿಕೆ ನೀಡದೇ ಇರುವುದಿಲ್ಲ. ವಿದೇಶಿ ನೆಲದಲ್ಲಿ ಭಾರತದ ಪ್ರಜಾ ಪ್ರಭುತ್ವದ ಬಗ್ಗೆ ನಿರಂತರ ಋಣಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬಂದಿ ದ್ದಾರೆ. ರಾಹುಲ್ ಗಾಂಧಿಯನ್ನು ಪ್ರಧಾನಮಂತ್ರಿ ಮಾಡಬೇಕೆಂಬ ಹೆಬ್ಬಯಕೆಯಿಂದ ರಾಜೀವ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ, ವಿದೇಶಿ ನೆಲದಲ್ಲಿ ಆತನ ಉಪನ್ಯಾಸ ಏರ್ಪಡಿಸುತ್ತಾನೆ.

‘ಟಾಕಿಂಗ್ ಟಾಮ್’ ಮಾದರಿಯಲ್ಲಿ ರಾಹುಲ್ ಗಾಂಧಿಯನ್ನು ತಯಾರು ಮಾಡಿ. ಸಿನಿಮಾ ಸಂಭಾಷಣೆ ಬರೆದು ಕೊಟ್ಟು ಪ್ರಧಾನಮಂತ್ರಿ ಅಭ್ಯರ್ಥಿಯಂತೆ ಬಿಂಬಿಸುವ ಕೆಲಸ ೧೦ ವರ್ಷದಿಂದ ನಡೆಯುತ್ತಲೇ ಇದೆ. ಸ್ಯಾಮ್ ಪಿತ್ರೋಡಾ ನೀಡಿದ ಸ್ಕ್ರಿಪ್ಟ್‌ನ ಆಚೆಗೆ ಒಂದೇ ಒಂದು ಪ್ರಶ್ನೆ ಕೇಳಿದರೂ ರಾಹುಲ್ ಕಕ್ಕಾಬಿಕ್ಕಿಯಾಗುವುದು ನಿಶ್ಚಿತ. ಲಂಡನ್ನಿನ ಕಾರ್ಯಕ್ರಮವೊಂದರಲ್ಲಿ ‘ಭಾರತೀಯ ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎನ್ನುವ ಮೂಲಕ ಭಾರತ ವನ್ನು ೩೦೦ ವರ್ಷ ಭಾಋತವನ್ನಾಳಿದ ಬ್ರಿಟಿಷರ ಮುಂದೆ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದರು. ರಾಹುಲ್‌ರ ಬಹುತೇಕ ಕಾರ್ಯ ಕ್ರಮಗಳ ಆಯೋಜಕರು ಎಡಪಂಥೀಯ ಸಂಘಟನೆಗಳು ಅಥವಾ ಮುಸ್ಲಿಂ ಸಂಘಟನೆಗಳು. ಎಡಚರರಿಗೆ ಭಾರತೀಯತೆಯೆಂಬುದು ಅಲರ್ಜಿ.

ರಷ್ಯಾದ ಲೆನಿನ್ ಮತ್ತು ಸ್ಟಾಲಿನ್ ತತ್ವಗಳನ್ನು ಭಾರತದ ಮೇಲೆ ಹೇರಬೇಕೆಂಬ ಲೊಡ್ಡೆಗಳ ಆಸೆ ಇಂದಿಗೂ ಜೀವಂತವಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡಿರುವ ಎಡಚರರು ಇದೀಗ ಕಾಂಗ್ರೆಸ್ ಎಂಬ ‘ಕೊಡೆ’ಯಡಿ ಆಶ್ರಯ ಪಡೆದು ಉಳಿಯುವ ಯತ್ನ ಮಾಡುತ್ತಿದ್ದಾರೆ. ಒಂದೊಮ್ಮೆ ರಾಹುಲ್ ಪ್ರಧಾನಿಯಾದರೆ ಮತ್ತೊಮ್ಮೆ ಆಯಕಟ್ಟಿನ ಜಾಗಗಳಲ್ಲಿ ಅಂಡೂರಿ ಮತ್ತೊಮ್ಮೆ ಬಾಲ ಬಿಚ್ಚಬಹುದೆಂಬ ಮಹದಾಸೆಯಲ್ಲಿದ್ದಾರೆ ಲೊಡ್ಡೆಗಳು.

ಅದಕ್ಕಾಗೇ ರಾಹುಲ್ ಬಾಯಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗುತ್ತಿದೆಯೆಂಬ ಸುಳ್ಳನ್ನು ಪದೇ ಪದೇ ಹೇಳಿಸುತ್ತಿರುತ್ತಾರೆ.
ಇದೊಂದು ರೀತಿ ಮೌಖಿಕ ಭಯೋತ್ಪಾದನೆ. ತನ್ನ ಅಜ್ಜಿ ಇಂದಿರಾ ಗಾಂಧಿಯನ್ನು ಕೊಂದ ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಗಳ ಬಗ್ಗೆ ಮೃದು ಧೋರಣೆ ತೋರುವ ರಾಹುಲ್, ದೆಹಲಿಯ ರೈತ ಚಳವಳಿಯನ್ನು ಹೈಜಾಕ್ ಮಾಡಿದ್ದ ಅವರ ಪರವಾಗಿ ನಿಂತಿದ್ದರು. ಅಂದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿರಲಿಲ್ಲವೇ? ಅಮೆರಿಕದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ಬಗ್ಗೆ ಕೇಳಿದ ಪ್ರಶ್ನೆಗೆ
ಅದೊಂದು ‘ಜಾತ್ಯತೀತ’ ಪಕ್ಷವೆಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದರು.

೧೯೦೬ರಲ್ಲಿ ಇಂದಿನ ಬಾಂಗ್ಲಾದೇಶದ ಡಾಕಾದಲ್ಲಿ ಸ್ಥಾಪಿತವಾದ ಮುಸ್ಲಿಂ ಲೀಗ್‌ನ ಮೂಲ ಉದ್ದೇಶವೇ ಅಖಂಡ ಭಾರತದ ವಿಭಜನೆಯಾಗಿತ್ತು.
ಧರ್ಮದ ಆಧಾರದ ಮೇಲೆ ಭಾರತವನ್ನು ಒಡೆಯುವ ಹುನ್ನಾರಕ್ಕೆ ಬುನಾದಿ ಹಾಕಿದ್ದೇ ಅದು. ಮೊಹಮ್ಮದ್ ಅಲಿ ಜಿನ್ನಾ ೧೯೨೬ರಲ್ಲಿ ಮುಸ್ಲಿಂ ಲೀಗ್‌ಗೆ ಸೇರ್ಪಡೆಯಾಗಿದ್ದ. ಪಂಜಾಬ್ ಮತ್ತು ಸಿಂಧ್ ಭಾಗಕ್ಕೆ ಪ್ರತ್ಯೇಕ ಆಡಳಿತ ವ್ಯವಸ್ಥೆ, ನೂತನ ಆಡಳಿತಾಽಕಾರಿ ನೇಮಿಸಬೇಕೆಂದು ಮುಸ್ಲಿಂ ಲೀಗ್
ಕೇಳಿತ್ತು. ಅತ್ತ ಪೂರ್ವ ಬಂಗಾಳದ ಪ್ರಾಂತ್ಯಕ್ಕೂ ಪ್ರತ್ಯೇಕ ಆಡಳಿತ ವ್ಯವಸ್ಥೆ ನೀಡಬೇಕೆಂಬ ಬೇಡಿಕೆಯನ್ನಿಟ್ಟಿತ್ತು. ಈ ಬೇಡಿಕೆಗಳು ಮುಂದೊಂದು ದಿನ ಭಾರತವನ್ನು ವಿಭಜಿಸುವ ತಂತ್ರಗಾರಿಕೆಯ ಭಾಗ ಎಂಬ ಸೂಕ್ಷ್ಮವನ್ನು ಗ್ರಹಿಸುವುದರಲ್ಲಿ ನೆಹರು ವಿಫಲರಾಗಿದ್ದರು.

ಧರ್ಮದ ಆಧಾರದ ಮೇಲೆ ಮುಸಲ್ಮಾನರಿಗೆ ಪ್ರತ್ಯೇಕ ರಾಷ್ಟ್ರ ‘ಪಾಕಿಸ್ತಾನ’ ರಚನೆಯ ಅಷ್ಟೂ ಪ್ರಕ್ರಿಯೆಯಲ್ಲಿ ಉಂಟಾದ ಸಾವು ನೋವುಗಳಿಗೆ ನೇರ ಕಾರಣ ಆಲ್ ಇಂಡಿಯನ್ ಇಂಡಿಯನ್ ಮುಸ್ಲಿಂ ಲೀಗ್. ಪೂರ್ವ ಬಂಗಾಳದಲ್ಲಿ ಹಿಂದೂ ಮತ್ತು ಮುಸಲ್ಮಾನರ ನಡುವೆ ನಡೆದ ಗಲಭೆಯ ಹಿಂದಿನ ಕಾರಣವೂ ಇದೇ ಮುಸ್ಲಿಂ ಲೀಗ್. ಒಂದೇ ಧರ್ಮಕ್ಕೆ ಸೀಮಿತವಾಗಿರುವ ಪಕ್ಷ ಅದ್ಯಾವ ದಿಕ್ಕಿನಿಂದ ಜಾತ್ಯತೀತ ಪಕ್ಷವಾಗಿ ರಾಹುಲ್ ಗಾಂಧಿಗೆ ಕಾಣುತ್ತದೆ? ಭಾರತದಲ್ಲಿ ಒಂದು ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಸರಿ ಬಣ್ಣ ಕಂಡರೆ ಕೋಮುವಾದ, ಹಸಿರು ಬಣ್ಣ ಕಂಡರೆ ಜಾತ್ಯತೀತತೆ.ದೀಪಾವಳಿ ಹಬ್ಬದ
ಪಟಾಕಿಯಲ್ಲಿ ಕೋಮುವಾದ, ಬಕ್ರೀದ್ ಸಂದರ್ಭದ ಪ್ರಾಣಿಗಳ ವಧೆಯ ರಕ್ತದಲ್ಲಿ ಜಾತ್ಯತೀತತೆ ಎದ್ದು ಕಾಣುತ್ತದೆ.

ಮುಸಲ್ಮಾನರಿಗೆ ಅವರದೇ ಪ್ರತ್ಯೇಕ ರಾಷ್ಟ್ರವಾಗಿ ಪಾಕಿಸ್ತಾನ ಸಿಕ್ಕಾಗ, ಭಾರತದಲ್ಲಿ ಜಾತ್ಯತೀತತೆಯೆಂಬ ಪದಕ್ಕೆ ಅರ್ಥವಿರಲಿಲ್ಲ. ಸ್ವತಃ ನೆಹರುಗೆ ಸಂವಿಧಾನದಲ್ಲಿ ಜಾತ್ಯತೀತ ಪದ ವನ್ನು ಸೇರಿಸಲು ಇಷ್ಟವಿರಲಿಲ್ಲ. ಸಂವಿಧಾನ ರಚನೆಯ ಸಂದರ್ಭದಲ್ಲಿ ಚುನಾವಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ
ಮುಸಲ್ಮಾನರಿಗೆ ಪ್ರತ್ಯೇಕ ಮೀಸಲು ನೀಡುವ ವಿಚಾರ ಚರ್ಚೆಗೆ ಬಂದಾಗ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದರು.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ಮುಸಲ್ಮಾನರ ವೋಟಿಗಾಗಿ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ಜತೆ ಕೈ ಜೋಡಿಸಿದ್ದರು. ಕೇರಳದಲ್ಲಿ ಮುಸ್ಲಿಂ ಲೀಗ್ ಸಹಾಯವಿದ್ದರೆ ಮಾತ್ರ ಚುನಾವಣೆ ಗೆಲ್ಲಬಹುದೆಂಬ ಸತ್ಯ ರಾಹುಲ್‌ಗೆ ತಿಳಿದಿದೆ. ತನ್ನ ಮುತ್ತಾತ ನೆಹರು ಮುಸ್ಲಿಂ ಲೀಗ್ ಪರವಾಗಿ ಹೊಂದಿದ್ದ ಮೃದು ಧೋರಣೆಯನ್ನೇ ರಾಹುಲ್ ಕೂಡ ಹೊಂದಿzರೆ. ಹೀಗಾಗಿಯೇ ತನಗೆ ಸಹಾಯ ಮಾಡಿದ ಪಕ್ಷದ ಋಣ ತೀರಿಸುವ ಸಲುವಾಗಿ ಆ ಪಕ್ಷವನ್ನು ಜಾತ್ಯತೀತ ಪಕ್ಷವೆಂಬ ಹೇಳಿಕೆ ನೀಡಿದ್ದು. ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕೆಲ ನಾಯಕರು ಸ್ವಾತಂತ್ರ್ಯ ಪೂರ್ವದ ಮುಸ್ಲಿಂ ಲೀಗ್ ಹಾಗೂ ಸ್ವಾತಂತ್ರ್ಯಾ ನಂತರದ ಮುಸ್ಲಿಂ ಲೀಗ್ ಬೇರೆಯದ್ದೇ ಪಕ್ಷಗಳೆಂದು ಹೇಳಿದ್ದಾರೆ.

ಆದರೆ ಕಾಂಗ್ರೆಸ್ ವಿಷಯ ಬಂದಾಗ ಮಾತ್ರ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಕಾಂಗ್ರೆಸ್ ಎರಡೂ ಒಂದೇ ಎಂಬ ತರ್ಕವನ್ನು ಮುಂದಿ ಟ್ಟು ತಮ್ಮ ಇಬ್ಬಗೆಯ ನೀತಿ ಪ್ರದರ್ಶಿಸುತ್ತಾರೆ. ಈಗಿನ ಕಾಂಗ್ರೆಸ್‌ಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಘಟನೆಗೂ ಸಂಬಂಧ ವಿಲ್ಲವೆಂಬ ಸತ್ಯವನ್ನು ಹೇಳುವುದಿಲ್ಲ. ಅಖಂಡ ಭಾರತ ವಿಭಜನೆಯಾದ ನಂತರ ಜಿನ್ನಾ ನೇತೃತ್ವದ ‘ಆಲ್ ಇಂಡಿಯಾ ಮುಸ್ಲಿಂ ಲೀಗ್’ ಪಾಕಿಸ್ತಾನದಲ್ಲಿ ‘ಪಾಕಿಸ್ತಾನ ಮುಸ್ಲಿಂ ಲೀಗ್’ ಪಕ್ಷವಾಗಿ ಬದಲಾಯಿತು. ಭಾರತದಲ್ಲಿ ಉಳಿದುಕೊಂಡಂತಹ ‘ಆಲ್ ಇಂಡಿಯಾ ಮುಸ್ಲಿಂ ಲೀಗ್’ ನ ಸದಸ್ಯರು ಮಾರ್ಚ್ ೧೦, ೧೯೪೮ರಂದು ಮದ್ರಾಸಿನಲ್ಲಿ ಒಂದು ಸಭೆ ನಡೆಸಿದರು. ಈ ಸಭೆಯಲ್ಲಿ ಮೂಲ ಮುಸ್ಲಿಂ ಲೀಗ್‌ಗೆ (ಭಾರತದಲ್ಲಿ ಉಳಿದು ಕೊಂಡದ್ದ) ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ಎಂದು ಮರುನಾಮಕರಣ ಮಾಡಿದರು. ೧೯೫೧ರ ಸೆಪ್ಟೆಂಬರ್ ಒಂದರಂದು ನೂತನ ಹೆಸರಿನಲ್ಲಿ ಜಿನ್ನಾನ ಮುಸ್ಲಿಂ ಲೀಗ್ ಭಾರತದಲ್ಲಿ ಸ್ಥಾಪನೆಯಾಯಿತು.

ಕೇರಳದ ಹೆಚ್ಚಿನ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಈ ಪಕ್ಷ, ಕೇರಳ ಕಾಂಗ್ರೆಸಿನ ಅತ್ಯಂತ ಹಳೆಯ ಪಾಲುದಾರ. ಅಖಂಡ ಭಾರತದ ವಿಭಜನೆಯ ರೂವಾರಿ
ಯಾಗಿದ್ದಂತಹ ಜಿನ್ನಾ ನೇತೃತ್ವದ ಪಕ್ಷದ ಉತ್ತರಾಧಿಕಾರಿಯೇ ಈ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್. ಇಂತಹ ಪಕ್ಷದ ಜತೆಗೆ ಗುರುತಿಸಿ ಕೊಂಡಿರುವ ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ಅಮೆರಿಕದಲ್ಲಿ ಕುಳಿತು ಅಖಂಡ ಭಾರತದ ವಿಭಜಕರ ಪರವಾಗಿ ಮಾತನಾಡುತ್ತಾರೆ. ಇತಿಹಾಸ ವನ್ನು ತಿರುಚಿ ಹೇಳುವುದರಲ್ಲಿ ರಾಹುಲ್ ಹಿಂಬಾಲಕರು ಅಪ್ರತಿಮ ಕಲಾವಿದರು. ಸ್ಯಾಮ್ ಪಿತ್ರೋಡಾ, ರಾಹುಲ್ ಗಾಂಧಿಗೆ ನೀಡುವ ಸಂಭಾಷಣೆಗಳ ಪರವಾಗಿ ವಾದಿಸಲು ಮುಚ್ಚಿಟ್ಟ ಇತಿಹಾಸವನ್ನು ಮುನ್ನೈಗೆ ತರುವುದಿಲ್ಲ.

ತುರ್ತು ಪರಿಸ್ಥಿತಿಯ ನಂತರ ಎಡಚರರ ಸಲಹೆಯ ಮೇರೆಗೆ ಮುಸಲ್ಮಾನರ ಮತಬ್ಯಾಂಕಿಗಾಗಿ ಇಂದಿರಾ ಗಾಂಧಿ ಸಂವಿಧಾನವನ್ನು ತಿದ್ದುಪಡಿ ಮಾಡಿ ಜಾತ್ಯತೀತತೆಯೆಂಬ ಪದವನ್ನು ಸೇರಿಸಿಬಿಟ್ಟರು.ಅಂದಿನಿಂದ ಇಂದಿನವರೆಗೂ ಜಾತ್ಯತೀತತೆಯೆಂಬ ಪದವನ್ನು ಬಳಸಿಕೊಂಡು ಇಲ್ಲಸಲ್ಲದ ರಾಜಕೀಯ ಮಾಡುತ್ತಿರುವ ನೆಹರು ವಂಶಸ್ಥರು, ಮುಸಲ್ಮಾನರ ಓಲೈಕೆಯ ಸಂದರ್ಭದಲ್ಲಿ ಈ ಪದವನ್ನು ಬಳಸುತ್ತಲೇ ಇರುತ್ತಾರೆ. ಇದರ ಮುಂದುವರಿದ ಭಾಗ ವಾಗಿ ರಾಹುಲ್, ಅಮೆರಿಕದಲ್ಲಿ ನಡೆದ ಸಂವಾದದಲ್ಲಿ ಮುಸ್ಲಿಂ ಲೀಗ್ ಅನ್ನು ಸಂಪೂರ್ಣ ಜಾತ್ಯತೀತ ಪಕ್ಷವೆಂದು ವ್ಯಾಖ್ಯಾನಿಸಿದ್ದು. ಒಂದು ಧರ್ಮಕ್ಕೆ ಸೀಮಿತವಾಗಿ ತನ್ನ ಪಕ್ಷದ ಮೂಲ ಹೆಸರಿನ ಮುಸ್ಲಿಂ ಪದವಿಟ್ಟುಕೊಂಡಿರುವ ಪಕ್ಷ ಹೇಗೆ ಜಾತ್ಯತೀತವಾಗಲು ಸಾಧ್ಯ ? ಆದಿಗುರು ಶಂಕರಾ ಚಾರ್ಯರು ಹುಟ್ಟಿದ ದೇವರನಾಡು ಕೇರಳದಲ್ಲಿ ಹಿಂದೂಗಳ ಪರಿಸ್ಥಿತಿ ಹೀನಾಯವಾಗಿದೆ.

ನಡುರಸ್ತೆಯಲ್ಲಿ ಹಸುವನ್ನು ಕೊಂದು ತಿನ್ನುವ ಪರಿಸ್ಥಿತಿಯಿದೆ. ಶಂಕರಾಚಾರ್ಯರ ಹುಟ್ಟೂರು ‘ಕಾಲಡಿ’ಯ ರಸ್ತೆಯ ಇಕ್ಕೆಲಗಳಲ್ಲಿ ದನದ ಮಾಂಸ ಮಾರುವ ಹತ್ತಾರು ಅಂಗಡಿ ಗಳಿವೆ. ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ಜಾತ್ಯತೀತ ಪಕ್ಷವಾಗಿದ್ದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿದ್ದುಕೊಂಡು, ಮುಸ್ಲಿಂ ಧರ್ಮದ ಪರವಾಗಿ ನಿಲ್ಲುವ ರಾಜಕೀಯ ಪಕ್ಷವನ್ನು ರಾಹುಲ್ ಗಾಂಧಿ ಜಾತ್ಯತೀತವೆಂದರೆ ನಗುಬರುತ್ತದೆ ಅಮೆರಿಕದ ರಾಯಭಾರಿಯೇ ಭಾರತದ ಪ್ರಜಾ ಪ್ರಭುತ್ವದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿರುವಾಗ
ರಾಹುಲ್ ಗಾಂಧಿ ಮಾತ್ರ ಸ್ಯಾಮ್ ಪಿತ್ರೋಡಾ ಬರೆದು ಕೊಟ್ಟಿರುವ ಸಂಭಾಷಣೆಯನ್ನು ಕಷ್ಟ ಪಟ್ಟು ಓದುತ್ತಿದ್ದಾರೆ.

೧೯೪೭ರಲ್ಲಿ ಧರ್ಮದ ಆಧಾರದ ಮೇಲೆ ಹುಟ್ಟಿಕೊಂಡ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್’ ತನ್ನ ಹೆಸರಿನಲ್ಲಿಯೇ ಜಾತ್ಯತೀತತೆಯನ್ನು ತೆಗೆದು ಹಾಕಿದೆ. ಆದರೆ ಭಾರತದ ಸಂವಿಧಾನದಲ್ಲಿ ಇಂದಿರಾ ಗಾಂಧಿ ಜಾತ್ಯತೀತತೆ ಪದವನ್ನು ಸೇರಿಸಿzರೆ. ಎಡಚರರು ನೀಡುವ ಸಲಹೆಯನ್ನು ಯಥಾವತ್ತಾಗಿ ಪರಿಗಣಿಸಿದ್ದ ಕಾಂಗ್ರೆಸ್ ದೇಶದೆಡೆ ಮಕಾಡೆ ಮಲಗಿತ್ತು. ಕಮ್ಯುನಿಸ್ಟ್ ದೇಶ ಚೀನಾದಲ್ಲಿ ಭಾರತೀಯ ಮೂಲದ ಕಮ್ಯುನಿಸ್ಟರ ಆಟ ನಡೆಯುವುದಿಲ್ಲ.

ಹೆಸರಿಗೆ ಚೀನಾ ಕಮ್ಯುನಿಸ್ಟ್ ದೇಶವಾದರೂ ಅಲ್ಲಿರುವ ಬಿಲೇನಿಯರ್‌ಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ಅಖಂಡ ಭಾರತ ವಿಭಜನೆಯಾದ ನಂತರ ಭಾರತದಲ್ಲಿ ಉಳಿದುಕೊಂಡಂತಹ ಮುಸಲ್ಮಾನರು ಇಂದಿಗೂ ದೇಶದಲ್ಲಿ ಸುರಕ್ಷಿತವಾಗಿದ್ದಾರೆ. ಪಾಕಿಸ್ತಾನದ ಉದಯಕ್ಕೆ ಕಾರಣವಾಗಿ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷ ಸ್ಥಾಪನೆ ಮಾಡಿದ ಜಿನ್ನಾನ ದೇಶದಲ್ಲಿ ಉಳಿದುಕೊಂಡಿರುವ ಹಿಂದೂಗಳ ಪರಿಸ್ಥಿತಿ ದಯನೀಯವಾಗಿದೆ. ಅಖಂಡ ಭಾರತದ ವಿಭಜನೆಗೆ ಕಾರಣವಾದ ಪಕ್ಷ ಭಾರತದಲ್ಲಿ ರಾಹುಲ್ ಗಾಂಧಿಗೆ ಜಾತ್ಯತೀತವಾಗಿ ಕಾಣುತ್ತದೆ, ಆದರೆ ಅದರ ಪಾಕಿಸ್ತಾನದ ಭಾಗ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದರೂ ಪಾಕಿಸ್ತಾನದಲ್ಲಿ ಜಾತ್ಯತೀತತೆ ನೆನಪಾಗುವುದಿಲ್ಲ.

’ಪೌರತ್ವ ತಿದ್ದುಪಡಿ ಕಾಯ್ದೆ’ಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನದ ಹಿಂದೂಗಳು ಭಾರತ ಪೌರತ್ವ ಪಡೆಯುವುದನ್ನು ವಿರೋಧಿಸಿದ ರಾಹುಲ್, ಮುಸ್ಲಿಂ ಲೀಗ್ ಅನ್ನು ಸಂಪೂರ್ಣ ಜಾತ್ಯತೀತವೆನ್ನುತ್ತಾರೆ. ಭಾರತದಲ್ಲಿ ಈ ವ್ಯಕ್ತಿಯ ಮಾತುಗಳಿಗೆ ಸೊಪ್ಪು ಹಾಕುವವರಿಲ್ಲ ಹಾಗಾಗಿ ಸ್ಯಾಮ್ ಪಿತ್ರೋಡಾ ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿಗೆ ಅವಕಾಶ ಕಲ್ಪಿಸುವಲ್ಲಿ ನಿರತನಾಗಿರುತ್ತಾನೆ.